ಸೋಮವಾರ, ಏಪ್ರಿಲ್ 28, 2025
HomeCinemaEye Donate Just Misscall : ಮಿಸ್ ಕಾಲ್ ಕೊಡಿ, ನೇತ್ರದಾನಕ್ಕೆ ಹೆಸರು ನೋಂದಾಯಿಸಿ :...

Eye Donate Just Misscall : ಮಿಸ್ ಕಾಲ್ ಕೊಡಿ, ನೇತ್ರದಾನಕ್ಕೆ ಹೆಸರು ನೋಂದಾಯಿಸಿ : ಪುನೀತ್ ಪುಣ್ಯತಿಥಿಯಂದು ವಿಭಿನ್ನ ಪ್ರಯತ್ನ

- Advertisement -

ಪುನೀತ್ ರಾಜ್ ಕುಮಾರ್ ಕನ್ನಡದ,ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ರಾಜ್ ಕುಮಾರ್ ( Puneeth Raj Kumar ). ಕಾಯ ಅಳಿದರೂ ಕೀರ್ತಿ ಉಳಿಸಿಕೊಂಡ ರಿಯಲ್ ಹೀರೋ. ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಎರಡು ತಿಂಗಳು ಕಳೆದಿದ್ದರೂ ಇನ್ನು ಪುನೀತ್ ಅಪ್ಪುವಾಗಿ ಮನೆಮಗನಂತೆ ನಾಡಿನ ಮನೆ ಮನೆಯಲ್ಲೂ ಜೀವಂತವಾಗಿದ್ದಾರೆ. ಇಂದು ಪುನೀತ್ ಎರಡನೇ ತಿಂಗಳ ಪುಣ್ಯತಿಥಿ ನಡೆದಿದ್ದು ಈ ವೇಳೆ ನೇತ್ರದಾನಕ್ಕೆ ಪ್ರೇರೇಪಿಸುವ ಅಪರೂಪದ ಪ್ರಯತ್ನ(Eye Donate Just Misscall) ನಡೆದಿದೆ.

ಇಂದಿಗೆ ಪುನೀತ್ ರಾಜ್ ಕುಮಾರ್ ಕರುನಾಡನ್ನು ಅಗಲಿ ಎರಡು ತಿಂಗಳು ಕಳೆದಿದೆ. ಆದರೂ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ಚಿರಸ್ಥಾಯಿಯಾಗಿದ್ದಾರೆ. ಇಂದು ಪುನೀತ್ ಸಮಾಧಿ ಬಳಿ ಅಪ್ಪು ಎರಡನೇ ತಿಂಗಳ ತಿಥಿ ನಡೆಯಿತು. ಈ ವೇಳೆ ಸಮಾಧಿಗೆ ಭೇಟಿ ನೀಡಿದ ಪುನೀತ್ ಪತ್ನಿ ಅಶ್ವಿನಿ ಪುನೀತ್ ಹಾಗೂ ಪುತ್ರಿಯರಾದ ಧೃತಿ ಹಾಗೂ ವಂದಿತಾ, ಶಿವಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಈ ವೇಳೆ ಪುನೀತ್ ಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಇಟ್ಟು ಆರತಿ ಬೆಳಗಿ ಪೂಜೆ ಸಲ್ಲಿಸಲಾಯಿತು. ಇನ್ನುಪುನೀತ್ ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ತಮ್ಮ ನೇತ್ರಗಳನ್ನು ದಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪುನೀತ್ ಪುಣ್ಯತಿಥಿಯಂದು ನೇತ್ರದಾನಕ್ಕೆ ಜನರನ್ನು ಪ್ರೇರೇಪಿಸುವ ಹೊಸ ಪ್ರಯತ್ನವೊಂದಕ್ಕೆ ರಾಘವೇಂದ್ರ್ ರಾಜ್ ಕುಮಾರ್ ಹಾಗೂ ನಾರಾಯಣ ನೇತ್ರಾಲಯದ ಭುಜಂಗ ಶೆಟ್ಟಿ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಪುನೀತ್ ನಿಧನದ ಬಳಿಕ ರಾಜ್ಯದಲ್ಲಿ ನೇತ್ರದಾನದ ಬಗ್ಗೆ ವಿಶೇಷ ಆಸಕ್ತಿ ಹೆಚ್ಚಿದೆ. ಆದರೆ ಈಗ ಕೊರೋನಾ ಮತ್ತೆ ಹೆಚ್ಚುತ್ತಿರುವುದರಿಂದ ಜನರು ದೈಹಿಕವಾಗಿ ಆಸ್ಪತ್ರೆಗೆ ಭೇಟಿ ನೀಡುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಮಿಸ್ ಕಾಲ್ ನೀಡಿ ನೇತ್ರದಾನಕ್ಕೆ ನೋಂದಣಿ ಮಾಡುವ ಸಹಾಯವಾಣಿಯನ್ನು ಲೋಕಾಪರ್ಣೆಗೊಳಿಸಲಾಯಿತು. 8884018800 ದೂರವಾಣಿಗೆ ಮಿಸ್ ಕಾಲ್ ಕೊಟ್ಟರೇ, ನೇತ್ರದಾನದ ಫಾರ್ಂ ನಿಮಗೆ ಸಿಗುತ್ತದೆ. ಅದನ್ನು ತುಂಬುವ ಮೂಲಕ‌ನೀವು ನೇತ್ರದಾನಕ್ಕೆ ರಜಿಸ್ಟರ್ ಮಾಡಿಕೊಳ್ಳಬಹುದು. ಇದರ ಜೊತೆಗೆ ನೇತ್ರದಾನದ ಸರ್ಟಿಫಿಕೇಟ್ ಕೂಡ ನೀಡಲಾಗುತ್ತದೆ.

ಈ ಬಗ್ಗೆ ಮಾತನಾಡಿದ ರಾಘವೇಂದ್ರ್ ರಾಜ್ ಕುಮಾರ್ ಪುನೀತ್ ನಿಧನದ ಬಳಿಕ ನೇತ್ರದಾನದ ಬಗ್ಗೆ ಜಾಗೃತಿ ಮೂಡಿರುವುದು ಉತ್ತಮ. ಇದನ್ನು ನಾವೆಲ್ಲರೂ ಪಾಲಿಸಬೇಕು. ನಾವು ನೇತ್ರದಾನ ಮಾಡುವುದು ಮಾತ್ರವಲ್ಲ. ಈ ವಿಚಾರವನ್ನು ತಮ್ಮವರಿಗೆ ತಿಳಿಸಿರಬೇಕು. ಇದರಿಂದ ನಿಧನ ವೇಳೆ ನೇತ್ರದಾನಕ್ಕೆ ಅನುಕೂಲವಾಗಲಿದೆ ಎಂದರು. ನೇತ್ರದಾನಕ್ಕೆ ಮಿಸ್ ಕಾಲ್ ಅಭಿಯಾನದ ವೇಳೆ ನಾರಾಯಣ ನೇತ್ರದಾಮದ ಡಾ.ಭುಜಂಗ ಶೆಟ್ಟಿ ಪಾಲ್ಗೊಂಡಿದ್ದರು.

ಇದನ್ನೂ ಓದಿ : Puneeth Rajkumar : 2 ಕಣ್ಣುಗಳ ಮೂಲಕ ನಾಲ್ಕು ಮಂದಿಗೆ ದೃಷ್ಟಿ ನೀಡಿದ ಪುನೀತ್‌ ರಾಜ್‌ ಕುಮಾರ್‌

ಇದನ್ನೂ ಓದಿ : ಸಾವಿನಲ್ಲೂ ಸಾರ್ಥಕತೆ ಮೆರೆದ ಅಪ್ಪು : ತಂದೆಯಂತೆಯೇ ನೇತ್ರದಾನ ಮಾಡಿದ ಪುನೀತ್‌ ರಾಜ್‌ ಕುಮಾರ್‌

(Eye Donate Just Misscall : donate your eyes by just giving a missed call, Puneeth Raj Kumar Birthday)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular