ಮಂಗಳವಾರ, ಏಪ್ರಿಲ್ 29, 2025
HomeCinemaDuniya Vijay : ಅಭಿಮಾನಿ ದುನಿಯಾಗೆ ಸಿಹಿಸುದ್ದಿ: ಹೀರೋ,ಡೈರೈಕ್ಷನ್ ಬಳಿಕ‌ ವಿಲನ್ ಪಾತ್ರದತ್ತ ವಿಜಯ್ ಚಿತ್ತ

Duniya Vijay : ಅಭಿಮಾನಿ ದುನಿಯಾಗೆ ಸಿಹಿಸುದ್ದಿ: ಹೀರೋ,ಡೈರೈಕ್ಷನ್ ಬಳಿಕ‌ ವಿಲನ್ ಪಾತ್ರದತ್ತ ವಿಜಯ್ ಚಿತ್ತ

- Advertisement -

ಕೆಲವರು ನಟರು ಒಮ್ಮೆ ನಾಯಕರ ಪಟ್ಟಕ್ಕೆ ಬಡ್ತಿ ಪಡೆದ ಮೇಲೆ‌ ಮತ್ತೆ ಬೇರೆ ಪಾತ್ರಗಳತ್ತ‌ ನೋಡೋಕೆ ಮನಸ್ಸು ಮಾಡೋದಿಲ್ಲ. ಆದರೆ‌ ಕನ್ನಡದ ಕರಿಚಿರತೆ ದುನಿಯಾ ವಿಜಯ್ (Duniya Vijay) ಮಾತ್ರ ಸದಾ ತಮ್ಮನ್ನು ತಾವು ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾರೆ. ಇತ್ತೀಚಿಗಷ್ಟೇ ಡೈರೈಕ್ಷನ್ ಕ್ಯಾಪ್ ತೊಟ್ಟು ಯಶಸ್ವಿಯಾಗಿದ್ದ ದುನಿಯಾ ವಿಜಯ್ ಈಗ ವಿಲನ್ ರೋಲ್ ನಲ್ಲಿ ಮಿಂಚಲು ಸಿದ್ಧವಾಗಿದ್ದಾರೆ.

ವರ್ಷಗಳ ಕಾಲ ತಪಸ್ಸಿನಂತೆ ಸಲಗ ಸಿನಿಮಾದಲ್ಲಿ ತೊಡಗಿಕೊಂಡಿದ್ದ ದುನಿಯಾ ವಿಜಯ್ ಸಿನಿಮಾ ನಿರ್ದೇಶನದಲ್ಲಿ ಗೆದ್ದಿದ್ದಾರೆ. ದುನಿಯಾ ವಿಜಯ್ ರನ್ನು ನಾಯಕರಾಗಿ ನೋಡಿದ್ದ ಅಭಿಮಾನಿಗಳು ನಿರ್ದೇಶಕನ ರೂಪದಲ್ಲಿ ನೋಡಿ ಫುಲ್ ಖುಷಿಯಾಗಿದ್ದಾರೆ. ಈ ಖುಷಿಯ ಬೆನ್ನಲ್ಲೇ ಅಭಿಮಾನಿಗಳಿಗೆ ದುನಿಯಾ ವಿಜಯ್ ಮತ್ತೊಂದು ಸಿಹಿಸುದ್ದಿ‌ ಕೊಟ್ಟಿದ್ದು ಸ್ಯಾಂಡಲ್ ವುಡ್ ಗಡಿ ದಾಟಿ ದುನಿಯಾ ವಿಜಯ್ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅದು ಕೂಡ ಖಡಕ್ ವಿಲನ್ ರೋಲ್ ನಲ್ಲಿ ಎಂಟ್ರಿಕೊಟ್ಟಿದ್ದು ದುನಿಯಾ ವಿಜಯ್ ಲುಕ್ ಗೆ ಅಭಿಮಾನಿಗಳು ಬೆರಗಾಗಿದ್ದಾರೆ.

ತೆಲುಗಿನ ಸ್ಟಾರ್ ನಟ ನಂದಮೂರಿಬಾಲಕೃಷ್ಣ ಅವರ ಮುಂದಿನ ಸಿನಿಮಾಗೆ ದುನಿಯಾ ವಿಜಯ್ ವಿಲನ್ ರೋಲ್‌ನಲ್ಲಿ ಮಿಂಚಲಿದ್ದಾರೆ. ಈ ಸಿನಿಮಾಗೆ ಕ್ರ್ಯಾಕ್ ನಿರ್ದೇಶಕ ಗೋಪಿ ಚಂದ್ ಮಾಲಿನೇನಿ ನಿರ್ದೇಶನ ಮಾಡುತ್ತಿದ್ದು ತಾತ್ಕಾಲಿಕವಾಗಿ ಈ ಸಿನಿಮಾಗೆ ಎನ್ ಬಿಕೆ 107 ಎಂದು ಹೆಸರಿಡಲಾಗಿದೆ. ಈ ಸಿನಿಮಾಗೆ ದುನಿಯಾ ವಿಜಯ್ ತಮ್ಮ ಲುಕ್ ಕೂಡ ಬದಲಾಯಿಸಿಕೊಂಡಿದ್ದು ಗಡ್ಡ, ಉದ್ದ ಮೀಸೆ ಜೊತೆ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

ಬಡವ ರ್ಯಾಸ್ಕಲ್ ಸುದ್ದಿಗೋಷ್ಟಿ ವೇಳೆ ದುನಿಯಾ ವಿಜಯ್ ತೆಲುಗು ಸಿನಿಮಾಗೋಸ್ಕರ ಲುಕ್ ಬದಲಾಯಿಸಿಕೊಂಡ ಸಂಗತಿ ರಿವೀಲಾಗಿದೆ. ಮೈತ್ರಿಮೂವಿ‌ಮೇಕರ್ಸ್ ನಂದಮೂರಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡದ ನಾಯಕರೊಬ್ಬರು ತೆಲುಗು ಸಿನಿಮಾದಲ್ಲಿ ವಿಲನ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಾಯಕನಾದವನು ನಾಯಕನಾಗಿಯೇ ಉಳಿಯಬೇಕು, ಇಲ್ಲವೇ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಪರಿಪಾಠವಿರುವ ಸ್ಯಾಂಡಲ್ ವುಡ್ ನಲ್ಲಿ ಮೊದಲ ಬಾರಿಗೆ ಚೌಕಟ್ಟು ದಾಟಿ ದುನಿಯಾ ವಿಜಯ್ ವಿಲನ್ ರೋಲ್ ನಲ್ಲಿ ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿದ್ದಾರೆ. ಇನ್ನು ಅಧಿಕೃತ ಸುದ್ದಿ ಚಿತ್ರತಂಡದಿಂದ ಖಚಿತವಾಗಬೇಕಿದ್ದು ಸದ್ಯದಲ್ಲೇ ಶೂಟಿಂಗ್ ಆರಂಭವಾಗಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಬಡವ್ ರ್ಯಾಸ್ಕಲ್ ಸುದ್ದಿಗೋಷ್ಠಿ ವೇಳೆ ದುನಿಯಾ ವಿಜಯ್ ಕನ್ನಡದ ಮೇಲಿನ ದಾಳಿ ಖಂಡಿಸಿದ್ದು ಶಿವಣ್ಣ ನೇತೃತ್ವದಲ್ಲಿ ಹೋರಾಟಕ್ಕೆ ನಾವೆಲ್ಲ ಸಿದ್ಧ ಎಂದಿದ್ದಾರೆ.

ಇದನ್ನೂ ಓದಿ : ಆ ಒಂದು ದೃಶ್ಯವೇ ನಟಿ ಜೀವನಕ್ಕೆ ಮುಳುವಾಯ್ತಾ?! ಸಮಂತಾ ಡಿವೋರ್ಸ್, ಅಭಿಮಾನಿಗಳ ಕುತೂಹಲ!

ಇದನ್ನೂ ಓದಿ : ಸಂಚಾರಿ ವಿಜಯ್ ಅಭಿಮಾನಿಗಳಿಗೆ ಸಿಹಿಸುದ್ದಿ: ಜನವರಿ 26 ರಂದು ಅಂತ್ಯವಲ್ಲ ಆರಂಭ ತೆರೆಗೆ

(good news for Duniya Vijay, Vijay’s mood towards the villain role after Hero and Direction)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular