ಹಾಟ್ ಡ್ರೆಸ್ ತೊಟ್ಟು ಪೋಟೋ ಶೂಟ್ ಮಾಡೋದು ಮಾಮೂಲು. ನಟಿಯೊಬ್ಬಳು ಹಾಟ್ ಡ್ರೆಸ್ ತೊಟ್ಟಾಗ ಟ್ರೋಲ್ ಮಾಡೋರಿಗೇನು ಕಡಿಮೆಯಿಲ್ಲ. ಹೀಗೆ ನಟಿಯರು ಹಾಟ್ ಡ್ರೆಸ್ ಧರಿಸಿದಾಗ ಟ್ರೋಲ್ ಮಾಡುವವರಿಗೆ ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಸವಾಲು ಹಾಕಿದ್ದಾರೆ.

ತೆಲುಗು ನಟಿ ಸಮಂತಾ ಒಂದಿಲ್ಲೊಂದು ವಿಚಾರದಲ್ಲಿ ಸದಾ ಸುದ್ದಿಯಾಗ್ತಾರೆ. ಈ ಹಿಂದೆ ವಿದೇಶಕ್ಕೆ ತೆರಳಿದ್ದಾಗ ಬಿಕನಿ ತೊಟ್ಟು ಸಖತ್ ಟ್ರೋಲ್ ಆಗಿದ್ದರು.

ಪ್ರತಿಷ್ಠಿತ ಅಕ್ಕಿನೇನಿ ಕುಟುಂಬದ ಸೊಸೆಯಾಗಿ ಹೀಗೆಲ್ಲಾ ಬಟ್ಟೆ ಹಾಕಬಾರದು ಅಂತಾ ಅಭಿಮಾನಿಗಳು ಟ್ರೋಲ್ ಪೇಜ್ ಗಳಲ್ಲಿ ಟ್ರೋಲ್ ಮಾಡಿದ್ದರು.

ಟ್ರೋಲ್ ಪೇಜ್ ಗಳಲ್ಲಿ ಸಮಂತಾ ಬಿಕನಿ ಪೋಟೋ ಟ್ರೋಲ್ ಆಗುತ್ತಲೇ ಸಮಂತಾ ಗರಂ ಆಗಿದ್ದಾರೆ. ಮಾತ್ರವಲ್ಲ ಮದ್ಯದ ಬೆರಳಿನ ಪೋಟೋ ಹಾಕಿ ಟ್ರೋಲ್ ಮಾಡುವವರಿಗೆ ಟಾಂಗ್ ಕೊಟ್ಟಿದ್ದರು.

ಇಷ್ಟಕ್ಕೆ ಸುಮ್ಮನಾಗದ ಸಮಂತಾ ತನ್ನ ಇನ್‍ಸ್ಟಾಗ್ರಾಮ್ ಪೇಜ್ ನಲ್ಲಿ ಮತ್ತಷ್ಟು ಹಾಟ್ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಸಮಂತಾ ಟ್ರೋಲ್ ಮಾಡುವವರಿಗೆ ಟಾಂಗ್ ಕೊಟ್ಟಿದ್ದಾರೆ.

ಮದುವೆಯಾದ ನಂತರದಲ್ಲಿ ಹಾಟ್ ಡ್ರೆಸ್ ಹಾಕಿರೋ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದರೊ ಸಮಂತಾ ಮೊದಲ ಟ್ರೋಲ್ ನಿಂದ ನನಗೆ ತುಂಬಾ ಬೇಸರವಾಗಿತ್ತು.

ಆದರೆ ಎರಡನೇ ಬಾರಿ ಅಂತಹದ್ದೇ ಡ್ರೆಸ್ ಹಾಕಿದಾಗ ಯಾರೂ ನನಗೆ ಟ್ರೋಲ್ ಮಾಡಿರಲಿಲ್ಲ, ಮೊದಲ ಬಾರಿಗೆ ನನಗೆ ಸಖತ್ ಭಯವಾಗಿತ್ತು. ನಂತರ ನಮಗೆ ಅಭ್ಯಾಸವಾಗಿ ಹೋಗುತ್ತದೆ ಎಂದಿದ್ದಾರೆ.

ಫ್ಲಾಪ್ ನಟಿ ಎಂದು ಕರೆದವರ ವಿರುದ್ಧವೂ ಕಿಡಿಕಾರಿದ್ದ ಸಮಂತಾ, ಸ್ಟಾರ್ ನಟರ ಸಿನಿಮಾಗಳು ಸಾಲು ಸಾಲು ಫ್ಲಾಪ್ ಆದರೂ ಅವರನ್ನು ಒಪ್ಪುತ್ತಾರೆ. ಆದರೆ ನಟಿಯರು ಕಷ್ಟಪಟ್ಟು ಸಿನಿಮಾ ಮಾಡಿದರೂ ಯಾರೂ ಅವರನ್ನು ಹೊಗಳುವುದಿಲ್ಲ.

ಸಿನಿಮಾ ಫ್ಲಾಪ್ ಆದರೆ ಆ ಚಿತ್ರದ ನಟಿಯರೇ ಕಾರಣ ಎಂದು ಹೇಳುತ್ತಾರೆ. ನಟಿಯರ ಒಂದು ಸಿನಿಮಾ ಸೋತರು ಫ್ಲಾಪ್ ಎಂದು ಕರೆಯುತ್ತಾರೆ ಎಂದು ಗರಂ ಆಗಿದ್ದರು.

ಸಮಾಜ ನಟಿಯರು ಹಾಟ್ ಡ್ರೆಸ್ ಹಾಕಿದ ಕೂಡಲೇ ಟ್ರೋಲ್ ಮಾಡೋ ಮನಸ್ಥಿತಿ ಬದಲಾಗಬೇಕು ಅಂತಾ ಸಮಂತಾ ಹೇಳಿದ್ದಾರೆ.