ಸೋಮವಾರ, ಏಪ್ರಿಲ್ 28, 2025
HomeCinemaMeghana Raj Sarja Jewelry : ಮೇಘನಾ ರಾಜ್‌ ಸರ್ಜಾ ಜ್ಯುವೆಲ್ಲರಿ ಕಲೆಕ್ಷನ್ ನಲ್ಲಿ ಅಪರೂಪದ...

Meghana Raj Sarja Jewelry : ಮೇಘನಾ ರಾಜ್‌ ಸರ್ಜಾ ಜ್ಯುವೆಲ್ಲರಿ ಕಲೆಕ್ಷನ್ ನಲ್ಲಿ ಅಪರೂಪದ ಆಭರಣ ಯಾವುದು ? ಕುಟ್ಟಿಮಾ ಕೊಟ್ರು ಡಿಟೇಲ್ಸ್

- Advertisement -

Meghana Raj Sarja Jewelry : ಸೆಲೆಬ್ರೆಟಿ ಆಗಲಿ, ಜನಸಾಮಾನ್ಯರಾಗಲಿ ಬದುಕಿನಲ್ಲಿ ಎಲ್ಲಾರಿಗೂ ಒಂದು ಮರೆಯಲಾರದ ಗಿಫ್ಟ್ ಅನ್ನೋದು ಇದ್ದೇ ಇರುತ್ತೆ. ಅದು ವಸ್ತು,ಆಭರಣ, ಕಾರು, ಬೈಕ್, ಸ್ಥಳ ಏನು ಬೇಕಾದರೂ ಇರಬಹುದು. ಅದರ ಬೆಲೆಗಿಂತ ಮನಸ್ಸಿಗೆ ಹತ್ತಿರವಾದವರ ಪ್ರೀತಿ ಮುಖ್ಯ. ಅಂತಹುದೇ ಮರೆಯಲಾಗದ ಗಿಫ್ಟ್ ಬಗ್ಗೆ ನಟಿ ಮೇಘನಾ ರಾಜ್ ಭಾವುಕರಾಗಿ ಮಾತನಾಡಿದ್ದಾರೆ.

ಹೌದು ಇತ್ತೀಚಿಗೆ ನಟಿ ಮೇಘನಾ ರಾಜ್ ನಟನೆಯ ಜೊತೆ ಜೊತೆಗೆ ಜಾಹೀರಾತಿನಲ್ಲೂ ಹೆಚ್ಚಾಗಿ ಕಾಣಿಸಿಕೊಳ್ತಿದ್ದಾರೆ.‌ ಅದರಲ್ಲೂ ಪಕ್ಕಾ ಫ್ಯಾಮಿಲಿ ಹುಡುಗಿಯಂತಿರೋ ಮೇಘನಾ ರಾಜ್ ಚಿನ್ನಾಭರಣದ ಜಾಹೀರಾತಿಗೆ ಸರಿ ಹೊಂದುತ್ತಾರೆ. ಹೀಗಾಗಿ ಸಾಕಷ್ಟು ಚಿನ್ನಾಭರಣದ ಜಾಹೀರಾತಿನಲ್ಲಿ ಕಾಣಿಸಿಕೊಳ್ತಿದ್ದಾರೆ. ಮಾತ್ರವಲ್ಲ ಮೊನ್ನೆ ಮೊನ್ನೆ ಮೇಘನಾ ರಾಜ್ ಬೆಂಗಳೂರಿನಲ್ಲಿ ನಡೆದ ಅದ್ದೂರಿ ಚಿನ್ನಾಭರಣ ಶೋದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ : ನನ್ನ ತಾಳ್ಮೆ ಗೂ ಮಿತಿ ಇದೆ…! ದಯವಿಟ್ಟು ನಿಲ್ಲಿಸಿ…! ಮೇಘನಾ ರಾಜ್ ಈ ಆಕ್ರೋಶ ಕ್ಕೆ ಕಾರಣ ಏನು ಗೊತ್ತಾ..?!

ಈ ವೇಳೆ ನಟಿ ಮೇಘನಾ ರಾಜ್ ತಮ್ಮ ಬದುಕಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಾವು ಚಿಕ್ಕಂದಿನಿಂದಲೂ ನೋಡುತ್ತ ಬಂದ ಜ್ಯುವೆಲ್ಸ್ ಆಫ್ ಇಂಡಿಯಾಗೆ ತಾವು ಜ್ಯುವೆಲ್ಸ್ ಬ್ರ್ಯಾಂಡ್ ಆಂಬಾಸಿಡರ್ ಆಗಿರೋದು ಖುಷಿ ತಂದಿದೆ ಎಂದಿದ್ದಾರೆ. ನಾನು ಚಿಕ್ಕಂದಿನಿಂದಲೂ ಜ್ಯುವೆಲ್ಸ್ ಆಫ್ ಇಂಡಿಯಾ ಮೇಳದಲ್ಲಿ ಭಾಗಿಯಾಗುತ್ತಾ, ಆಭರಣಗಳನ್ನು ಖರೀದಿಸುತ್ತ ಬಂದಿದ್ದೇನೆ. ಪ್ರತಿವರ್ಷ ವೂ ಹೊಸ ಹೊಸ ಬಗೆಯ ಆಭರಣದ ಡಿಸೈನ್ ಸಿಗೋದು ಜ್ಯುವೆಲ್ಸ್ ಆಫ್ ಇಂಡಿಯಾದ ವೈಶಿಷ್ಟ್ಯತೆ. ಆದರೆ ಈಗ ನಾನೇ ಅದರ ಬ್ರ್ಯಾಂಡ್ ಅಂಬಾಸಿಡರ್ ಆಗಿರೋದು ನನಗೆ ನಿಜಕ್ಕೂ ಖುಷಿ ಹಾಗೂ ಘನತೆಯ ಸಂಗತಿ ಎಂದಿದ್ದಾರೆ. ಇದೇ ವೇಳೆ ನಿಮ್ಮ ಬಳಿ ಇರೋ ಜ್ಯುವೆಲ್ಸ್ ಕಲೆಕ್ಷನ್ ಪೈಕಿ ನಿಮ್ಮ ಮರೆಯಲಾಗದ ಅಥವಾ ಅತಿ ವಿಶೇಷವಾದ ಜ್ಯುವೆಲ್ಸ್ ಯಾವುದು ಎಂಬ ಪ್ರಶ್ನೆಗೆ ಭಾವುಕರಾಗಿ ಉತ್ತರಿಸಿದ್ದಾರೆ.

ಕೆಲವೊಂದು ಆಭರಣಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕೊಟ್ಟ ವ್ಯಕ್ತಿ ಮತ್ತು ಸಂದರ್ಭಗಳು ಮುಖ್ಯವಾಗುತ್ತದೆ. ಅಂತಹ ಗಿಫ್ಟ್ ಗಳಲ್ಲಿ ಒಂದು ಡೈಮೆಂಡ್ ನೆಕ್ಲೆಸ್. ನಮ್ಮ ಒಂದು ವರ್ಷದ ವೆಡ್ಡಿಂಗ್ ಆನ್ಯಿವರ್ಸರಿ ಚಿರು ಇದನ್ನು ನನಗಾಗಿ ಗಿಫ್ಟ್ ಮಾಡಿದ್ದರು. ಅದು ನನ್ನ ಹತ್ತಿರ ಇರುವ ಅತ್ಯಂತ ಬೆಲೆಬಾಳುವ ಗಿಫ್ಟ್ ಎಂದು ಮೇಘನಾ ಭಾವುಕರಾಗಿ ಹೇಳಿದ್ದಾರೆ. ಸದ್ಯ ಮೇಘನಾ ಸರ್ಜಾ ಪನ್ನಗಾಭರಣ ನಿರ್ದೇಶನದ ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದು, ಇದೇ ಚಿತ್ರದಲ್ಲಿ ಮೇಘನಾಗೆ ನಟ ಪ್ರಜ್ವಲ್ ದೇವರಾಜ್ ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ : Meghana Raj Sarja : ಮೊದಲು ಸ್ಕೂಲ್, ಆಮೇಲೆ‌ ನಟನೆ: ಮಗ ರಾಯನ್ ಸರ್ಜಾ ಬಗ್ಗೆ ತಮ್ಮ ಕನಸು ಹಂಚಿಕೊಂಡ ನಟಿ ಮೇಘನಾ ರಾಜ್ ಸರ್ಜಾ

Exclusive rare jewel in Meghana Raj Sarja Jewelry Collection

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular