Malaika Arora-Arjun Kapoor : ಬಾಲಿವುಡ್ ಲವ್ ಬರ್ಡ್ಸ್ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ (Malaika Arora-Arjun Kapoor) ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನ ವೇಗದಲ್ಲಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ಮಾಲ್ಡೀವ್ಸ್ನಲ್ಲಿ ಸುತ್ತಾಡಿ ಮೋಜು ಮಸ್ತಿ ಮಾಡಿಕೊಂಡಿದ್ದ ಈ ಜೋಡಿ ಬ್ರೇಕಪ್ ಮಾಡಿಕೊಂಡಿದೆ ಎಂಬ ವಿಚಾರ ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಜನವರಿ ಹೊಸ ವರ್ಷಾಚರಣೆಯ ದಿನದಂದೂ ನಟಿ ಮಲೈಕಾ ಅರ್ಜುನ್ ಕಪೂರ್ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು. ಆದರೆ ಇದೀಗ ಈ ಜೋಡಿ ತಮ್ಮ ಸಂಬಂಧವನ್ನು ಮುರಿದುಕೊಂಡಿದೆ ಎನ್ನಲಾಗಿದೆ. ಅಲ್ಲದೇ ಬ್ರೇಕಪ್ ಬಳಿಕ ನಟಿ ಮಲೈಕಾ ಅರೋರಾ ಸಾಕಷ್ಟು ನೊಂದಿದ್ದಾರೆ ಎನ್ನಲಾಗಿದ್ದು ಕಳೆದ ಆರು ದಿನಗಳಿಂದ ಅವರು ಮನೆಯಿಂದ ಹೊರಗೆ ಕಾಲೇ ಇಟ್ಟಿಲ್ಲವಂತೆ.
48 ವರ್ಷದ ಮಲೈಕಾ ಅರೋರಾ ಹಾಗೂ 36 ವರ್ಷದ ಅರ್ಜುನ್ ಕಪೂರ್ ತಮ್ಮ ವಯಸ್ಸಿನ ಅಂತರದ ಕಾರಣದಿಂದ ಪದೇ ಪದೇ ಟ್ರೋಲ್ ಆಗುತ್ತಿದ್ದರು. ಈ ಬಾರಿ ಈ ಜೋಡಿಯ ಬ್ರೇಕಪ್ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ನೆಟ್ಟಿಗರು ಸೋಶಿಯಲ್ ಮೀಡಿಯಾ ತುಂಬೆಲ್ಲ ಟ್ರೋಲ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
#ArjunKapoor recovering after Breaking up with #MalaikaArora.😭😓😑😃😁🤣#Bollywood pic.twitter.com/XhafqUyOWs
— Diganta Hazarika (@Diganta701) January 12, 2022
*Arjun Kapoor and #MalaikaArora have decided to end their relationship*
— Pranjul Sharma (@SharmaaJie) January 12, 2022
Khan’s brother n family : pic.twitter.com/UWXB8u413A
Arjun Kapoor and Malaika Arora break-up after almost 4 years Dating . #MalaikaArora #breakup #Bollywood #ArjunKapoor #ArjunKapoor be like : pic.twitter.com/gPwHsSUSHC
— Shikha Rajpoot (@ShikhaR50421381) January 12, 2022
Bollywood trash culture addict Nibbas & Nibbis reaction after reading reports of #ArjunKapoor & #MalaikaArora breakup. pic.twitter.com/nlSvUVLGnM
— Tanisha Batra (@TanishaBatra80) January 12, 2022
ಬಾಲಿವುಡ್ ನಟಿ ಮಲೈಕಾ ಅರೋರಾ ನಟ ಅರ್ಬಾಜ್ ಖಾನ್ ಜೊತೆಯಲ್ಲಿ 1998ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಈ ದಂಪತಿಗೆ ಅರ್ಹಾನ್ ಎಂಬ ಹೆಸರಿನ ಪುತ್ರ ಕೂಡ ಇದ್ದಾನೆ. ಈ ದಾಂಪತ್ಯದಲ್ಲಿ ವಿರಸ ಮೂಡಿದ ಪರಿಣಾಮ ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ 2016ರಲ್ಲಿ ವೈವಾಹಿಕ ಸಂಬಂಧವನ್ನು ಮುರಿದುಕೊಂಡಿದ್ದರು. ಇದಾದ ಬಳಿಕ ನಾಲ್ಕು ವರ್ಷಗಳ ಕಾಲ ಮಲೈಕಾ ಅರೋರಾ ನಟ ಅರ್ಜುನ್ ಕಪೂರ್ ಜೊತೆಯಲ್ಲಿ ಡೇಟಿಂಗ್ ಮಾಡಿದ್ದರು. ಇವರಿಬ್ಬರ ಪ್ರೇಮ್ ಕಹಾನಿ ಬಗ್ಗೆ ಸಾಕಷ್ಟು ಗುಮಾನಿಗಳು ಕೇಳಿ ಬರುತ್ತಿದ್ದ ವೇಳೆಯಲ್ಲಿಯೇ ಈ ಜೋಡಿ 2019ರಲ್ಲಿ ತಮ್ಮ ಪ್ರೇಮ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿತ್ತು.
ಇದನ್ನು ಓದಿ : Bangalore Lockdown : ಬೆಂಗಳೂರಿನಲ್ಲಿ ಕರೋನಾ ರೌದ್ರ ನರ್ತನ : ಸೋಂಕಿನ ಪ್ರಮಾಣ ನಿಯಂತ್ರಿಸಲು ಅನಿವಾರ್ಯವಾಗುತ್ತಾ ಲಾಕ್ ಡೌನ್ ?
Fans call Malaika Arora-Arjun Kapoor breakup SHOCKING, share reactions on Twitter