ಗೀತಾ ಗೋವಿಂದಂ ಸಿನಿಮಾ (Geetha Govindam Team) ಮೂಲಕ ಟಾಲಿವುಡ್ ಸೆನ್ಸೇಷನಲ್ ನಟ ವಿಜಯ್ ದೇವರಕೊಂಡ ಸಾಕಷ್ಟು ಪ್ರಶಂಸೆ ಗಳಿಸಿದ್ದಾರೆ. ಪರಶುರಾಮ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾವು ಆ ಸಮಯದಲ್ಲಿ ಬಾಕ್ಸಾಫೀಸ್‌ನಲ್ಲಿ ಭಾರೀ ಸದ್ದು ಮಾಡಿತ್ತು. 100 ಕೋಟಿ ಕ್ಲಬ್ ಸೇರಿದ್ದ ಗೀತಾ ಗೋವಿಂದಂ ಸಿನಿಮಾಗೆ ಸೌತ್ ಸಿನಿ ಜಗತ್ತು ಭೇಷ್ ಎಂದಿದೆ. ಈ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಈ ಸಿನಿತಂಡ ಮತ್ತೊಮ್ಮೆ ಕೈ ಒಂದಾಗಿ ಹೊಸ ಸಿನಿಮಾ ಮಾಡುವ ಗುಸುಗುಸು ಕೇಳಿ ಬಂದಿತ್ತು. ಆದರೆ ಇಲ್ಲಿಯವರೆಗೂ ಅದಕ್ಕೆ ಸಮಯವೇ ಕೂಡಿ ಬಂದಿರಲಿಲ್ಲ. ಸುಮಾರು ಆರು ವರ್ಷದ ನಂತರ ಗೀತಾ ಗೋವಿಂದಂ ಸಿನಿತಂಡ ಮತ್ತೆ ಒಂದೆಡೆ ಸೇರಲಿದೆ ಎನ್ನುವ ಮಾಹಿತಿ ಸಿಕ್ಕಿದೆ.
ಗೀತಾ ಗೋವಿಂದಂ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ ಜೊತೆ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಆದರೆ ಇಲ್ಲಿ ಹೀರೋ ಹಾಗೂ ಡೈರೆಕ್ಟರ್ ಅವ್ರೇ ಆಗಿದ್ದು, ನಾಯಕಿ ಪಾತ್ರಕ್ಕೆ ಬೇರೆಯವರು ಬರಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಹಾಗೂ ಪರಶುರಾಮ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ದಕ್ಷಿಣ ಸಿನಿರಂಗದ ಖ್ಯಾತ ನಿರ್ಮಾಪಕ ದಿಲ್ ರಾಜು ಹಾಗೂ ಶಿರೀಶ್ ಈ ಸಿನಿಮಾಕ್ಕೆ ಹಣ ಹಾಕುತ್ತಿದ್ದು, ವಾಸು ವರ್ಮಾ ಕ್ರಿಯೇಟಿವ್ ಪ್ರೊಡ್ಯೂಸರ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಸದ್ಯ ಹೈದ್ರಾಬಾದ್‌ನಲ್ಲಿಂದು ಅದ್ಧೂರಿಯಾಗಿ ಮುಹೂರ್ತ ನೆರವೇರಿದೆ. ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಸಿನಿಮಾಗೆ ಕ್ಲ್ಯಾಪ್ ಮಾಡಿದ್ದು, ಗೋವರ್ಧನ್ ರಾವ್ ದೇವರಕೊಂಡ ಮೊದಲ ಶಾಟ್ ನಿರ್ದೇಶಿಸಿದರು. ಜನಪ್ರಿಯ ಹಣಕಾಸುದಾರ ಸತ್ತಿ ರಂಗಯ್ಯ ಕ್ಯಾಮೆರಾಗೆ ಚಾಲನೆ ನೀಡಿದರು. ಸದ್ಯ ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಲಿದೆ. ಸೀತಾರಾಮಂ ಸಿನಿಮಾ ಮೂಲಕ ಸೌತ್ ಸಿನಿಪ್ರಿಯರಿಗೆ ಪರಿಚಿತರಾಗಿರುವ ಮೃಣಾಲ್ ಠಕೂರ್ ವಿಜಯ್ ದೇವರಕೊಂಡಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇದನ್ನೂ ಓದಿ : Racer Movie : ರೇಸರ್ ಸಿನಿಮಾದಲ್ಲಿ ದುಬಾರಿ ಬೈಕ್ ಏರಿ ಬಂದ ನಟಿ ಅಕ್ಷಿತಾ ಸತ್ಯನಾರಾಯಣ್
ಇದೇ ಮೊದಲ ಬಾರಿಗೆ ವಿಜಯ್ ದಿಲ್ ರಾಜು ಹಾಗೂ ಶಿರೀಶ್ ಜೊತೆ ಕೈ ಜೋಡಿಸ್ತಿದ್ದು, ಶ್ರೀ ವೆಂಕಟೇಶ್ವರ್ ಕ್ರಿಯೇಷನ್ ನ 54ನೇ ಸಿನಿಮಾ ಇದಾಗಿದೆ. ಅದ್ಧೂರಿ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗ್ತಿದ್ದು, ಉಳಿದ ಪಾತ್ರವರ್ಗದ ಬಗ್ಗೆ ಆದಷ್ಟು ಬೇಗ ಸಿನಿತಂಡ ಮಾಹಿತಿ ನೀಡಲಿದೆ. ಕೆಯು ಮೋಹನನ್ ಛಾಯಾಗ್ರಹಣ, ಗೋಪಿಸುಂದರ್ ಸಂಗೀತ, ಎಎಸ್ ಪ್ರಕಾಶ್ ಕಲಾ ನಿರ್ದೇಶನ, ಮಾರ್ತಾಂಡ್ ಕೆ ವೆಂಕಟೇಶ್ ಸಂಕಲನ ಸಿನಿಮಾಕ್ಕಿದೆ.
Geetha Govindam Team : Vijay Devarakonda joined hands again with Geetha Govindam director