Jothe Jotheyali Team : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಸದ್ಯ ವಿವಾದದ ಕಾರಣಗಳಿಂದಲೇ ಸುದ್ದಿಯಲ್ಲಿದೆ. ಈ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಿರುದ್ಧ ಧಾರವಾಹಿ ತಂಡದಿಂದ ಗೇಟ್ಪಾಸ್ ಪಡೆದಿದ್ದಾರೆ. ಅಲ್ಲದೇ ಕಿರುತೆರೆಯಿಂದ 2 ವರ್ಷಗಳ ನಿಷೇಧವನ್ನೂ ಅನುಭವಿಸುತ್ತಿದ್ದಾರೆ. ಅನಿರುದ್ಧ ಜತ್ಕರ್ ಹಾಗೂ ಆರೂರು ಜಗದೀಶ್ ನಡುವಿನ ಗುದ್ದಾಟದಿಂದ ಧಾರವಾಹಿಗೆ ಇದೀಗ ಮುಖ್ಯ ಪಾತ್ರಧಾರಿ ಇಲ್ಲದಂತಾಗಿದೆ.
ಜೊತೆ ಜೊತೆಯಲಿ ಧಾರವಾಹಿ ತಂಡವು ಇದೀಗ ಮುಖ್ಯ ಪಾತ್ರಧಾರಿಯ ಹುಡುಕಾಟದಲ್ಲಿದೆ. ಈಗಾಗಲೇ ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ ಕರುನಾಡ ಜನತೆಯ ಮನಸ್ಸನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಈ ಪಾತ್ರಕ್ಕಾಗಿ ಸೂಕ್ತವಾದ ಕಲಾವಿದನನ್ನು ಆಯ್ಕೆ ಮಾಡಬೇಕಾದ ಬಹುದೊಡ್ಡ ಜವಾಬ್ದಾರಿ ಇದೀಗ ಧಾರವಾಹಿ ತಂಡದ ಮೇಲಿದೆ .
ಅನಿರುದ್ಧರನ್ನು ಧಾರವಾಹಿಯಿಂದ ಹೊರಗೆ ಕಳುಹಿಸಿರುವ ಜೊತೆ ಜೊತೆಯಲ್ಲಿ ತಂಡ ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧರನ್ನು ಹೋಲುವ ಮತ್ತೊಬ್ಬ ಕಲಾವಿದರಿಗಾಗಿ ಹುಡುಕಾಟ ನಡೆಸ್ತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಸಮಯದಲ್ಲಿ ಅತ್ಯಂತ ಮುನ್ನೆಲೆಗೆ ಬಂದಿರುವ ಹೆಸರು ನಿರ್ದೇಶಕ ಅನೂಪ್ ಭಂಡಾರಿ…! ಹೌದು.. ನಿರ್ದೇಶಕ ಅನೂಪ್ ಭಂಡಾರಿಗೆ ಈ ಧಾರವಾಹಿಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವಂತೆ ಆಫರ್ ಬಂದಿದೆಯಂತೆ.
ಈ ಸಂಬಂಧ ಖುದ್ದು ಮಾಹಿತಿ ನೀಡಿರುವ ನಿರ್ದೇಶಕ ಅನೂಪ್ ಭಂಡಾರಿ, ನನಗೆ ಜೊತೆ ಜೊತೆಯಲ್ಲಿ ಧಾರವಾಹಿ ತಂಡದಿಂದ ಇಂತಹದ್ದೊಂದು ಆಫರ್ ಬಂದಿದ್ದು ನಿಜ. ಆದರೆ ನಾನು ಈ ಆಫರ್ನ್ನು ನಿರಾಕರಿಸಿದ್ದೇನೆ. ನಾನು ಸದ್ಯ ಹೊಸದೊಂದು ಸಿನಿಮಾವನ್ನು ಘೋಷಣೆ ಮಾಡುವ ತಯಾರಿಯಲ್ಲಿದ್ದೇನೆ. ಹೀಗಾಗಿ ಇದರ ಸ್ಕ್ರಿಪ್ಟ್ ಕೆಲಸದಲ್ಲಿ ನಾನು ನಿರತನಾಗಿದ್ದೇನೆ. ಈ ಸಂದರ್ಭದಲ್ಲಿ ನನಗೆ ಧಾರವಾಹಿಯಲ್ಲಿ ನಟಿಸಲು ಸಮಯ ಇಲ್ಲ ಎಂದು ಹೇಳಿದ್ದಾರೆ .
ಧಾರವಾಹಿ ತಂಡದಿಂದ ಹೊರ ನಡೆದ ಬಳಿಕವೂ ಅನಿರುದ್ಧ ಬಹಿರಂಗವಾಗಿಯೇ ನಾನು ಈ ಧಾರವಾಹಿಗೆ ಮರಳಲು ರೆಡಿ ಇದ್ದೇನೆ ಎಂದು ಹೇಳಿದ್ದರು. ಆದರೆ ಆರೂರು ಜಗದೀಶ್ ಮಾತ್ರ ಯಾವುದೇ ಕಾರಣಕ್ಕೂ ಅನಿರುದ್ಧ ಜೊತೆಗೆ ಮತ್ತೆ ಕೆಲಸ ಮಾಡಲು ಒಪ್ಪುತ್ತಲೇ ಇಲ್ಲ. ಇದೀಗ ಅನೂಪ್ ಭಂಡಾರಿ ಕೂಡ ಈ ಪಾತ್ರಕ್ಕೆ ನೋ ಎಂದಿದ್ದಾರೆ. ಹೀಗಾಗಿ ಜೊತೆ ಜೊತೆಯಲಿ ತಂಡ ಹೊಸ ಆರ್ಯವರ್ಧನನ ಹುಡುಕಾಟಕ್ಕೆ ಮತ್ತಷ್ಟು ತಯಾರಿ ನಡೆಸಿದೆ.
ಇದನ್ನು ಓದಿ : POLICE COMPLAINT ON WOMAN : ಪತಿಯ ಮನೆಯ 10 ಲಕ್ಷ ರೂ. ದೋಚಿ ತವರು ಮನೆಗೆ ಎಸ್ಕೇಪ್ ಆದ ಪತ್ನಿ
ಇದನ್ನೂ ಓದಿ : bath naked in public : ಗಂಡು ಮಗು ಬೇಕೆಂಬ ಹಂಬಲಕ್ಕೆ ಪತ್ನಿಗೆ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡಿಸಲು ಮುಂದಾದ ಪತಿ
I Had Received Offer From Jothe Jotheyali Team For Aryavardhan S Role Says Director Anup Bhandari