ಭಾನುವಾರ, ಏಪ್ರಿಲ್ 27, 2025
HomeCinemaDeepika padukone: ಬಾಲಿವುಡ್ ನಿಂದ ಹಾಲಿವುಡ್ ಗೆ ಡಿಪ್ಪಿ: ನಟನೆ ಜೊತೆ ನಿರ್ಮಾಣಕ್ಕೂ ಸೈ ಎಂದ...

Deepika padukone: ಬಾಲಿವುಡ್ ನಿಂದ ಹಾಲಿವುಡ್ ಗೆ ಡಿಪ್ಪಿ: ನಟನೆ ಜೊತೆ ನಿರ್ಮಾಣಕ್ಕೂ ಸೈ ಎಂದ ಕನ್ನಡತಿ

- Advertisement -

ಬಾಲಿವುಡ್ ನ ಟಾಪ್ ನಟಿಮಣಿಯರ ಸಾಲಿನಲ್ಲಿ ಸ್ಥಾನ ಪಡೆದಿರೋ ಕನ್ನಡತಿ ದೀಪಿಕಾ ಪಡುಕೋಣೆ ಈಗ ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ್ದಾರೆ. ಅಷ್ಟೇ ಅಲ್ಲ ನಟನೆ ಜೊತೆ ತಮ್ಮ ಬ್ಯಾನರ್ ನಲ್ಲೇ  ಸಿನಿಮಾ ನಿರ್ಮಾಣಕ್ಕೂ ಡಿಪ್ಪಿ ಸೈ ಎಂದಿದ್ದಾರೆ.

2017 ರಲ್ಲಿ ಎಕ್ಸ್ ಎಕ್ಸ್ ಎಕ್ಸ್  ದಿ ರಿಟರ್ನ್ ಆಫ್ ಕ್ಯಾಂಡರ್ ಕೇಜ್ ಸಿನಿಮಾದ ಮೂಲಕ ಹಾಲಿವುಡ್ ಗೆ ಕಾಲಿಟ್ಟಿದ್ದ ದೀಪಿಕಾ ಪಡುಕೋಣೆ ಈಗ ಎರಡನೆ ಬಾರಿಗೆ ಹಾಲಿವುಡ್ ಗೆ ಹಾರಿದ್ದಾರೆ. 

ಎಸ್ಟಿಎಕ್ಸ್ ಫಿಲ್ಸಂ ಮತ್ತು ಟೆಂಪಲ್ ಹಿಲ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ  ರೋಮ್ಯಾಂಟಿಕ್  ಕಾಮಿಡಿ ಕಥೆಯುಳ್ಳ  ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಈ ಸಿನಿಮಾ ನಿರ್ಮಾಣಕ್ಕೂ ತಮ್ಮ ಕಾ ಪ್ರೊಡಕ್ಷನ್ ಹೌಸ್ ಜೊತೆಯಲ್ಲಿ ದೀಪಿಕಾ ಕೈ ಜೋಡಿಸಿದ್ದಾರೆ. ಅಷ್ಟೇ ಅಲ್ಲ  ಪಾಲುದಾರಿಕೆ ಬಗ್ಗೆ ಮಾತನಾಡಿರುವ ದೀಪಿಕಾ ಪಡುಕೋಣೆ, ಕಾ ಪ್ರೊಡಕ್ಷನ್ ನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಪಡಿಸುವ  ನಿಟ್ಟಿನಲ್ಲಿ ಎಸ್ಟಿಎಕ್ಸ್ ಮತ್ತು  ಟೆಂಪಲ್ ಹಿಲ್ ಜೊತೆ ನಿರ್ಮಾಣದಲ್ಲಿ ಕೈ ಜೋಡಿಸಿರುವುದಾಗಿ ದೀಪಿಕಾ ಹೇಳಿದ್ದಾರೆ.

ಇತ್ತೀಚಿಗಷ್ಟೇ ದೀಪಿಕಾ ಹಾಗೂ ರಣವೀರ್ ಮುಂಬೈನ ಆಸ್ಪತ್ರೆಗೆ ಭೇಟಿ ನೀಡಿದ್ದು, ಇದೇ ಕಾರಣಕ್ಕೆ ದೀಪಿಕಾ ತಾಯಿಯಾಗುತ್ತಿದ್ದಾರೆ ಎಂಬ ರೂಮರ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಡಿದ್ದವು. ಆದರೆ ಇದಕ್ಕೆ ದೀಪಿಕಾ ಅಥವಾ ರಣವೀರ್ ಸ್ಪಷ್ಟನೆ ನೀಡಿಲ್ಲ.

Deepika Padukone to make her Hollywood comeback with new movie.

RELATED ARTICLES

Most Popular