ಭಾನುವಾರ, ಏಪ್ರಿಲ್ 27, 2025
HomeCinemaನಾನು ಮಗು ಮುಖ ನೋಡಲ್ಲ…! ಮೇಘನಾ ರಾಜ್ ಹೀಗಂದಿದ್ದು ಯಾಕೆ ಗೊತ್ತಾ…!!

ನಾನು ಮಗು ಮುಖ ನೋಡಲ್ಲ…! ಮೇಘನಾ ರಾಜ್ ಹೀಗಂದಿದ್ದು ಯಾಕೆ ಗೊತ್ತಾ…!!

- Advertisement -

ಚಿರು ಅಗಲಿಕೆಯ ನೋವಲ್ಲೇ ನೊಂದು ಬೆಂದಿರುವ ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬ ಧರೆಗೆ ಬಂದಿರುವ ಜ್ಯೂನಿಯರ್ ಚಿರು ಮುಖ ನೋಡಿ ಎಲ್ಲ ದುಃಖವನ್ನು ಮರೆಯುವ ಪ್ರಯತ್ನದಲ್ಲಿದೆ.

ಈ ಮಧ್ಯೆ ತನ್ನನ್ನು ಅಗಲಿ ಹೋದರೂ ಚಿರು ಎಂದೂ ತನ್ನೊಂದಿಗೆ ಮಗು ರೂಪದಲ್ಲಿ ಇದ್ದಾರೆ ಎಂದುಕೊಂಡೇ ಕಾಲ ಕಳೆದ ಮೇಘನಾ ರಾಜ್ ಮಗು ಹುಟ್ಟಿದ ಕೂಡಲೇ ನಾನು ಮಗು ಮುಖ ನೋಡಲ್ಲ ಅಂತ ನಿರ್ಧರಿಸಿದ್ರಂತೆ.

ಮೇಘನಾ ಇಂತಹದೊಂದು ಕಠಿಣವಾದ ನಿರ್ಧಾರ ಮಾಡೋಕೆ ಕಾರಣ ಏನು ಗೊತ್ತಾ…? ಚಿರು ತಮಗೆ ಮಗು ಹುಟ್ಟುತ್ತೆ ಅಂತ ತಿಳಿದಾಗ ತುಂಬ ಖುಷಿ ಪಟ್ಟಿದ್ರಂತೆ. ಅಷ್ಟೇ ಅಲ್ಲ ಮಗುವನ್ನು ನಾನೇ ಮೊದಲು ನೋಡಬೇಕು ಎಂದೂ ಆಸೆ ಪಟ್ಟಿದ್ದರಂತೆ.

ಹೀಗಾಗಿ ಚಿರು ಇಲ್ಲದೇ ಹೋದ್ರು ಚಿರುವಿನ ಕನಸು ಈಡೇರಿಸಬೇಕು ಅಂತ ತೀರ್ಮಾನ ಮಾಡಿದ ಮೇಘನಾ ಹುಟ್ಟಿದ ಮಗುವನ್ನು ಮೊದಲು ತಂದೆಯ ಭಾವಚಿತ್ರಕ್ಕೆ ತೋರಿಸಿ ಬಳಿಕ ನನಗೆ ತೋರಿಸಿ ಎಂದು ವೈದ್ಯರಿಗೆ ಮೊದಲೇ ಹೇಳಿದ್ದರಂತೆ.

ಹೆರಿಗೆಯ ಮಾರಣಾಂತಿಕ ನೋವು ಮಗುವಿನ ಮುಖ ನೋಡಿದ ತಕ್ಷಣ ಮುಗಿದು ಹೋಗುತ್ತೆ ಅಂತಾರೆ. ಅದಕ್ಕೆ ಹೆರಿಗೆ ಬಳಿಕ ಮೊದಲು ಮಗುವನ್ನು ಹೆತ್ತತಾಯಿಗೆ ತೋರಿಸುತ್ತಾರೆ.

ಆದರೆ ಮೇಘನಾ ರಾಜ್ ಮಾತ್ರ ಇದಕ್ಕೆ ಅಪವಾದ ಎಂಬಂತೆ ತನ್ನ ನೋವನ್ನು ಮರೆತು ಗಂಡನ ಆಸೆಯಂತೆ ಅವರೆ ಮೊದಲು ಮಗು ನೋಡಲಿ ಎಂದು ಬಯಸಿ ಚಿರು ಆಸೆ ಈಡೇರಿಸಿದ್ದಾರೆ.

ಇದನ್ನು ಓದಿ : ಮೇಘನಾಗೆ ಇನ್ನು ಚಿರು ಸಾವನ್ನುಅರಗಿಸಿಕೊಳ್ಳೋಕಾಗಿಲ್ಲ….! ಮಗಳ ನೋವನ್ನು ಬಿಚ್ಚಿಟ್ಟ ಸುಂದರ ರಾಜ್…!!

ಅಷ್ಟೇ ಅಲ್ಲ ಚಿರು ನಿಧನವಾದಾಗಲೂ ಮೇಘನಾ ಚಿರು ಎಲ್ಲೂ ಹೋಗಿಲ್ಲ ನನ್ನಲ್ಲೇ ಇದ್ದಾರೆ. ನಾನು ಈ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ತಾಯ್ತನವನ್ನು ಕಾಪಾಡಿಕೊಂಡು ಮಗುವಿಗೆ ಜನ್ಮ ನೀಡುತ್ತೇನೆ. ಸಾಕಿ ಸಲಹುತ್ತೇನೆ ಎಂಬ ಧೃಡ ನಿರ್ಧಾರ ಮಾಡಿದ್ದರಂತೆ.

ಇದನ್ನು ಓದಿ : ಕೊನೆಗೂ ಈಡೇರಲಿಲ್ಲ ಸುಂದರರಾಜ್ ಸುಂದರ ಕನಸು

ಮೇಘನಾರಾಜ್ ತಾಯಿ ಪ್ರಮೀಳಾ ಕೂಡ ಚಿರು ಎಲ್ಲೂ ಹೋಗಿಲ್ಲ. ನಿನ್ನ ಹೊಟ್ಟೆಯಲ್ಲಿ ಹುಟ್ಟಿ ಬರುತ್ತಾನೆ. ತಾಯ್ತನ ಚಿರು ನಿನಗೆ ಕೊಟ್ಟು ಹೋದ ಮರೆಯಲಾಗದ ಕೊಡುಗೆ ಎಂದಿದ್ದರಂತೆ.

RELATED ARTICLES

Most Popular