ಚಾಮರಾಜನಗರ: (Entertainment) ಮುಸ್ಲಿಂ ವಿದ್ಯಾರ್ಥಿನಿಯೋರ್ವಳು ಬುರ್ಖಾ ತೊಟ್ಟು ವೇದಿಕೆಯ ಮೇಲೆ ಮಾದಪ್ಪನ ಹಾಡನ್ನು ಹಾಡಿದ್ದಾಳೆ. ಆಕೆಯ ಹಾಡಿಗೆ ಜನರು ಮನಸೋತಿದ್ದು ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೌದು.. ಮುಸ್ಲಿಂ ವಿದ್ಯಾರ್ಥಿನೊಯೋರ್ವಳು ಬುರ್ಖಾ ತೊಟ್ಟು ಕಾಲೇಜಿನಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಮಾದಪ್ಪನ ಹಾಡು (Entertainment) ಹಾಡಿದ್ದು, ಆ ಹಾಡಿನ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು, ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಚಾಮರಾಜನಗರ ಭಾರತೀಯ ಪರಿವರ್ತನ ಸಂಘದಿಂದ ಆಯೋಜನೆ ಮಾಡಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಗಾರದಲ್ಲಿ “ಸೋಜುಗಾದ ಸೂಜಿ ಮಲ್ಲಿಗೆ ಮಾದೇವಾ ನಿಮ್ಮ ಮಂಡೆ ಮ್ಯಾಗೆ ದುಂಡಿ ಮಲ್ಲಿಗೆ” ಎಂದು ಚಾಮರಾಜನಗರ ಮಹಿಳಾ ಸರಕಾರಿ ಪದವಿ ಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿ ಉಮೇ ಬಸೀರಾಳ ಹಾಡಿ ನೆರೆದವರನ್ನು ರಂಜಿಸಿದ್ದಾಳೆ. ಮುಸ್ಲಿಂ ವಿದ್ಯಾರ್ಥಿನಿ ಬಸೀರಾಳ ಹಾಡಿಗೆ ಮನಸೋತು ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆಗಳನ್ನು ತಟ್ಟಿ ಪ್ರೋತ್ಸಾಹವನ್ನು ನೀಡಿದ್ದಾರೆ.
ಇದನ್ನೂ ಓದಿ : ಜಾಕ್ವೆಲಿನ್ ಫರ್ನಾಂಡೀಸ್ ವಿದೇಶಕ್ಕೆ ತೆರಳಲು ಅನುಮತಿ : ನಿರ್ದೇಶನಕ್ಕೆ ಇಡಿಗೆ ನ್ಯಾಯಾಲಯದ ಸೂಚನೆ
ಇದನ್ನೂ ಓದಿ : Besharam Rang:‘ಬೇಷರಂ ರಂಗ್’ ವಿರುದ್ಧ ದನಿಯೆತ್ತಿದ್ದ ಮತ್ತೊಬ್ಬ ಬಿಜೆಪಿ ನಾಯಕ : ಸಿನಿಮಾ ರಿಲೀಸ್ ಮಾಡಿದ್ರೆ ಪ್ರತಿಭಟನೆಯ ಎಚ್ಚರಿಕೆ
ಇದೀಗ ಆಕೆ ಹಾಡಿದ ಹಾಡಿನ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸಾಮಾಜಿಕ ಮಾದ್ಯಮಗಳಲ್ಲೂ ಕೂಡ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : kichcha sudeep : ‘ದರ್ಶನ್ಗೆ ಚಪ್ಪಲಿ ಎಸೆದಿದ್ದು ಮನಸ್ಸಿಗೆ ಘಾಸಿಯುಂಟುಮಾಡಿದೆ’ : ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಸುದೀಪ್
(Entertainment) A Muslim student sang Madappa’s song on stage wearing a burqa. Her song has been appreciated by the people.