ಒಂದಷ್ಟು ನಿರೀಕ್ಷೆಗಳ ಒಡ್ಡೋಲಗದ ನಡುವೆ ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ ಹೋಪ್ (Hope Kannada movie Released). ಟ್ರೇಲರ್ ಮೂಲಕವೇ ನಾನಾ ದೆಸೆಯಲ್ಲಿ ಕುತೂಹಲ ಹುಟ್ಟಿಸಿರುವ ಚಿತ್ರ ಇದೇ ಜುಲೈ 8ಕ್ಕೆ ತೆರೆಗೆ ಬರ್ತಿದೆ. ಪ್ರಾಮಾಣಿಕ ಅಧಿಕಾರಿ ವರ್ಗಾವಣೆ, ಅದರ ಸುತ್ತ ನಡೆಯುವ ರಾಜಕೀಯ ಆಟ, ಕಾನೂನು ಹೋರಾಟದ ಕಥಾಹಂದರವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
ಚಿತ್ರರಂಗದಿಂದ ಒಂದಷ್ಟು ಗ್ಯಾಪ್ ತೆಗೆದುಕೊಂಡಿದ್ದ ಶ್ವೇತಾ ಶ್ರೀವಾಸ್ತವ್ ಹೋಪ್ ಸಿನಿಮಾ ಮೂಲಕ ಮತ್ತೆ ಕಂಬ್ಯಾಕ್ ಮಾಡ್ತಿದ್ದು, ಕೆಎಎಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಕೆಎಎಸ್ ಅಧಿಕಾರಿ ವರ್ಗಾವಣೆ ಜನ ಸಾಮಾನ್ಯರ ಏನೆಲ್ಲಾ ಎಂಬ ಕಥಾವಸ್ತುವನ್ನು ಇಟ್ಕೊಂಡು ಸಿನಿಮಾ ಮಾಡಲಾಗಿದೆ. ಸುಮಲತಾ ಅಂಬರೀಷ್, ಪ್ರಮೋದ್ ಶೆಟ್ಟಿ, ಗೋಪಾಲ ಪಾಂಡೆ, ಪ್ರಕಾಶ್ ಬೆಳವಾಡಿ, ಸಿರಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ. ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್, ಹೋಪ್ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಜಲ್ವಂತ ಸಿನಿಮಾ ನಿರ್ದೇಶಿಸಿದ ಅಂಬರೀಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಎಸ್.ಹಲ್ಲೇಶ್ ಕ್ಯಾಮರಾ ವರ್ಕ್ ಮಾಡಿದ್ದು, ರಿತ್ವಿಕ್ ಮುರಳೀಧರ್ ಸಂಗೀತ ನೀಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾವಾಗಿರುವ ಹೋಪ್ ಇದೇ ಜುಲೈ 8ರಂದು ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿದೆ.
ಹೋಪ್ ಮೂಲಕ ಸಿಂಪಲ್ ಹುಡುಗಿಯ ಗ್ರ್ಯಾಂಡ್ ರೀ ಎಂಟ್ರಿ
ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನ ಮನಗೆದ್ದ ನಟಿ ಶ್ವೇತಾ ಶ್ರೀವಾಸ್ತವ್ ಹುಟ್ಟುಹಬ್ಬದ ಪ್ರಯುಕ್ತ ಹೋಪ್ ಸಿನಿಮಾದ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆಲ ವರ್ಷಗಳಿಂದ ತಾಯ್ತನಕ್ಕಾಗಿ ನಟನೆಯಿಂದ ಬ್ರೇಕ್ ಪಡೆದಿದ್ದ ಶ್ವೇತಾ ಶ್ರೀವಾಸ್ತವ್ ಮತ್ತೆ ಹೋಪ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಮರಳಿದ್ದಾರೆ. ಹೋಪ್ ಸಿನಿಮಾದಲ್ಲಿ ಶ್ವೇತಾ ಶ್ರೀವಾಸ್ತವ್ ಕೆಎಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂಬರೀಶ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದಲ್ಲಿ ಶ್ವೇತಾ ಕೆಎಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರೋದರ ಬಗ್ಗೆ ಸಂಭ್ರಮದಿಂದ ಮಾಹಿತಿ ನೀಡಿರೋ ಶ್ವೇತಾ ಶ್ರೀವಾಸ್ತವ್ 34 ದಿನಗಳಲ್ಲೇ ಶೂಟಿಂಗ್ ಮುಗಿದಿದ್ದು, ಲಾಕ್ ಡೌನ್ ಅವಧಿಯಲ್ಲೇ ಶೂಟಿಂಗ ಮುಗಿದಿದೆ. ಸಿನಿಮಾದಲ್ಲಿ ರಾಜಕೀಯ ಅಂಶಗಳನ್ನು ಸೇರಿಸಲಾಗಿದೆಯಂತೆ.
ಕೆಎಎಸ್ ಅಧಿಕಾರಿ ಪಾತ್ರದ ಶ್ವೇತಾ ಪೋಸ್ಟ್ ಲುಕ್ ರಿವೀಲ್ ಆಗಿದ್ದು, ಸಖತ್ ಗ್ರ್ಯಾಂಡ್ ಆಂಡ್ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಸದೆ ಸುಮಲತಾ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರಂತೆ. ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಈ ಸಿನಿಮಾವನ್ನು ನಿರ್ಮಿಸಿದ್ದು, ಕಿರಗೂರಿನ ಗಯ್ಯಾಳಿಗಳು ಚಿತ್ರದಲ್ಲಿ ಶ್ವೇತಾ ಶ್ರೀವಾಸ್ತವ್ ಪಾತ್ರ ನೋಡಿ ಮೆಚ್ಚಿಕೊಂಡಿದ್ದರಂತೆ. ಅದೇ ಕಾರಣಕ್ಕೆ ಶ್ವೇತಾ ಶ್ರೀವಾಸ್ತವ್ ಅವರನ್ನೇ ಹೋಪ್ ಚಿತ್ರದ ಕೆಎಎಸ್ ಅಧಿಕಾರಿ ಪಾತ್ರಕ್ಕೆ ಆಯ್ಕೆ ಮಾಡಿ ಒಪ್ಪಿಸಿದ್ದಾರಂತೆ.
ಇದನ್ನೂ ಓದಿ : Koffee With Karan 7 : ಫಸ್ಟ್ ನೈಟ್ ಬಗ್ಗೆ ಬಹಿರಂಗ ಹೇಳಿಕೆ ನೀಡಿದ ಆಲಿಯಾ ಭಟ್
Hope Kannada movie Released on July 8, Snooker Varsha Produced first film