ಭಾನುವಾರ, ಏಪ್ರಿಲ್ 27, 2025
HomeCinemaHead Bush Controversy: ಸಂಕಷ್ಟದ ಸುಳಿಯಲ್ಲಿ 'ಹೆಡ್‍ಬುಶ್': ಅಷ್ಟಕ್ಕೂ ಡಾಲಿ ವಿರುದ್ಧ ತಿರುಗಿಬಿದ್ದಿದ್ಯಾರು

Head Bush Controversy: ಸಂಕಷ್ಟದ ಸುಳಿಯಲ್ಲಿ ‘ಹೆಡ್‍ಬುಶ್’: ಅಷ್ಟಕ್ಕೂ ಡಾಲಿ ವಿರುದ್ಧ ತಿರುಗಿಬಿದ್ದಿದ್ಯಾರು

- Advertisement -

ಬೆಂಗಳೂರು: Head Bush controversy: ನಟ ಡಾಲಿ ಧನಂಜಯ್ ನಿರ್ದೇಶಿಸಿ ನಟಿಸಿರುವ ಹೆಡ್‍ಬುಶ್ ಸಿನಿಮಾಗೆ ಹೊಸ ಸಂಕಷ್ಟ ಎದುರಾಗಿದೆ. ಕರ್ನಾಟಕದ ಪ್ರಸಿದ್ಧ ವೀರಗಾಸೆಗೆ ಚಿತ್ರದಲ್ಲಿ ಅವಮಾನ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದು ಕುಖ್ಯಾತ ಅಂಡರ್ ವಲ್ರ್ಡ್ ಡಾನ್ ಎಂಪಿ.ಜಯರಾಜ್ ಜೀವನಾಧಾರಿತ ಚಿತ್ರವಾಗಿದ್ದು, ಇದರಲ್ಲಿ ಡಾಲಿ ಧನಂಜಯ್ ಡಿಫರೆಂಟ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಗುತ್ತಿರುವ ಸಮಯದಲ್ಲೇ ಸಿನಿಮಾ ಪ್ರದರ್ಶನ ರದ್ದುಗೊಳಿಸುವಂತೆ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಪೊಲೀಸರಿಗೆ ದೂರು ನೀಡಿದೆ.

ಏನಿದು ವಿವಾದ..?
ಹೆಡ್‍ಬುಶ್ ಸಿನಿಮಾದಲ್ಲಿ ಬರುವ ಫೈಟಿಂಗ್ ದೃಶ್ಯವೊಂದರಲ್ಲಿ ನಾಯಕ ಡಾಲಿ ಧನಂಜಯ್ ಅವರು ವೀರಗಾಸೆ ಪಾತ್ರಧಾರಿಗೆ ಕಾಲಿನಿಂದ ಒದ್ದಿರುವ ಸನ್ನಿವೇಶ ಚಿತ್ರೀಕರಿಸಲಾಗಿದೆ. ಇದು ಅತ್ಯಂತ ಖಂಡನೀಯ. ಈ ದೃಶ್ಯದ ಮೂಲಕ ಚಿತ್ರತಂಡ ಶ್ರೀ ವೀರಭದ್ರ ಸ್ವಾಮಿಯ ಆರಾಧಕರ ಧಾರ್ಮಿಕ ಭಾವನೆಗೆ ಧಕ್ಕೆಯನ್ನು ತಂದಿದೆ. ಈ ಕೂಡಲೇ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕಬೇಕು ಹಾಗೂ ಚಿತ್ರತಂಡ ಕ್ಷಮಾಪಣೆ ಕೇಳಬೇಕು. ಮತ್ತೆ ಇಂಥ ಘಟನೆಗಳು ಮರುಕಳಿಸದಂತೆ ಚಿತ್ರತಂಡದ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ದೂರಿನಲ್ಲಿ ಉಲ್ಲೇಖೀಸಿದೆ.

ರಾಜ್ಯ ಕಲಾವಿದರ ಒಕ್ಕೂಟ ದೂರು:
ಹೆಡ್‍ಬುಷ್ ಸಿನಿಮಾದಲ್ಲಿ ವೀರಭದ್ರ ದೇವರ ಕುಣಿತ/ವೀರಗಾಸೆ ಕಲೆಯನ್ನು ದೇವರ ನಂಬಿಕೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಈ ಸಿನಿಮಾದಲ್ಲಿ ದೇವರಿಗೆ ಹೊಡೆಯುವ, ಒದೆಯುವ ದೃಶ್ಯವಿದೆ. ಈ ಹಿನ್ನೆಲೆ ನಟರಾದ, ಡಾಲಿ ಧನಂಜಯ್, ಲೂಸ್ ಮಾದ ಯೋಗೇಶ್, ವಸಿಷ್ಠಸಿಂಹ, ದೇವರಾಜು ಮತ್ತಿತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಇನ್ನೊಂದೆಡೆ ಕರಗ ಸಮಿತಿ ಕೂಡಾ ಚಿತ್ರತಂಡ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನ ಮೂಲಕ ಆಗ್ರಹಿಸಿದೆ.

ಈ ಬೆನ್ನಲ್ಲೇ ಹೆಡ್‍ಬುಶ್ ಸಿನಿಮಾದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಾಯ್‍ಕಾಟ್ ಹೆಡ್‍ಬುಶ್ ಅಭಿಯಾನ ಕೂಡಾ ಶುರುವಾಗಿದ್ದು, ಚಿತ್ರಪ್ರದರ್ಶನ ರದ್ದುಗೊಳಿಸುವಂತೆ ಒತ್ತಾಯಿಸಲಾಗಿದೆ.ಇನ್ನೊಂದೆಡೆ, ವಿವಾದದ ಬಗ್ಗೆ ಟ್ವಿಟರ್‍ನಲ್ಲಿರುವ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಡಾಲಿ ಧನಂಜಯ್, ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸೆಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ಇನ್ನು ಈ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿರುವ ಅವರು, ಕರಗ, ವೀರಗಾಸೆಗೆ ನಾವು ಅಪಮಾನ ಮಾಡಿಲ್ಲ. ಕಾಣದ ಕೈಗಳು ನನ್ನ ವಿರುದ್ಧ ಕೆಲಸ ಮಾಡುತ್ತಿವೆ. ಸಿನಿಮಾವನ್ನು ಸಿನಿಮಾ ರೀತಿಯಲ್ಲೇ ನೋಡಿ, ಇದರಲ್ಲಿ ರಾಜಕೀಯ ಮಾಡಬೇಡಿ ಎಂದಿದ್ದಾರೆ.

ಇದನ್ನೂ ಓದಿ: NEET CET Exams:ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ನೀಟ್, ಸಿಇಟಿ ಪರೀಕ್ಷೆಗಳಿಗೆ ಆನ್‌ಲೈನ್ ತರಬೇತಿ

ಇದನ್ನೂ ಓದಿ: Amulya Deepavali : ದೀಪಾವಳಿಗಾಗಿ ವಿಶಿಷ್ಟ ಪೋಟೋಶೂಟ್ ನಲ್ಲಿ ಮಿಂಚಿದ ನಟಿ ಅಮೂಲ್ಯ

the new trouble for Head Bush movie, directed by dolly dhananjay

RELATED ARTICLES

Most Popular