ಗರ್ಭಾವಸ್ಥೆಯಲ್ಲಿದ್ದಾಗ ಹೆಣ್ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ತುಂಬ ಕಾಳಜಿ ವಹಿಸುತ್ತಾರೆ. ಇದು ಅಗತ್ಯ ಮತ್ತು ಅನಿವಾರ್ಯ ಕೂಡ. ಆದರೆ ಇಲ್ಲೊಬ್ಬಳು ನಟಿ (Jenni) ಮಾತ್ರ ಗರ್ಭಿಣಿ ಯಾಗಿದ್ದಾಗಲೂ ( Nanditha Jennifer ) ಅಂಡರ್ ವಾಟರ್ ನಲ್ಲಿ(Underwater Photoshoot) ಲಿಪ್ ಲಾಕ್ ಮಾಡೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ತಮಿಳು ಕಿರುತೆರೆ ನಟಿ ಹಾಗೂ ರಿಯಾಲಿಟಿ ಶೋದ ಸ್ಪರ್ಧಿ ಜೆನ್ನಿಫರ್ ( Nanditha Jennifer ) ಪ್ರಗ್ನೆಂಟ್ ಇದ್ದಾಗಲೂ ಸಾಹಸಮಯ ಪೋಟೋ ಶೂಟ್ ನಡೆಸುವ ಮೂಲಕ ಫ್ಯಾನ್ಸ್ ಗೆ ಸಪ್ರೈಸ್ ನೀಡಿದ್ದಾರೆ. .ಜೆನ್ನಿಫರ್ ತಮಿಳಿನ ಹಿರಿಯ ಕೊರಿಯೋಗ್ರಾಫರ್ ಚಿನ್ನಾ ಅವರ ಮಗಳು.

ಚಿನ್ನಾ ಅವರ ಹಲವು ಸಾಂಗ್ ಗಳಲ್ಲೂ ಜೆನ್ನಿಫರ್ ಹೆಜ್ಜೆ ಹಾಕಿದ್ದಾರೆ. 2008 ರಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ಜೆನ್ನಿಫರ್ ( Nanditha Jennifer ) ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಸದ್ಯ ಗರ್ಭಿಣಿಯಾಗಿರುವ ಜೆನ್ನಿಫರ್ ಕೆಂಪು ಗೌನ್ ನಲ್ಲಿ ನೀರಿನಾಳಕ್ಕೆ ಹಿಡಿದು ಪತಿಯೊಂದಿಗೆ ರೋಮ್ಯಾನ್ಸ್ ಮಾಡುತ್ತ ಪೋಟೋಶೂಟ್ ಗೆ ಪೋಸ್ ನೀಡಿದ್ದಾರೆ.
ಅಷ್ಟೇ ಅಲ್ಲ ಮೈನಡುಗಿಸುವ ಚಳಿಯಲ್ಲೂ ನೀರಿನಾಳದಲ್ಲಿ ಪತಿಯ ತುಟಿಗೆ ತುಟಿ ಬೆಸೆದು ಬೋಲ್ಡ್ ಆಂಡ್ ಬ್ಯೂಟಿಫುಲ್ ಪಿಕ್ ಶೇರ್ ಮಾಡಿದ್ದಾರೆ. ಗರ್ಭಿಣಿಯಾಗಿದ್ದಾಗ ಸಾಮಾನ್ಯ ವಾಗಿ ಜ್ವರ ಹಾಗೂ ಶೀತದಂತಹ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಅನಿವಾರ್ಯ. ಯಾಕೆಂದರೆ ಪ್ರಗೆನ್ಸಿಯಲ್ಲಿ ಅನಗತ್ಯವಾಗಿ ಔಷಧಿ ಕೊಡುವಂತಿಲ್ಲ.

ಆದರೆ ಈ ಎಲ್ಲ ಅಡೆತಡೆಗಳ ನಡುವೆಯೂ ಜೆನ್ನಿಫರ್ ಸಾಹಸ ಸೋಷಿಯಲ್‌ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಲವರು ಪೋಟೋ ಮೆಚ್ಚಿಕೊಂಡು ವಾವ್ ಎಂದು ಕಮೆಂಟ್ ಮಾಡಿದ್ದರೇ,ಇನ್ನು ಹಲವರು ಹೊಟ್ಟೆಯಲ್ಲಿ ಇನ್ನೊಂದು ಜೀವ ಇಟ್ಕೊಂಡು ಇಂಥಹ ಸಾಹಸ ಬೇಕಿತ್ತೇ ಎಂದು ಕಾಲೆಳೆದಿದ್ದಾರೆ. ಜೆನ್ನಿಫರ್ ಸೋಷಿಯಲ್ ಮೀಡಿಯಾ ದಲ್ಲಿ ಈ ಫೋಟೋಗಳನ್ನು ಶೇರ್ ಮಾಡಿದ ಕೆಲವೇ ಕ್ಷಣದಲ್ಲಿ 16 ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಒತ್ತಿದ್ದು ಕೆಲವರು ನಿಮ್ಮ ಅಭಿಮಾನಿ ಗಳಾಗಿ ಹೇಳ್ತಿದ್ದೇವೆ ಇಂಥಹ ಸಾಹಸ ಬೇಡ ಎಂದು ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ : ದುಬೈ ಈಜುಕೊಳದಲ್ಲಿ ಶ್ರೀಲಂಕಾ ಸುಂದರಿ : ಜಾಕ್ವಲಿನ್ ಹಾಟ್ ಪೋಟೋಗೆ ಮರುಳಾದ ಫ್ಯಾನ್ಸ್
ಇದನ್ನೂ ಓದಿ : Expose ಬಳಿಕ ಎಣ್ಣೆ ಹಾಡು : ಡಿಂಪಲ್ ಕ್ವೀನ್ ಅವತಾರಕ್ಕೆ ಮೆಚ್ಚಿದ ಫ್ಯಾನ್ಸ್
(Nanditha Jennifer Pregnancy Photo Shoot Bakkiyalakshmi Actress Jenni Underwater Photoshoot Lip lock Photos Go Viral)