ಬಾಲಿವುಡ್ ನಟಿಮಣಿಯರು ಅಂದ್ರೆನೇ ಹಾಗೇ ಮಾತುಕತೆ ಎಲ್ಲವೂ ಬೋಲ್ಡ್ ಬೋಲ್ಡ್. ಸೋಷಿಯಲ್ ಮೀಡಿಯಾದಲ್ಲಿ ತುಂಡು ಬಟ್ಟೆಯಿಂದಲೇ ಪಡ್ಡೆಗಳ ನಿದ್ದೆಗೆಡಿಸುವ ಸುಂದರಿಯರಿಗೆ ಸದಾ ಒಂದಿಲ್ಲೊಂದು ಪೋಟೋ,ವಿ ಡಿಯೋದ ಮೂಲಕ ಚರ್ಚೆಯಲ್ಲಿರಬೇಕೆಂಬ ಎಂಬ ಆಸೆ. ಇದಕ್ಕೆ ಬಾಲಿವುಡ್ ನಟಿ ಇಶಾ ಗುಪ್ತಾ ಕೂಡ ಹೊರತಲ್ಲ. ಸದಾ ಬೋಲ್ಡ್ ಮಾತಿನಿಂದ ಸುದ್ದಿಯಾಗ್ತಿದ್ದ ಇಶಾ ಗುಪ್ತಾ ಈ ಭಾರಿ ಬಾತ್ ರೂಂನಲ್ಲಿ ( Esha Gupta bathroom video)ಸೆಲ್ಪಿ ಮಾಡೋ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದ್ದಾರೆ.

2007 ರ ಮಿಸ್ ಇಂಡಿಯಾ ಇಂಟರ್ ನ್ಯಾಶನಲ್ ಗೌರವಕ್ಕೆ ಪಾತ್ರವಾದ ಈಶಾ ಗುಪ್ತಾ ತಮ್ಮ ಮಾದಕ ಮೈಮಾಟದಿಂದಲೇ ಚಿತ್ರಪ್ರೇಮಿಗಳ ಮನಗೆದ್ದವರು. ಒಂದಕ್ಕಿಂತ ಒಂದು ಬೋಲ್ಡ್ ಪೋಟೋಶೂಟ್ ನಲ್ಲಿ ಸೋಷಿಯಲ್ ಮೀಡಿಯಾದ ಗಮನಸೆಳೆಯೋ ಈಶಾ ಗುಪ್ತಾ ಈ ಭಾರಿ ಇನ್ನೊಂದು ಹೆಜ್ಜೆ ಮುಂದೇ ಹೋಗಿದ್ದಾರೆ.

ಬಿಕನಿಯಲ್ಲಿ ಬಾತ್ ರೂಂ ಸೇರಿದ ಸುಂದರಿ ಅಲ್ಲಿಂದಲೇ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ. ಮಾದಕಮೈಮಾಟವಿದ್ದರೂ ಹೆಚ್ಚಾಗಿ ಕ್ರೈಂ ಹಾಗೂ ಥ್ರಿಲ್ಲರ್ ಪಾತ್ರಗಳಲ್ಲೇ ಕಾಣಿಸಿಕೊಂಡ ಈಶಾ ಗುಪ್ತಾ ಎಲ್ಲದಕ್ಕಿಂತ ಹೆಚ್ಚು ತಮ್ಮ ಬೋಲ್ಡ್ ನಡೆ ಯಿಂದಲೇ ಗುರುತಿಸಿ ಕೊಂಡವರು.

ಸೋಷಿಯಲ್ ಮೀಡಿಯಾದಲ್ಲಿ ಈಶಾ ಗುಪ್ತಾ ಅವರ ಮಾದಕ ಪೋಟೋಗಳು ಸದಾ ಸುದ್ದಿ ಮಾಡುತ್ತಲೇ ಇರುತ್ತವೆ. ಇನ್ ಸ್ಟಾಗ್ರಾಂನಲ್ಲಿ 5.9 ಮಿಲಿಯನ್ ಫಾಲೋವರ್ಸ್ ಹೊಂದಿರೋ ಈಶಾ ಗುಪ್ತಾ, ನಟಿಯಾಗಿ ಗುರುತಿಸಿಕೊಂಡಿದ್ದರೂ ತಮ್ಮನ್ನು ತಾವು ಅರ್ತ್ ಎಡ್ವಕೇಟ್ ಎಂದು ಕರೆದುಕೊಂಡಿದ್ದಾರೆ.

ಕಪ್ಪು, ಗುಲಾಬಿ ಹೂಗಳಿರೋ ಬಿಕನಿಯಲ್ಲಿ ಈಶಾ ಗುಪ್ತಾ ಬಾತ್ ರೂಂನಲ್ಲಿ ರೆಕಾರ್ಡ್ ಮಾಡಿರೋ ಸೆಲ್ಫಿ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಲೈಕ್ಸ್ ಬಿದ್ದಿದ್ದರೇ ಸಾವಿರಾರು ಜನರು ಈಶಾ ಮೈಮಾಟಕ್ಕೆ ವಾವ್ ಎಂದು ಕಮೆಂಟ್ ಮಾಡಿದ್ದಾರೆ. ಹಿಂದಿಯಲ್ಲಿ ಜನ್ನತ್ 2 ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ ಈಶಾ ಗುಪ್ತಾ ಇದುವರೆಗೂ ತೆಲುಗು,ತಮಿಳು ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ 2019 ರಲ್ಲಿ ಶೂಟಿಂಗ್ ಮುಗಿಸಿದ ದೇಸಿ ಮ್ಯಾಜಿಕ್ ಹಾಗೂ ಹೇರಾ ಪೇರಿ ಎರಡು ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ.
ಇದನ್ನೂ ಓದಿ: ಚೆನ್ನಾಗಿ ಮುತ್ತು ಕೊಡೋ ಗಂಡಸರು ಇಷ್ಟ: ಬಾಲಿವುಡ್ ಹಾಟ್ ಬಾಂಬ್ ಮಲೈಕಾ ಬಿಚ್ಚುಮಾತು
ಇದನ್ನೂ ಓದಿ : ಬಾಯ್ ಪ್ರೆಂಡ್ ಕೈಕೊಟ್ಟಿದ್ದಕ್ಕೆ ನಾನು ಕಡಿಮೆ ಬಟ್ಟೆ ಹಾಕೋದು: ಬಾಲಿವುಡ್ ನಟಿಯ ಬೋಲ್ಡ್ ಆನ್ಸರ್
ಇದನ್ನೂ ಓದಿ : ಹಾಟ್ ಆಂಡ್ ಬೋಲ್ಡ್ ಪೋಟೋಶೂಟ್ ನಲ್ಲಿ ಮಿಂಚಿದ ನಟಿ ಪ್ರಿಯಾಂಕಾ ತಿಮ್ಮೇಶ್
( Esha Gupta again created a ruckus, shared such a bathroom video that the hearts of the fans arose viral video )