Hindi YouTuber praises the movie ‘Kantara’ :ಸದ್ಯ ಎಲ್ಲೆಲ್ಲೂ ಕಾಂತಾರಾ ಸಿನಿಮಾದ್ದೇ ಹವಾ ಎಂಬಂತಾಗಿದೆ. ಈ ಹಿಂದೆ ಕೆಜಿಎಫ್ 2 ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿಯೂ ಎಲ್ಲೆಲ್ಲೂ ರಾಕಿಭಾಯ್ ಫೀವರ್ ಇತ್ತು. ಇದೀಗ ಆ ಕ್ರೇಜ್ ರಿಷಬ್ ಶೆಟ್ಟಿಯತ್ತ ವಾಲಿದೆ. ಮೊದಲು ಕೇವಲ ಕನ್ನಡದಲ್ಲಿ ರಿಲೀಸ್ ಆದ ಈ ಸಿನಿಮಾ ಇದೀಗ ಭಾರೀ ಬೇಡಿಕೆಯ ಹಿನ್ನೆಲೆಯಲ್ಲಿ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೂಡ ಡಬ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಹಿಂದೆ ಒಂದು ಕಾಲವಿತ್ತು. ಕನ್ನಡ ಸಿನಿಮಾಗಳು ಅಂದರೆ ಮೂಗು ಮುರಿಯುವವರ ಸಂಖ್ಯೆಯೇ ಹೆಚ್ಚಿತ್ತು. ಆದರೆ ಈಗ ಹಾಗಲ್ಲ. ಕನ್ನಡ ಸಿನಿಮಾಗಳು ಇದೀಗ ಸಂಪೂರ್ಣ ಚಿತ್ರರಂಗವನ್ನೇ ಆಳುವ ಮಟ್ಟಕ್ಕೆ ಬೆಳೆದು ನಿಂತಿವೆ. ಕೆಜಿಎಫ್ 2, ಚಾರ್ಲಿ, ವಿಕ್ರಾಂತ್ ರೋಣದಂತಹ ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ಇದೀಗ ಈ ಸಾಲಿಗೆ ಕಾಂತಾರ ಸಿನಿಮಾ ಸೇರಿದ್ದು ಈ ಹಿಂದಿನ ಎಲ್ಲಾ ಸಿನಿಮಾಗಳ ದಾಖಲೆಯನ್ನು ಪುಡಿಪುಡಿ ಮಾಡುತ್ತಿದೆ.
Isht saak❤️❤️ pic.twitter.com/JniifNxVJI
— yaarivanu_unknownu (@memesmaadonu) October 13, 2022
ಕಾಂತಾರಾ ಸಿನಿಮಾ ಪ್ರಮೋಷನ್ಗಾಗಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಚಿತ್ರದ ನಾಯಕಿ ಸಪ್ತಮಿ ಗೌಡ ಎಲ್ಲಾ ಕಡೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಒಂದು ವಿಶೇಷ ಪ್ರಸಂಗಕ್ಕೆ ಸಾಕ್ಷಿಯಾಗಿದ್ದಾರೆ.ಯುಟ್ಯೂಬ್ನಲ್ಲಿ ಸಿನಿಮಾಗಳನ್ನು ರಿವ್ಯೂ ಮಾಡಿಯೇ ಫೇಮಸ್ ಆಗಿರುವ ಸೂರಜ್ ಕುಮಾರ್, ಕಾಂತಾರ ಸಿನಿಮಾದ ಸಂದರ್ಶನದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಕಾಲಿಗೆರಗಿ ನಮಸ್ಕಾರ ಮಾಡಿದ್ದಾರೆ.
ಹಿಂದಿ ಭಾಷೆಯ ಯುಟ್ಯೂಬರ್ ಈ ರೀತಿ ಕನ್ನಡ ಸಿನಿಮಾದ ನಾಯಕನ ಕಾಲಿಗೆರಗಿ ನಮಸ್ಕಾರ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಇದು ಹಿಂದಿ ಸಿನಿಮಾ ಪ್ರಿಯರೂ ಕೂಡ ಕನ್ನಡ ಸಿನಿಮಾದ ತಾಕತ್ತಿಗೆ ಹೇಗೆ ತಲೆಬಾಗಿದ್ದಾರೆ ಎಂಬುದನ್ನು ತೋರಿಸುತ್ತಿದೆ.
ನಾನು ತಮಾಷೆ ಮಾಡುತ್ತಿಲ್ಲ. ನಾನು ಈ ರೀತಿ ಯಾರಿಗೂ ಮಾಡಿಲ್ಲ. ನಾನು ಇಂತಹ ಪರ್ಫಾಮೆನ್ಸ್ ಎಲ್ಲಿಯೂ ನೋಡಿಲ್ಲ. ನನ್ನ ಬಳಿ ವರ್ಣನೆ ಮಾಡಲು ಪದಗಳೇ ಇಲ್ಲ ಎಂದು ಸೂರಜ್ ಕಾಲಿಗೆ ಬಿದ್ದಿದ್ದಾರೆ. ರಿಷಬ್ ಕೂಡ ಸೂರಜ್ರ ಸಿನಿಮಾ ಪ್ರೀತಿಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನು ಓದಿ : Gyanvapi Mosque : ಇಂದು ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕ ಶಿವಲಿಂಗದ ಕಾರ್ಬನ್ ಡೇಟಿಂಗ್ ಪರೀಕ್ಷೆಯ ತೀರ್ಪು ಸಾಧ್ಯತೆ
ಇದನ್ನೂ ಓದಿ : Super 10 League : ಕ್ರಿಕೆಟ್+ಸಿನಿಮಾ: ಕಿಚ್ಚನ ಸೂಪರ್ 10 ಲೀಗ್‌ನಲ್ಲಿ ಆಡಲಿದ್ದಾರೆ ವಿಂಡೀಸ್ ದೈತ್ಯ ಕ್ರಿಸ್ ಗೇಲ್

Hindi YouTuber praises the movie ‘Kantara’ falling on Rishabh Shetty’s feet: video viral