ಮಂಗಳವಾರ, ಏಪ್ರಿಲ್ 29, 2025
HomeCinemaDisha Madan : ಬೇಬಿ ಬಂಪ್ ಜೊತೆ ಹಾಟ್ ಪೋಟೋಶೂಟ್ : ಸೋಷಿಯಲ್ ಮೀಡಿಯಾ ಗಮನ...

Disha Madan : ಬೇಬಿ ಬಂಪ್ ಜೊತೆ ಹಾಟ್ ಪೋಟೋಶೂಟ್ : ಸೋಷಿಯಲ್ ಮೀಡಿಯಾ ಗಮನ ಸೆಳೆದ ದಿಶಾ ಮದನ್

- Advertisement -

ಅವಕಾಶಗಳಿಗಾಗಿ ನಟಿಯರು ಹಾಟ್ ಹಾಟ್ ಪೋಟೋಶೂಟ್ ಮಾಡಿಸೋದು ವಾಡಿಕೆ. ಆದರೆ ಇಲ್ಲೊಬ್ಬ ನಟಿ ಮಾತ್ರ ಪ್ರಗೆನ್ಸಿ ಪೋಟೋಶೂಟ್ ನಲ್ಲೂ ಹಾಟ್ ಹಾಟ್ ಪೋಸ್ ಕೊಡುವ ಮೂಲಕ ಸುದ್ದಿಯಾಗಿದ್ದಾರೆ. ಸ್ಯಾಂಡಲ್ ವುಡ್ ನ ಫ್ರೆಂಚ್ ಬಿರಿಯಾನಿ ಸುಂದರಿ ದಿಶಾ ಮದನ್ (Disha Madan) ಹೀಗೆ ಮಾದಕವಾಗಿ ತಾಯ್ತನದ ಪೋಟೋ ಶೇರ್ ಮಾಡಿದ ಸುಂದರಿ.

ಫ್ರೆಂಚ್ ಬಿರಿಯಾನಿ ಸಿನಿಮಾದ ಮೂಲಕ ಮನೆಮಾತಾದ ನಟಿ ದಿಶಾ ಮದನ್ ಎರಡನೇ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಹೀಗಾಗಿ ಎರಡನೇ ತಾಯ್ತನದ ಸಂಭ್ರಮದಲ್ಲಿರೋ ದಿಶಾ ಮದನ್ ಸಖತ್ ಹಾಟ್ ಪೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಟೋಸ್ ಶೇರ್ ಮಾಡಿದ್ದಾರೆ. ದಿಶಾ ಮದನ್ ಯೆಲ್ಲೋ ಡ್ರೆಸ್‌ನಲ್ಲಿ ತಾಯ್ತನದ ಕಳೆಯೊಂದಿಗೆ ಮಿಂಚಿದ್ದು,ಬಾಬ್ ಹೇರ್ ಗಾಗಲ್ಸ್ ಜೊತೆ ಸಖತ್ ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ನಟಿ ದಿಶಾ ಮದನ್ ಶಶಾಂಕ್ ವಾಸುಕಿ ಗೋಪಾಲ್ ಅವರನ್ನು 2017 ರಲ್ಲಿ ಮದುವೆಯಾಗಿದ್ದಾರೆ. ಈ ದಂಪತಿಗೆ 2019 ರಲ್ಲಿ ವಿಹಾನ್ ಎಂಬ ಗಂಡು ಮಗು ಜನಿಸಿದೆ. 2020 ರಲ್ಲಿ ದಂಪತಿ ಹೊಸಮನೆ ಕಟ್ಟಿ ಗೃಹಪ್ರವೇಶ ನಡೆಸಿದ್ದರು. ಸದ್ಯ ದಿಶಾ ಮೋಹನ್ ಎರಡನೇ ಮಗುವಿನ ನೀರಿಕ್ಷೆಯಲ್ಲಿದ್ದು, ಈ ಖುಷಿ ವಿಚಾರವನ್ನು ದಿಶಾ ಮದನ್ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

ಮಾರ್ಚ್ 22 ಕ್ಕೆ ಕಾಯುತ್ತಿರುವೆ. ಮೂರರಿಂದ ನಾಲ್ವರಾಗುತ್ತಿದ್ದೇವೆ. 2022 ರಲ್ಲಿ ನನ್ನ ಮೊದಲ ಮಗ ಅಣ್ಣನಾಗುತ್ತಾನೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಸದ್ಯ ದಿಶಾ ಮದನ್ ಹಾಟ್ ಪೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಅಭಿಮಾನಿಗಳು ನೆಟ್ಟಿಗರು ಕೂಡ ಕಮೆಂಟ್ ಮಾಡೋ ಮೂಲಕ ದಿಶಾಗೆ ಮೆಚ್ಚುಗೆ ಸೂಚಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸದಾ ಡಬ್ ಸ್ಮ್ಯಾಶ್ ಮೂಲಕ ಕ್ರಿಯಾಶೀಲವಾಗಿರುವ ದಿಶಾ ಮದನ್, ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಆಗಾಗ ಕಾಣಿಸಿಕೊಳ್ಳುವ ಮೂಲಕ ತಮ್ಮದೇ ಆದ ಅಭಿಮಾನಿ ವರ್ಗವನ್ನು ಸಂಪಾದಿಸಿಕೊಂಡಿದ್ದಾರೆ. ಅಲ್ಲದೇ ದಿಶಾ ಮದನ್ ಡ್ಯಾನ್ಸಿಂಗ್ ರಿಯಾಲಿಟಿ ಶೋ ಮೂಲಕವೂ ಪ್ರಸಿದ್ಧಿ ಗಳಿಸಿದ್ದರು. ಹಲವು ಭಾರಿ ತಮ್ಮ ಪುತ್ರನೊಂದಿಗೆ ಪೋಟೋ ಶೂಟ್ ನಡೆಸುವ ಮೂಲಕವೂ ಗಮನ ಸೆಳೆದಿದ್ದರು.

ಇದನ್ನೂ ಓದಿ : ಮಾಲ್ಡೀವ್ಸ್ ನಲ್ಲಿ ಮತ್ತೇರಿಸಿದ ಮಾಳವಿಕಾ : ಬೋಲ್ಡ್ ಬಿಕನಿ‌ ವಿಡಿಯೋ ವೈರಲ್

ಇದನ್ನೂ ಓದಿ : ಕನ್ನಡದ ಬಳಿಕ ತೆಲುಗಿಗೆ ಬಡವ ರಾಸ್ಕಲ್ : ಡಾಲಿ ಧನಂಜಯ್ ಸಿನಿಮಾ ಪೋಸ್ಟರ್ ರಿಲೀಸ್

( Hot Photoshoot With Baby Bump, Social Media Attention Disha Madan)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular