ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಬಿಗ್ ಬಜೆಟ್ ಸಿನಿಮಾಗಳದ್ದೇ ಸುದ್ದಿ. ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಬಹುನೀರಿಕ್ಷಿತ ಸಿನಿಮಾ ಪಠಾಣ್ ತೆರೆಗೆ ಬರ್ತಿರೋ ಸುದ್ದಿ ಹೊರಬಿದ್ದ ಬೆನ್ನಲ್ಲೇ ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ (Vikrant Rona ) ಅಂಗಳದಿಂದ ಹೊಸ ಅಪ್ಡೇಟ್ ವೊಂದು ಹೊರಬಿದ್ದಿದೆ.
ಚಿತ್ರದ ಪ್ರಮೋಶನ್ ಜೊತೆ ಚಿತ್ರದ ಮಾಹಿತಿಯನ್ನು ವಿಭಿನ್ನವಾಗಿ ಕೊಡೋ ಟ್ರೆಂಡ್ ಶುರುವಾಗಿರೋದರಿಂದ ವಿಕ್ರಾಂತ್ ರೋಣ (Vikrant Rona ) ತಂಡಕೂಡ ಇಂತಹುದೇ ಪ್ಲ್ಯಾನ್ ಅನುಸರಿಸಿದೆ. ವಿಕ್ರಾಂತ್ ರೋಣದ ಟೀಸರ್, ಟ್ರೇಲರ್ ಹಾಗೂ ಸಾಂಗ್ ರಿಲೀಸ್ ಸೇರಿದಂತೆ ಎಲ್ಲ ವಿವರಗಳ ಬಗ್ಗೆಯೂ ಚಿತ್ರತಂಡ ರೂಟ್ ಮ್ಯಾಪ್ ಮೂಲಕ ವಿಭಿನ್ನವಾಗಿ ಮಾಹಿತಿ ನೀಡಿದೆ.
ಸುಂದರವಾದ ರೂಟ್ ಮ್ಯಾಪ್ ಮಾಡಿರೋ ಚಿತ್ರತಂಡ ಯಾವ ಯಾವಾಗ ಹಾಡು, ಯಾವಾಗ ಟ್ರೇಲರ್ ರಿಲೀಸ್ ಆಗ್ತಿದೆ ಅಂತ ಸಖತ್ ಚಿತ್ರಗಳ ಮೂಲಕ ಅಪ್ಡೇಟ್ ನೀಡಲಾಗಿದೆ. ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಹುಟ್ಟುಹಬ್ಬದಂದು ಈ ರೂಟ್ ಮ್ಯಾಪ್ ರಿಲೀಸ್ ಮಾಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದ ಟೀಸರ್ ರಿಲೀಸ್ ಜೊತೆ ಪ್ರಮೋಶನ್ ಆರಂಭವಾಗಲಿದ್ದು, ಬಳಿಕ ಹೇ ಫಕೀರಾ ಸಿನಿಮಾ ರಿಲೀಸ್ ಆಗಲಿದೆ.ಇದರ ಜೊತೆಗೆ ಟ್ರೇಲರ್ ಗೆ ಬಳಸಿಕೊಳ್ಳಲಾಗಿದ್ದ ಹಾಗೂ ಸಖತ್ ಕ್ರೇಜ್ ಹುಟ್ಟಿಸಿರುವ ಗುಮ್ಮ ಬಂದ ಗುಮ್ಮ ಹಾಡು ತೆರೆ ಕಾಣಲಿದೆ.
ಇದಾದ ಕೆಲ ದಿನಗಳ ಬಳಿಕ ಚಿಕ್ಕಿ ಬೊಂಬೆ ಹಾಡು ತೆರೆ ಕಾಣಲಿದೆ. ಬ್ಯಾಕ್ ಟೂ ಬ್ಯಾಕ್ ಎರಡು ಹಾಡುಗಳು ರಿಲೀಸ್ ಆದ ಬಳಿಕ ಪ್ರೇಕ್ಷಕರಿಗೆ ಒಂದು ಸಪ್ರೈಸ್ ಇದೆ ಎಂದು ರೂಟ್ ಮ್ಯಾಪ್ ಹೇಳಿದೆ. ಎರಡು ಸಾಂಗ್ ಹಾಗೂ ಒಂದು ಸಪ್ರೈಸ್ ಬಳಿಕ ಮತ್ತೊಂದು ಸಾಂಗ್ ರಿಲೀಸ್ ಆಗಲಿದ್ದು ಅದಾದ ಮೇಲೊಂದು ಸಪ್ರೈಸ್ ವೀಕ್ಷಕರಿಗೆ ಸಿಗಲಿದೆಯಂತೆ. ಇದಾದ ಮೇಲೆ ಸಖತ್ ಕುತೂಹಲ ಮೂಡಿಸಿರುವ ದ್ ಕ್ವೀನ್ ಆಫ್ ಗುಡ್ ಟೈಮ್ಸ್ ಸಾಂಗ್ ರಿಲೀಸ್ ಆಗಲಿದೆ. ಇದಾದ ಬಳಿಕ ಟ್ರೇಲರ್ ತೆರೆಗೆ ಬರಲಿದೆ.
<Update alert> Thank you all for the wishes! There is a plan in place👇& the entire team is working hard to bring it into motion. For now, I will tweet a special update “soon”. Soon means – TODAY!!! #VikrantRona ಅಪ್ಡೇಟ್ ಇವತ್ತೇ ಬರ್ತಾ ಇದೆ! pic.twitter.com/hfNV7nFriV
— Anup Bhandari (@anupsbhandari) March 2, 2022
ಟ್ರೇಲರ್ ಬಳಿಕವೂ ಮತ್ತೊಂದು ಸಪ್ರೈಸ್ ಕಾದಿದೆ ಎನ್ನಲಾಗಿದ್ದು ಇದಾದ ಬಳಿಕ ಬಹುನೀರಿಕ್ಷಿತ ಸಿನಿಮಾ ರಿಲೀಸ್ ಆಗಲಿದ್ದು ಥಿಯೇಟರ್ ನಲ್ಲಿ ವಿಕ್ರಾಂತ್ ರೋಣ ಅಬ್ಬರ ಆರಂಭ ವಾಗಲಿದೆ. ಮೂಲಗಳ ಮಾಹಿತಿ ಪ್ರಕಾರ ಅದ್ದೂರಿಯಾಗಿ ವಿಕ್ರಾಂತ್ ರೋಣ (Vikrant Rona) ಫ್ರೀ ರಿಲೀಸ್ ಇವೆಂಟ್ ನಡೆಯಲಿದ್ದು ದೇಶದ ಹಲವು ರಾಜ್ಯದಲ್ಲಿ ಅಲ್ಲಿನ ಕಲಾವಿದರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಲಿದ್ದಾರಂತೆ.
Vikrant Rona Teaser😄#VikrantRona pic.twitter.com/3AwiRCRXej
— Muttu 2.0 (@muttu1745) March 2, 2022
ಇದನ್ನೂ ಓದಿ : ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ; ಫೇಸ್ಬುಕ್ ಮೂಲಕ ಖುಷಿ ಹಂಚಿದ ಪತಿ ಜಗದೀಶ್ ಆರ್ ಚಂದ್ರ
ಇದನ್ನೂ ಓದಿ : ಭೀಮ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೆ ಬಂದ ದುನಿಯಾ ವಿಜಯ್
(Good news for Sudeep fans, here’s a big update for Vikrant Rona movie)