ಭಾನುವಾರ, ಏಪ್ರಿಲ್ 27, 2025
HomeCinemaFilm Fare awards 2022 :‌ ಫಿಲ್ಮ್ ಫೇರ್ ನಲ್ಲಿ ಚಿರುಗೆ ಅವಾರ್ಡ್: ಪ್ರಶಸ್ತಿ ಸ್ವೀಕರಿಸಿದ...

Film Fare awards 2022 :‌ ಫಿಲ್ಮ್ ಫೇರ್ ನಲ್ಲಿ ಚಿರುಗೆ ಅವಾರ್ಡ್: ಪ್ರಶಸ್ತಿ ಸ್ವೀಕರಿಸಿದ ಮೇಘನಾ ಭಾವುಕ

- Advertisement -


ಬೆಂಗಳೂರು : ಭಾರತದ ಸಿನಿರಂಗದ ಪ್ರತಿಷ್ಟಿತ ಕಾರ್ಯಕ್ರಮಗಳಲ್ಲಿ ಒಂದಾದ ಫಿಲ್ಂ ಫೇರ್ ಅವಾರ್ಡ್(Film Fare awards 2022) ಫಂಕ್ಷನ್ ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು, ಖ್ಯಾತನಾಮಾಂಕಿತ ನಟ-ನಟಿಯರು ಅವಾರ್ಡ್ ಫಂಕ್ಷನ್ ನಲ್ಲಿ ಮಿಂಚಿದ್ದಾರೆ. ಅದರಲ್ಲೂ ಸ್ಯಾಂಡಲ್ ವುಡ್ ನ ಕ್ಯೂಟ್ ನಟಿ ಮೇಘನಾ ರಾಜ್ ಸಂಭ್ರಮದಿಂದ ಅವಾರ್ಡ್ ಫಂಕ್ಷನ್ ನಲ್ಲಿ ಪಾಲ್ಗೊಂಡು ಚಿರು ಜೊತೆ ಈ ಸಂಭ್ರಮ ಹಂಚಿಕೊಂಡಿದ್ದಾರೆ.

ಸಿನಿಸೆಲೆಬ್ರೆಟಿಗಳು ಸಂಭ್ರಮಿಸುವ ಫಿಲಂ‌ಫೇರ್ ಅವಾರ್ಡ್ ಫಂಕ್ಷನ್ (Film Fare awards 2022)ಬೆಂಗಳೂರಿನಲ್ಲಿ ನಡೆದಿದೆ. ಬಾಲಿವುಡ್ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾ ಸ್ಟಾರ್ ಗಳು ಫಂಕ್ಷನ್ ನಲ್ಲಿ ಪಾಲ್ಗೊಂಡು ಎಂಜಾಯ್ ಮಾಡಿದ್ದಾರೆ. 7 ನೇ ಫಿಲಂ ಫೇರ್ ಸೌತ್ ಅವಾರ್ಡ್ ಇದಾಗಿದ್ದು, ಇದರಲ್ಲಿ ಅತ್ಯುತ್ತಮವಾದ ಕನ್ನಡ ತೆಲುಗು, ತಮಿಳು,ಮಲೆಯಾಳಂ ಸಿನಿಮಾಗಳಿಗೆ ಹಾಗೂ ಸಿನಿಸ್ಟಾರ್ ಗಳಿಗೆ ಗೌರವ ಸಂದಿದೆ. ಇದೇ ಮೊದಲ ಬಾರಿಗೆ ಫಿಲಂ ಫೇರ್ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ನಡೆದಿದ್ದು ಸಿನಿಪ್ರಿಯರನ್ನು ಸೆಳೆದಿದೆ. ಈ ಸಮಾರಂಭದಲ್ಲಿ ನಟಿ ಮೇಘನಾ ಸರ್ಜಾ ಸಖತ್ ಮಿಂಚಿದ್ದು, ವೈಟ್ ಮತ್ತು ಗೋಲ್ಡನ್ ಕಲರ್ ಮಿಶ್ರಿತ್ ಗ್ರ್ಯಾಂಡ್ ಗೌನ್, ಹೆವಿ ಜುವೆಲ್ಲರಿ ಜೊತೆ ಗಾರ್ಜಿಯಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಲ್ಲದೇ ಚಿರು ಪರವಾಗಿ ಮೇಘನಾ ಸರ್ಜಾ ಲೈಫ್ ಟೈಂ ಅಚಿವಮೆಂಟ್ ಅವಾರ್ಡ್ ಕೂಡ ಸ್ವೀಕರಿಸಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಮೇಘನಾ ಸರ್ಜಾ, ನನಗೆ ದೂರದ ಜರ್ನಿ ಅಂದ್ರೇ ಅಲರ್ಜಿ. ಹೀಗಾಗಿ ಅವಾರ್ಡ್ ಪ್ರೋಗ್ರಾಂಗಳಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ವರ್ಷ ಹೋಗಬೇಕಂದಿದ್ದೇ ಅವಾಗಲೇ ಅವಾರ್ಡ್ ಫಂಕ್ಷನ್ ಬೆಂಗಳೂರಿನಲ್ಲಿ ನಡೆದಿದೆ. ಖುಷಿಯಾಗ್ತಿದೆ ಎಂದಿದ್ದಾರೆ.

ಇದನ್ನೂ ಓದಿ : hamsalekha admitted to hospital:ನಾದಬ್ರಹ್ಮ ಹಂಸಲೇಖ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Imandar: ‘ಕಾಂತಾರ’ದ ಮಾದರಿಯಲ್ಲೇ ರೋಮಾಂಚನ ಸೃಷ್ಟಿಸಿದ ‘ಇನಾಮ್ದಾರ್​​’ ಸಿನಿಮಾ ಪೋಸ್ಟರ್​​

ಇದನ್ನೂ ಓದಿ : Kantara : ಕಾಂತಾರ ಸಿನಿಮಾ ನೆನಪಿಸುತ್ತಿದೆ ಪೆರ್ನೆ ಗ್ರಾಮ : ಅಷ್ಟಕ್ಕೂ ಆ ಗ್ರಾಮದಲ್ಲಿ ಆಗಿದಾದ್ರೂ ಏನು ?

ಇನ್ನೂ ಅವಾರ್ಡ್ ಫಂಕ್ಷನ್ ಹಾಗೂ ತಾವು ಚಿರು ಪರವಾಗಿ ಸ್ವೀಕರಿಸಿದ ಅವಾರ್ಡ್ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರೋ ಮೇಘನಾ , ನೋಡು ಚಿರು ಫೈನಲ್ಲಿ ನಿನ್ನ ಬ್ಲ್ಯಾಕ್ ಲೇಡಿ ಮನೆಯಲ್ಲಿದ್ದಾಳೆ. ನನಗೆ ಸರಿಯಾಗಿ ಕಾಣಿಸುತ್ತಿದೆ. ಒಂದೊಮ್ಮೆ ನೀವು ಈ ಅವಾರ್ಡ್ ಸ್ವೀಕರಿಸಿದರೇ ನಿಮ್ಮ ರಿಯಾಕ್ಷನ್, ಮುಖದ ಭಾವ ಏನಿರುತ್ತಿತ್ತು ಎಂಬುದನ್ನು ನಾನು ಈಗಲೂ ಹೇಳಬಲ್ಲೆ. ಇಂತ ಇನ್ನಷ್ಟು ಸಾಧನೆಗಳು ನಿಮ್ಮದಾಗಲಿ ಎಂದು ಮೇಘನಾ ಚಿರುಗಾಗಿ ಅವಾರ್ಡ್ ಜೊತೆ ಪೋಟೋ ಶೇರ್ ಮಾಡಿ ಶುಭಹಾರೈಸಿದ್ದಾರೆ. ಚಿರು ಚಿತ್ರರಂಗದಲ್ಲಿ ಸಾಗಿ ಬಂದ ಹಾದಿಯನ್ನು ಸ್ಮರಿಸಿ ಫಿಲ್ಮ್ ಫೇಸ್ಟ್ ನಲ್ಲಿ ಚಿರುಗೆ ಜೀವಮಾನದ ಸಾಧನೆ ಅವಾರ್ಡ್ ನೀಡಲಾಗಿದೆ.

Chiruge Award at Filmfare: Meghna Bhavuka received the award

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular