ಬುಧವಾರ, ಏಪ್ರಿಲ್ 30, 2025
HomeCinemaGujarati movie : ಕನ್ನಡದಲ್ಲಿ ಗುಜರಾತಿ ಸಿನಿಮಾ ಜುಲೈ 7ಕ್ಕೆ ‘ರಾಯರು ಬಂದರು ಮಾವನ ಮನೆಗೆ’...

Gujarati movie : ಕನ್ನಡದಲ್ಲಿ ಗುಜರಾತಿ ಸಿನಿಮಾ ಜುಲೈ 7ಕ್ಕೆ ‘ರಾಯರು ಬಂದರು ಮಾವನ ಮನೆಗೆ’ ರಿಲೀಸ್‌

- Advertisement -

‘ರಾಯರು ಬಂದರು ಮಾವನ ಮನೆಗೆ’ ಕನ್ನಡ ಸಿನಿರಂಗದ ಎವರ್‌ಗ್ರೀನ್‌ ಹಾಡು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಸುಧಾರಾಣಿ – ಆನಂದ್ ನಟನೆಯ ಮೈಸೂರು ಮಲ್ಲಿಗೆ ಸಿನಿಮಾದ ಸೂಪರ್‌ ಹಿಟ್‌ ಹಾಡು ಇದಾಗಿದೆ. ಇದೀಗ ರಾಯರು ಬಂದರು ಮಾವನ ಮನೆಗೆ ಶೀರ್ಷಿಕೆಯಡಿಯಲ್ಲಿ ಸಿನಿಮಾವೊಂದು ತೆರೆಗೆ ಬರಲು ರೆಡಿ ಆಗಿದೆ. ರಾಯರು ಬಂದರು ಮಾವನ ಮನೆಗೆ ಇದು (Gujarati movie) ಗುಜರಾತಿ ಸಿನಿಮಾ. ವರ ಫಧಾರವೋ ಸಾವಧಾನ ಟೈಟಲ್‌ನಲ್ಲಿ ಬಿಡುಗಡೆಯಾಗಿರುವ ಸಿನಿಮಾ ಇದೀಗ ಕನ್ನಡದಲ್ಲಿ ರಾಯರು ಬಂದರು ಮಾವನ ಮನೆಗೆ ಟೈಟಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಗುಜರಾತಿ ಸಿನಿಮಾವೊಂದನ್ನು ಕನ್ನಡದಲ್ಲಿಯೂ ರಿಲೀಸ್ ಆಗುತ್ತಿದೆ.

ಜಾಕ್ ಮಂಜು ವಿಕ್ರಾಂತ್ ರೋಣ ಸಿನಿಮಾ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೇ ನಟ ಸುದೀಪ್‌ಗೆ ಆಪ್ತರಾಗಿರುವ ಜಾಕ್ ಮಂಜು ತಮ್ಮದೇ ಶಾಲಿನಿ ಆರ್ಟ್ ಬ್ಯಾನರ್ ನಡಿ ರಾಯರು ಬಂದರು ಮಾವನ ಮನೆಗೆ ಸಿನಿಮಾವನ್ನು ಸಿರಿಗನ್ನಡಂ ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದಾರೆ. ರತ್ನಪುರ, ಜಿತಿ ಲೇ ಜಿಂದಗಿ ಎಂಬ ಎರಡು ಹಿಟ್ ಸಿನಿಮಾ ಕೊಟ್ಟಿರುವ ವಿಫುಲ್ ಶರ್ಮಾ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗಿದ್ದು, ಶೈಲೇಶ್ ಧಮೇಲಿಯಾ, ಅನಿಲ್ ಸಂಘವಿ, ಭರತ್ ಮಿಸ್ತ್ರೀ ಬಂಡವಾಳ ಹೂಡಿದ್ದಾರೆ. ಸಾಧುತುಷಾರ್, ಕಿಂಜಲ್ ರಾಜಪ್ರಿಯಾ, ರಾಗಿ ಜಾನಿ ಮತ್ತು ಕಾಮಿನಿ ಪಾಂಚಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪ್ರಶಾಂತ್ ಬರೋಟ್, ಜಯ್ ಪಾಂಡ್ಯ ಮತ್ತು ಜೈಮಿನಿ ತ್ರಿವೇದಿ ಸೇರಿದಂತೆ ಸಾಕಷ್ಟು ಖ್ಯಾತ ನಟ, ನಟಿಯರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ : Abhishek Ambarish – Aviva Marriage : ನಟ ಅಭಿಷೇಕ್‌ ಅಂಬರೀಶ್‌ – ಅವಿವಾ ಬಿದ್ದಪ್ಪ ವಿವಾಹದಲ್ಲಿ ಭಾಗಿಯಾದ ಗಣ್ಯರು

ಜುಲೈ 7ಕ್ಕೆ ಕನ್ನಡದಲ್ಲಿ ರಾಯರು ಬಂದರು ಮಾವನ ಮನೆಗೆ ಸಿನಿಮಾ ಬಿಡುಗಡೆಯಾಗ್ತಿದ್ದು, ಈ ನಿಟ್ಟಿಯಲ್ಲಿ ಇಡೀ ಸಿನಿತಂಡ ಬೆಂಗಳೂರಿನಲ್ಲಿಯೂ ಪ್ರಚಾರ ಕಾರ್ಯ ನಡೆಸಲಿದೆ. ಜೂನ್‌ 9 ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ಇಡೀ ತಂಡ ಭಾಗಿಯಾಗಲಿದೆ. ಅಂದಹಾಗೇ ರಾಯರು ಬಂದರು ಮಾವನ ಮನೆಗೆ ಸಿನಿಮಾ ಫ್ಯಾಮಿಲಿ ಡ್ರಾಮಾ ಕಥಾಹಂದರ ಹೊಂದಿದೆ. ಮದುವೆ. ಕುಟುಂಬ, ಸಂಬಂಧಗಳ ಸುತ್ತಾ ಇಡೀ ಸಿನಿಮಾ ಸಾಗಲಿದೆ. ಗುಜರಾತಿ ಸಿನಿಮಾವೊಂದು ಕನ್ನಡದಲ್ಲಿ ಬಿಡುಗಡೆಯಾಗ್ತಿರುದು ಖುಷಿ ವಿಚಾರವೇ. ಎಲ್ಲಾ ಸಿನಿಮಾಗಳನ್ನು ಅಪ್ಪಿಕೊಳ್ಳುವ ಪ್ರೇಕ್ಷಕರ ರಾಯರು ಬಂದರು ಮಾವನ ಮನೆಗೆ ಸಿನಿಮಾವನ್ನು ಮೆಚ್ಚಿಕೊಂಡು ಹರಸಿ ಹಾರೈಸಬೇಕು ಅಷ್ಟೇ.

Gujarati movie in Kannada release on July 7th ‘Rayaru Bandru Mavan Mannege’

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular