ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಡಾಲಿ ಧನಂಜಯ ಅಭಿನಯದ “ಗುರುದೇವ ಹೊಯ್ಸಳ” ಸಿನಿಮಾದ ಆನ್‌ಲೈನ್ ಟಿಕೆಟ್ ಬುಕಿಂಗ್ (Gurudev Hoysala Booking Open) ಶುರು ಆಗಿದೆ. ಸದ್ಯ ಕನ್ನಡ ಸಿನಿರಂಗದಲ್ಲಿ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿದ್ದಾರೆ. ಈ ಸಿನಿಮಾ ನಟ ಧನಂಜಯ್ ಅಭಿನಯದ 25ನೇ ಸಿನಿಮಾವಾಗಿದೆ. ಈ ಸಿನಿಮಾವನ್ನು” ರತ್ನನ್ ಪ್ರಪಂಚ” ಸಿನಿಮಾ ನಿರ್ಮಾಪಕ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಡಾಲಿ ಅಭಿನಯದ “ಗುರುದೇವ ಹೊಯ್ಸಳ” ಸಿನಿಮಾದ ಆನ್‌ಲೈನ್ ಟಿಕೆಟ್ ಬುಕ್ ಮೈ ಶೋನಲ್ಲಿ ಲಭ್ಯ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಸಿನಿಮಾದ ಅಧಿಕೃತ ಟ್ವೀಟರ್ ಖಾತೆಯಲ್ಲಿ, “ನಿಮ್ಮ ಟಿಕೆಟ್‌ಗಳನ್ನು ಈಗಲೇ ಬುಕ್ ಮಾಡಿ” ಎಂದು ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದ ಟೈಟಲ್ ಅನ್ನು ಕೂಡ ಸಿನಿತಂಡ ಬದಲಾವಣೆ ಮಾಡಿದ್ದಾರೆ. ಈ ಸಿನಿಮಾದ ಶೀರ್ಷಿಕೆ ವಿರುದ್ಧ ನ್ಯಾಯಲಯದಿಂದ ತಡೆಯಾಜ್ಞೆ ತಂದ ಕಾರಣ ಕೆ ಆರ್ ಜಿ ಸ್ಟುಡಿಯೋಸ್ ಶೀರ್ಷಿಕೆಯನ್ನು ಬದಲಾವಣೆ ಮಾಡಿದ್ದಾರೆ. ಹೌದು ನಟ ಧನಂಜಯ್ ಅಭಿನಯದ “ಹೊಯ್ಸಳ” ಸಿನಿಮಾ “ಗುರುದೇವ ಹೊಯ್ಸಳ” ಎನ್ನುವ ಬದಲಾದ ಶೀರ್ಷಿಕೆಯೊಂದಿಗೆ ಇದೇ ಮಾರ್ಚ್ 30ರಂದು ತೆರೆ ಕಾಣಲಿದೆ.
#GurudevHoysala 𝐁𝐎𝐎𝐊𝐈𝐍𝐆𝐒 𝐎𝐏𝐄𝐍 𝐍𝐎𝐖!💥
— Gurudev Hoysala (@Dhananjayaka) March 26, 2023
Book your tickets now🎟️ @bookmyshow @Paytmhttps://t.co/L1XYwYKkJh
Releasing on 30.03.23 – #EeSalaHoysala#VijayKiragandur @KRG_Studios @amrutha_iyengar @vijaycinephilia @Karthik1423 @yogigraj @AJANEESHB pic.twitter.com/mHAYOJInE2
ಇನ್ನು ಈ ಸಿನಿಮಾದಲ್ಲಿ ನಟಿ ಅಮೃತಾ ಅಯ್ಯಂಗಾರ್ ಅವರು ನಟ ಧನಂಜಯ್ ಜೊತೆ ನಾಯಕಿಯಾಗಿ ನಟಿಸುತ್ತಿರುವ ಮೂರನೇ ಸಿನಿಮಾವಾಗಿದ್ದು, ಸಿನಿಪ್ರೇಕ್ಷಕರನ್ನು ಮತ್ತೊಮ್ಮೆ ರಂಜಿಸಲಿದ್ದಾರೆ. ಈ ಸಿನಿಮಾಕ್ಕೆ ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶಕರಾಗಿದ್ದಾರೆ. ಮಾಸ್ತಿ ಅವರ ಉತ್ತಮ ಸಂಭಾಷಣೆಯನ್ನು ಬರೆದಿದ್ದಾರೆ. ನಟ ಧನಂಜಯ್ ಅಭಿನಯದ “ಗುರುದೇವ ಹೊಯ್ಸಳ” ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆ ಕಾಣಲಿದೆ.
ಈ ಸಿನಿಮಾದ ಶೂಟಿಂಗ್‌ನ್ನು ಬಹುತೇಕ ಬೆಳಗಾವಿ ಜಿಲ್ಲೆಯ ಅನೇಕ ಭಾಗಗಳಲ್ಲಿ ಸೆರೆ ಹಿಡಿಯಲಾಗಿದೆ. ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ಹೆಣೆದಿರುವ ಕಥೆ ಆಗಿರುತ್ತದೆ. ಇದರ ಜೊತೆಗೆ ‘Once upon a time in ಜಮಾಲಿಗುಡ್ಡ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಒಟ್ಟಾರೆಯಾಗಿ ಏಕಕಾಲಕ್ಕೆ ನಟ, ಖಳನಾಯಕನಾಗಿ ಧನಂಜಯ ಅವರು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವುದು ಹೆಗ್ಗಳಿಕೆಯಾಗಿದೆ.
ಇದನ್ನೂ ಓದಿ : ಖ್ಯಾತ ನಟಿ ಆಕಾಂಕ್ಷ ದುಬೆ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
ಇದನ್ನೂ ಓದಿ : ಕಾಂತಾರ 2 ಸಿನಿಮಾ : ಕುದುರೆ ಸವಾರಿ ತರಬೇತಿ ಪಡೆದ ರಿಷಬ್ ಶೆಟ್ಟಿ
‘ರತ್ನನ್ ಪ್ರಪಂಚ’ ಸಿನಿಮಾದಲ್ಲಿ ಧನಂಜಯ ಅವರು ಕಮರ್ಷಿಯಲ್ ಲುಕ್‌ನಿಂದ ಹೊರಬಂದಿರುವ ಸಾಮಾನ್ಯ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡು, ರಂಜಿಸಿದ್ದರು. ನಂತರ ಹೆಡ್‌ಬುಷ್ ಸಿನಿಮಾದಲ್ಲಿ ಭೂಗತಲೋಕದ ಪಾತ್ರದಲ್ಲಿ ಕೂಡ ಅಭಿಮಾನಿಗಳ ಮನಗೆದ್ದಿದ್ದಾರೆ. ಒಟ್ಟಿನಲ್ಲಿ ಸಿನಿಮಾದಿಂದ ಸಿನಿಮಾಕ್ಕೆ ಧನಂಜಯ ಅವರ ಪಾತ್ರಗಳ ಆಯ್ಕೆಯಂತೂ ತುಂಬ ವಿಭಿನ್ನವಾಗಿದೆ.
Gurudev Hoysala Booking Open : Actor Dolly Dhananjay starrer “Gurudev Hoysala” movie ticket booking is available.