ಬುಧವಾರ, ಜೂನ್ 18, 2025
HomeCinemaActress Samyuktha Hegde : ಡ್ಯೂಪ್ ಇಲ್ಲದೇ ಫೈಟಿಂಗ್ ತಂದ ಆಪತ್ತು: ಕಿರಿಕ್ ಬೆಡಗಿ ಸಂಯುಕ್ತ...

Actress Samyuktha Hegde : ಡ್ಯೂಪ್ ಇಲ್ಲದೇ ಫೈಟಿಂಗ್ ತಂದ ಆಪತ್ತು: ಕಿರಿಕ್ ಬೆಡಗಿ ಸಂಯುಕ್ತ ಹೆಗ್ಡೆಗೆ ಮೇಜರ್ ಸರ್ಜರಿ

- Advertisement -

ನಟ-ನಟಿಯರು ಶೂಟಿಂಗ್ ವೇಳೆ ಫೈಟಿಂಗ್ ಸೀನ್ ಗಳಿಗೆ ಡ್ಯೂಪ್ ಬಳಸೋದು ಕಾಮನ್. ಯಾಕೆಂದರೇ ಅಪಾಯಕಾರಿ ಸೀನ್ ಗಳನ್ನು ಶೂಟ್ ಮಾಡೋಕೆ ಡ್ಯೂಪ್ ಸಹಾಯವಿಲ್ಲದೇ ಇದ್ದರೇ ಏಟಾಗುವ ಸಾಧ್ಯತೆಗಳಿರುತ್ತೆ ಅಂತ. ಹೀಗೆ ಡ್ಯೂಪ್ ಬಳಸಿದ್ರೂ ನಟ-ನಟಿಯರು ಪೆಟ್ಟುಮಾಡಿಕೊಂಡು ಪರದಾಡೋದು ತಪ್ಪಲ್ಲ. ಹೀಗಿರುವಾಗ ಕಿರಿಕ್ ಬೆಡಗಿ ಹಾಗೂ ಬಹುಭಾಷಾ ನಟಿ ಸಂಯುಕ್ತಾ ಹೆಗಡೆ (Actress Samyuktha Hegde) ಡ್ಯೂಪ್ ಇಲ್ಲದೇ ಫೈಟ್ ಮಾಡೋ ಸಾಹಸಕ್ಕೆ ಕೈಹಾಕಿ ಈಗ ಆಸ್ಪತ್ರೆ ಸೇರಿದ್ದಾರೆ. ಮಾತ್ರವಲ್ಲ ಮೇಜರ್ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದು ಅಭಿಮಾನಿಗಳಿಗೆ ಆತಂಕ ಉಂಟಾಗಿದೆ.

ಸದಾ ಕಾಲ ಮೈ ಬಳುಕಿಸುವಂತ ಡ್ಯಾನ್ಸ್ , ವರ್ಕೌಟ್ ಹಾಗೂ ಬಿಕನಿ ಪೋಟೋಗಳ ಮೂಲಕ ಸದ್ದು ಮಾಡ್ತಿದ್ದ ನಟಿ ಸಂಯುಕ್ತಾ ಹೆಗಡೆ ಸಿನಿಮಾ ಶೂಟಿಂಗ್ ವೇಳೆ ಗಾಯ ಗೊಂಡಿದ್ದಾರೆ. ಕ್ರೀಮ ಚಿತ್ರೀಕರಣದ ವೇಳೆ ನಾಯಕಿ ಸಂಯುಕ್ತ ಹೆಗ್ಡೆ ಗಾಯಗೊಂಡಿದ್ದು, ಕೆಲ ದಿನಗಳ ಹಿಂದೆಯಷ್ಟೇ ಈ ಅಪಘಾತದ ವಿಡಿಯೋ ವೈರಲ್ ಆಗಿತ್ತು. ಈ ವೇಳೆ ಸಂಯುಕ್ತಾ ಹೆಗಡೆ ಫೈಟಿಂಗ್ ದೃಶ್ಯವೊಂದರಲ್ಲಿ ಯಾವುದೇ ಡ್ಯೂಪ್ ಇಲ್ಲದೇ ಪಾಲ್ಗೊಂಡಿದ್ದಾರೆ. ಸಖತ್ ಫೈಟ್ ಕೂಡ ಮಾಡಿದ್ದಾರೆ. ಆದರೆ ಫೈಟ್ ಇನ್ನೇನು ಕೊನೆ ಹಂತದಲ್ಲಿರುವಾಗ ಸಂಯುಕ್ತಾ ಜಂಪ್ ಮಾಡಿ ನೆಲದ ಮೇಲೆ ಲ್ಯಾಂಡ್ ಆಗುವಾಗ ಕಾಲು ಟ್ವಿಸ್ಟ್ ಆಗಿದ್ದು ನೋವಿನಿಂದ ನರಳಿದ್ದಾರೆ.

ಬಳಿಕ ಸಂಯುಕ್ತಾ ಅವರನ್ನು ಬನ್ನೇರುಘಟ್ಟ ರಸ್ತೆಯಲ್ಲಿರುವ ಆಸ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೇ ಚಿತ್ರತಂಡ ಡ್ಯೂಪ್ ಬಳಸಲು ಒತ್ತಾಯಿಸಿದರೂ ಒಪ್ಪದೆ ಸಾಹಸಕ್ಕೆ ಮುಂದಾಗಿ ಪೆಟ್ಟು ಮಾಡಿಕೊಂಡಿದ್ದ ನಟಿಯ ಕಾರಣದಿಂದ ಕ್ರೀಂ ಸಿನಿಮಾದ ಶೂಟಿಂಗ್ ಸಹ ಮುಂದೂಡಲಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಚಿಕಿತ್ಸೆಗಾಗಿ ದಾಖಲಾದ ಸಂಯುಕ್ತಾ ಆರೋಗ್ಯದ ಬಗ್ಗೆ ಈಗ ಆಸ್ರ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಲಾಗಿದೆ.

Fighting without a dupe, major surgery for Kirik Party Movie Actress Samyuktha Hegde

ಸಂಯುಕ್ತಾಗೆ ಸೀರಿಯಸ್ ಇಂಜ್ಯೂರಿ ಆಗಿದ್ದು ಮೇಜರ್ ಸರ್ಜರಿ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಸಂಯುಕ್ತಾಗೆ ಮಾಡಲಾದ ಸರ್ಜರಿ ಸಕ್ಸಸ್ ಆಗಿದ್ದು ಸುಮಾರು 8 ವಾರಗಳ ಕಾಲ ರೆಸ್ಟ್ ಜೊತೆಗೆ ಫಿಸಿಯೋಥೆರಪಿ ಅನಿವಾರ್ಯ ಎಂದು ವೈದ್ಯರು ಸಜೆಸ್ಟ್ ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ಸಕ್ಸಸ್ ಆಗಿದ್ದು ಕೊಂಚ ಚೇತರಿಸಿಕೊಂಡಿರೋ ಕಿರಿಕ್ ಬೆಡಗಿ ಸಂಯುಕ್ತಾ,ಇಂದು ಸಂಜೆ 6 ಗಂಟೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರಂತೆ.

ಇದನ್ನೂ ಓದಿ : Mallika Sherawat : ಮಧ್ಯರಾತ್ರಿ ಮನೆಗೆ ಕರೆಯುತ್ತಾರೆ, ಬಾಲಿವುಡ್ ಹೀರೋಸ್ ಅಸಲಿಯತ್ತು ಬಿಚ್ಚಿಟ್ಟ ಮಲ್ಲಿಕಾ ಶೇರಾವತ್

ಇದನ್ನೂ ಓದಿ : Good news for Sunny Leone : ಸನ್ನಿ ಲಿಯೋನ್ ಅಭಿಮಾನಿಗಳಿಗೆ ಸಿಹಿಸುದ್ದಿ: ದಕ್ಷಿಣ ಭಾರತದಲ್ಲೇ ಬಿಡು ಬಿಡ್ತಾರಂತೆ ನೀಲಿ ತಾರೆ

Fighting without a dupe, major surgery for Kirik Party Movie Actress Samyuktha Hegde

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular