ಭಾನುವಾರ, ಏಪ್ರಿಲ್ 27, 2025
HomeCinemaHarshika Poonacha - Bhuvan Ponnannaa Wedding : ಭುವನ್ ಹರ್ಷಿಕಾ ಕಲ್ಯಾಣ: ಕೊಡವ ಶೈಲಿಯಲ್ಲಿ...

Harshika Poonacha – Bhuvan Ponnannaa Wedding : ಭುವನ್ ಹರ್ಷಿಕಾ ಕಲ್ಯಾಣ: ಕೊಡವ ಶೈಲಿಯಲ್ಲಿ ಅದ್ದೂರಿ ಮದುವೆ

- Advertisement -

ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ ಮಂಗಳ ವಾದ್ಯದ ಸದ್ದು ಮೊಳಗಿದೆ. ನಟಿ ಹರ್ಷಿಕಾ ನಟ ಭುವನ್ ಗೆ (Harshika Poonacha – Bhuvan Ponnannaa Wedding) ಮದುವೆ ಸಂಭ್ರಮ ಕಳೆಗಟ್ಟಿದ್ದು, ಅಚ್ಚ ಕೆಂಪಿನ ಸೀರೆಯಲ್ಲಿ ನಟಿ ಹರ್ಷಿಕಾ ಶೋಭಿಸುತ್ತಿದ್ದಾರೆ. ಗುರು ಹಿರಿಯರ ಆಶಯದಂತೆ ಹರ್ಷಿಕಾ ಹಾಗೂ ಭುವನ ತಮ್ಮ ತವರು ಜಿಲ್ಲೆ ಕೊಡಗಿನಲ್ಲೇ, ಕೊಡವ ಸಂಪ್ರದಾಯದಂತೆ ಹೊಸಬದುಕಿಗೆ ಕಾಲಿರಿಸಲಿದ್ದು, ಸಿಂಪಲ್ ಹಾಗೂ ಸಂಪ್ರದಾಯ ಬದ್ಧ ಮದುವೆಗೆ ಹರ್ಷಿಕಾ ಹಾಗೂ ಭುವನ್ ಸಿದ್ಧವಾಗಿದ್ದಾರೆ.

ಗುರುವಾರ ಬೆಳಗ್ಗೆ 10.30ರಿಂದಲೇ ಮದುವೆ ಸಂಪ್ರದಾಯಗಳು ಆರಂಭವಾಗಿದ್ದು, ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ಶಾಸ್ತ್ರಗಳು ಆರಂಭಗೊಂಡಿವೆ. ಹರ್ಷಿಕಾ ಅಚ್ಚ ಕೆಂಪಿನ ಮದುವೆ ಸೀರೆಯಲ್ಲಿ ಶಾಸ್ತ್ರಕ್ಕೆ ಸಿದ್ಧವಾಗಿದ್ದು, ಕೊಡವ ಸಂಪ್ರದಾಯದಂತೆ ಸೀರೆ‌ಉಟ್ಟು ಕೊಡವ ಶೈಲಿಯ ಆಭರಣಗಳನ್ನು ತೊಟ್ಟು ದೇವತೆಯಂತೆ ಕಂಗೊಳಿಸುತ್ತಿದ್ದಾರೆ. ಇನ್ನು ನಟ ಭುವನ್ ಕೂಡ ಕೊಡವ ಶೈಲಿಯ ದಿರಿಸಿನಲ್ಲಿ ಮದುವೆ ಶಾಸ್ತ್ರಕ್ಕೆ ಸಿದ್ಧವಾಗಿದ್ದಾರೆ. ಕೊಡವ ಜೋಡಿಯ ಮದ್ವೆಯಲ್ಲಿ ಕೊಡವ ಶೈಲಿಯ ಬಗೆ ಬಗೆಯ ಭೋಜನ ಸಿದ್ಧವಾಗಿದೆ.

ನಾನ್ ವೆಜ್, ವೆಜ್ ಎರಡು ಶೈಲಿಯ ಊಟದ‌ ವ್ಯವಸ್ಥೆ ಮಾಡಲಾಗಿದ್ದು, ಕೊಡವ ಶೈಲಿಯ ,ನೂಪಟ್ಟು, ಪೋರ್ಕ್ ಪ್ರೈ, ಪೋರ್ಕ್ ಕರಿ, ಮಟನ್ ಬಿರ್ಯಾನಿ, ಮಟನ್ ಪ್ರೈ, ಚಿಕನ್ ಪ್ರೈ ನಾನ್ ವೆಜ್ ಪ್ರಿಯರಿಗೆ ಕಾದಿದೆ.ಇನ್ನು ವೆಜ್ ನಲ್ಲಿ ವೆಜಿಟೇಬಲ್ ಪಲಾವ್ ,ಆಲಸಂಡೆ ಪಲ್ಯ,ಬೆಂಡೆ ಪ್ರೈ, ಅನಾನಸ್ ಕರಿ, ಈರುಳ್ಳಿ ಕರಿ, ಮೊಸರು ವಡೆ, ತೆಂಗಿನ ಹಾಲು ,ವೆಜ್ ಕುರ್ಮಾ ಅತಿಥಿ ಸತ್ಕಾರಕ್ಕೆ ಸಿದ್ಧವಾಗಿದೆ.

ಈಗಾಗಲೇ ಹರ್ಷಿಕಾ ಹಾಗೂ ಭುವನ್ ಖುದ್ದು ರಾಜಕೀಯ ಹಾಗೂ ಸಿನಿಮಾ ರಂಗದ ಗಣ್ಯರನ್ನು ಮದುವೆಗೆ ಖುದ್ದು ಆಹ್ವಾನಿಸಿದ್ದು, ಭುವನ್ ಹಾಗೂ ಹರ್ಷಿಕಾ ಆಪ್ತರ ತಂಡ ಸೇರಿದಂತೆ ಸ್ಯಾಂಡಲ್ ವುಡ್ ನ ಎಲ್ಲ ಘಟಾನುಘಟಿ ನಟ-ನಟಿಯರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ‌. ಇದನ್ನೂ ಓದಿ : Sarkari Hiriya Prathamika Shale Kasaragod Movie : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾಕ್ಕೆ ಐದು ವರ್ಷ ಸಂಭ್ರಮ

ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಈಗ ವಿವಾಹ ಬಂಧನಕ್ಕೆ ಒಳಗಾಗುತ್ತಿದೆ. ನಟ ಭುವನ್ ಹಾಗೂ ಹರ್ಷಿಕಾ ಬಿಗ್ ಬಾಸ್ ಮನೆಯಲ್ಲಿದ್ದಾಗ ಪರಸ್ಪರ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಸುದ್ದಿ ಗೋಷ್ಠಿ ಕರೆದ ಜೋಡಿ ಮದುವೆ ವಿಚಾರ ಹಂಚಿಕೊಂಡಿತ್ತು.

https://www.youtube.com/watch?v=jLSv4cDsJ6o

Harshika Poonacha – Bhuvan Ponnannaa Wedding : Bhuvan Harshika Kalyana: A lavish wedding in Kodava style

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular