2021ರ ವರ್ಷ ತುಂಬಾ ಬರೀ ಕೊರೋನಾ. ವರ್ಷದಲ್ಲಿ ಶೇ. ಎರಡು, ಮೂರು ತಿಂಗಳು ಬರೀ ಲಾಕ್ ಡೌನ್. (Covid Lockdown) ಇದರ ಪರಿಣಾಮ ಇಡೀ ವರ್ಷವಾಗಿತ್ತು. (Happy New Year 2022) ಚಿತ್ರೋದ್ಯಮ ಭಯದಲ್ಲೇ ಬದುಕಿದ್ದು ಹೆಚ್ಚು. ಶೇ. 60ರಷ್ಟು ಕೆಲಸಗಳು ಸ್ಥಗಿತಗೊಂಡವು. ಸಿದ್ಧವಾಗಿದ್ದ ಚಿತ್ರಗಳು ಥಿಯೇಟರಿಗೆ (Film Theatre) ಬಂದರೂ 50-50 ಕಾನೂನು ಕಾಡಿ, ಮಕಾಡೆ ಮಲಗಿಸಿಬಿಟ್ಟವು. ಈ ಮಧ್ಯೆ ಯುವರತ್ನ, (Yuvarathnaa, Roberrt Kotigobba 3) ರಾಬರ್ಟ್, ಕೋಟಿಗೊಬ್ಬ ಎಲ್ಲವೂ ಓಟಿಟಿಗೆ (OTT Movies) ಜಾಗ ಗಿಟ್ಟಿಸಿಕೊಂಡು ಹಾಕಿದ ಬಂಡವಾಳವನ್ನು ಬಾಚಿಕೊಂಡಿತು.
ಹಾಗೆ ನೋಡಿದರೆ, ಇಡೀ ವರ್ಷದಲ್ಲಿ ಯಾರೇನು ಸುಮ್ಮನೆ ಕೂತಿಲ್ಲ. ಸುಮಾರು 100ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಗೊಂಡಿವೆ. ವಿಶೇಷ ಅಂದರೆ, ಇದರಲ್ಲಿ ಶೇ. 70ರಷ್ಟು ಸಿನಿಮಾಗಳು ಹೊಸಬರದ್ದು. ಮಲೆಯಾಳಂನಲ್ಲಿ ಶೇ. 90ರಷ್ಟು ಹೊಸಬರ ಚಿತ್ರಗಳು ಹಿಟ್ ಮೇಲೆ ಅವರೆಕಾಯಿ ಆಗಿದ್ದು ಚಿತ್ರರಂಗದ ದೊಡ್ಡ ಮೈಲಿಗಲ್ಲಂತೆ. ಇದರಿಂದ ಸ್ಫೂರ್ತಿ ಪಡೆದೇ ಏನೋ, ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರತಿಭೆಗಳ ಅನಾವರಣಕ್ಕೆ ಈ 2021ರ ಈ ಕೊರೋನಾ ವರ್ಷ ವೇದಿಕೆಯಾಯಿತು.
ರವಿಚಂದ್ರನ್ ದೃಶ್ಯ2, ರತ್ನನ್ ಪ್ರಪಂಚ, ಬಡವರಾಸ್ಕಲ್, ವಿಕ್ರಂ, ಅರ್ಜುನ್ ಗೌಡ, ಗರುಡ ಗಮನ ಋಷಭವಾಹನ, ಲವ್ ಯೂ ರಚ್ಚು, ಹೀಗೆ ಸಾಲು ಸಾಲು ಚಿತ್ರಗಳು ತೆರೆಕಂಡಿವೆ. ಅದರಲ್ಲೂ ಗರುಡುಗನಕ್ಕೆ ಕೊರೋನಾದ ಯಾವ ಸೋಂಕು ಹರಡಲಿಲ್ಲ. ಕೃಷ್ಣಟಾಕೀಸ್ ನಂಥ ಸದ್ದು ಮಾಡಲಿಲ್ಲ. ಪ್ರಜ್ವಲ್ ದೇವರಾಜ್ ಅವರ ವಿಕ್ರಂ ಮತ್ತು ಅರ್ಜುನ್ ಗೌಡ ಕೂಡ ಹೀಗೆ ಬಂದು ಹಾಗೇ ಎದ್ದು ಹೋಯಿತು. ಅದರಲ್ಲಿ ರತ್ನನ್ ಪ್ರಪಂಚ ಓಟಿಟಿಯಲ್ಲಿ ದೊಡ್ಡ ಸದ್ದು ಮಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆಯಿತು. ಈಗ ಬಡವರಾಸ್ಕಲ್ ಕೂಡ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಮನೆ ಮಾತಾಗಿದೆ.
2021ರಲ್ಲಿ ಬಿಡುಗಡೆಯಾದ ಶೇ.70ರಷ್ಟು ಚಿತ್ರಗಳು ಹೊಸಬರದು. ಹೊಸ ನಾಯಕನಟರು, ತಂತ್ರಜ್ಞರು ಸಮರ್ಥವಾಗಿ ಒಟಿಟಿಯನ್ನು ಬಳಸಿಕೊಂಡು ಗೆದ್ದರೂ, ಜನರ ಮನಸ್ಸಲ್ಲಿ ಇಳಿಯಲಿಲ್ಲ. ಇನ್ನು ಸಂತಸದ ವಿಚಾರವೆಂದರೆ, ಹೊಸಬರ ಶೇ. 90ರಷ್ಟು ಚಿತ್ರಗಳಿಗೆ ಹಾಕಿದ ಹಣ ವಾಪಸ್ಸು ಬಂದಿದೆಯಂತೆ.
ಹೊಸಬರ ಚಿತ್ರಗಳು ತೆರೆಕಂಡವು ಅನ್ನೋ ಸಂತೋಷದ ಜೊತೆಗೆ ಮತ್ತೊಂದು ಸಿಹಿಯೂ ಅದರಲ್ಲಿ ಸೇರಿದೆ. ಅದೇನೆಂದರೆ, ಹೊಸಬರ ಶೇ.70ರಷ್ಟು ಚಿತ್ರಗಳಲ್ಲಿ ಶೇ.90ರಷ್ಟು ಚಿತ್ರಗಳಿಗೆ ಹಾಕಿದ ಹಣವಾಪಸ್ಸು ಬಂದಿರುವುದು. ದುಃಖದ ವಿಚಾರವೆಂದರೆ, ರತ್ನನ್ ಪ್ರಪಂಚ, ದೃಶ್ಯ2, ಗರುಡಗಮನ ದಂಥ ಕೆಲವೇ ಚಿತ್ರಗಳು ಮಾತ್ರ ಜನಮನದಲ್ಲಿ ನಿಂತುಕೊಂಡವು ಅನ್ನೋದು.
ಒಟ್ಟಾರೆ 2021, ಕೊರೋನಾ ಭಯ ದೊಡ್ಡ ಹೀರೋಗಳಿಗೆ ತಟ್ಟಿತಾದರೂ, ಹೊಸಬರಿಗೆ ಒಳ್ಳೆ ಅವಕಾಶಗಳನ್ನು ತೆರೆದಿಟ್ಟಿತು. 2022ರ ಹೊಸ ವರ್ಷ ಕನ್ನಡ ಚಿತ್ರರಂಗಕ್ಕೆ ಯಾವ ದೆಸೆಯನ್ನು ತಂದು ಕೊಡುತ್ತದೆಯೋ ಕಾದು ನೋಡಬೇಕು.
ಇದನ್ನೂ ಓದಿ: 2022 Horoscope: ನಿಮ್ಮ 2022ರ ಭವಿಷ್ಯ ತಿಳಿದುಕೊಳ್ಳಿ, ಹೊಸವರ್ಷಕ್ಕೆ ಹೊಸ ಹುಮ್ಮಸ್ಸಿನಿಂದ ಪದಾರ್ಪಣೆ ಮಾಡಿ
(Happy New Year 2022 Yuvarathnaa Roberrt Kotigobba 3 Kannada best films in 2021)