ಹಾವೇರಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Punith Rajkumar) ಅವರು ನಮ್ಮನ್ನು ಅಗಲಿ 3 ವರ್ಷಗಳಾದ್ರೂ ಇನ್ನು ಕೂಡ ಅವರ ಅಭಿಮಾನಿಗಳು ಮಾತ್ರ ಅವರನ್ನು ಪ್ರತಿ ದಿನ ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ. ಬೇರೆ ಬೇರೆ ರೀತಿಯಲ್ಲಿ ಅಪ್ಪುವಿನ ಅಭಿಮಾನಿಗಳು ಅವರ ಮೇಲೆ ಇಂದಿಗೂ ಪ್ರೀತಿಯನ್ನು, ಅಭಿಮಾನವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ.
ಹೀಗಿರುವಾಗಲೇ ಹಾವೇರಿಯಲ್ಲೊಬ್ಬರು ಅಭಿಮಾನಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮೇಲಿನ ತಮ್ಮ ಅಭಿಮಾನವನ್ನು ವಿಭಿನ್ನವಾಗಿ ವ್ಯಕ್ತಪಡಿಸಿದ್ದಾರೆ. ಹಾವೇರಿಯ ಯಲಗಚ್ಚ ಗ್ರಾಮದ ಪ್ರಕಾಶ್ ಎಂಬ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಪುನೀತ್ ಗಾಗಿ ದೇಗುಲವೊಂದನ್ನು ನಿರ್ಮಿಸಿದ್ದಾರೆ.

ಹೌದು…ಹಾವೇರಿಯ ಯಲಗಚ್ಚ ಗ್ರಾಮದಲ್ಲಿ ಪ್ರಕಾಶ್ ಅವರು ತಮ್ಮ ಪ್ರೀತಿಯ ಅಪ್ಪು ಸರ್ ಗಾಗಿ ಗುಡಿ ನಿರ್ಮಾಣ ಮಾಡಿದ್ದಾರೆ.ಇನ್ನು ಇಂದು ಈ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಗುಡಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಪುನೀತ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಗುಡಿಯನ್ನು ಉದ್ಘಾಟಿಸಿದ್ರು. ಇನ್ನು ಗುಡಿಯನ್ನು 9 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಜೈಲಿನಲ್ಲೇ ಐಟಿ ವಿಚಾರಣೆ ಎದುರಿಸಿದ ಕೊಲೆ ಆರೋಪಿ ದರ್ಶನ್
ಇನ್ನು ಗುಡಿಯ ಉದ್ಘಾಟನೆಗಾಗಿ ಯಲಗಚ್ಚ ಗ್ರಾಮಕ್ಕೆ ಬಂದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಅದ್ಧೂರಿ ಮೆರವಣಿಗೆ ಮೂಲಕ ಗ್ರಾಮಸ್ಥರು ಕರೆ ತಂದ್ರು. ಯಲಗಚ್ಚ ಗ್ರಾಮದಲ್ಲಿ ಅಭಿಮಾನಿಗಳಿಂದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಭರ್ಜರಿ ಸ್ವಾಗತ ದೊರಕಿತು. ಇನ್ನು ಪವರ್ ಸ್ಟಾರ್ ಗುಡಿ ನೋಡಲು ಅಭಿಮಾನಿಗಳು ಮುಗಿಬಿದ್ರು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಅಭಿಮಾನಿಗಳು ಆಗಮಿಸಿದ್ದರು.ಇದೇ ವೇಳೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಪುನೀತ್ ಅವರ ಅಭಿಮಾನಿ ಪ್ರಕಾಶ್ ಅವರ ಮಗಳಿಗೆ ಅಪೇಕ್ಷಾ ಎಂದು ನಾಮಕರಣ ಮಾಡಿದರು.

ಗುಡಿಯನ್ನು ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಭಿಮಾನಿ ಪ್ರಕಾಶ್ ಅವರು ತಮ್ಮ ಜಾಗದಲ್ಲೇ ಗುಡಿ ನಿರ್ಮಾಣ ಮಾಡಿದ್ದಕ್ಕೆ ನನಗೆ ಖುಷಿಯಾಗುತ್ತಿದೆ. ಅವರು ಗುಡಿ ನಿರ್ಮಾಣ ಮಾಡಿದ್ದು ನಮ್ಮ ಪುಣ್ಯ,ನಾವು, ನಮ್ಮ ಕುಟುಂಬ , ಗುಡಿ ನಿರ್ಮಿಸಿದ ಅಭಿಮಾನಿ ಪ್ರಕಾಶ್ ಅವರಿಗೆ ಚಿರ ಋಣಿಯಾಗಿರುತ್ತೇವೆ ಎಂದು ಹೇಳಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕರಾಗಿದ್ದಾರೆ.
ಇದನ್ನೂ ಓದಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಎಷ್ಟೇ ಪ್ರಭಾವಿ ಆಗಿದ್ರೂ ಕಾನೂನಿಗೆ ತಲೆಬಾಗಬೇಕು : ನಿಖಿಲ್ ಕುಮಾರಸ್ವಾಮಿ