ಮಂಗಳವಾರ, ಏಪ್ರಿಲ್ 29, 2025
HomeCinemaಮಾದಕತೆಯೇ ಮೈತುಂಬಿದ ಮಾಡೆಲ್: ಜೀನಲ್ ಜೋಶಿ ಪೋಟೋಸ್ ವೈರಲ್

ಮಾದಕತೆಯೇ ಮೈತುಂಬಿದ ಮಾಡೆಲ್: ಜೀನಲ್ ಜೋಶಿ ಪೋಟೋಸ್ ವೈರಲ್

- Advertisement -

ಬಾಲಿವುಡ್ (Bollywood) , ಸ್ಯಾಂಡಲ್ ವುಡ್‌ (Sandalwood) , ಟಾಲಿವುಡ್ (Tollywood) , ಕಾಲಿವುಡ್ (Kallywood) ಹೀಗೆ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟ- ನಟಿಯರಿಗೆ ಲಕ್ಷಾಂತರ ಅಭಿಮಾನಿಗಳಿರೋದು ಕಾಮನ್.‌ ಆದರೆ ಈ ಸುಂದರಿ ಸಿನಿಮಾಕ್ಕೆ‌‌ ಬಣ್ಣ ಹಚ್ಚೋ ಮುನ್ನವೇ ಸೋಷಿಯಲ್ ಮೀಡಿಯಾದಲ್ಲಿ (Social Media) ಹೆಸರುವಾಸಿ. ಅಷ್ ಯಾಕೆ ಮೈತುಂಬ ಬಟ್ಟೆ ಹಾಕೋದೇ ಅಲರ್ಜಿ ಅಂತಿರೋ ಈ ಬೆಡಗಿಯ ಅಕೌಂಟ್ ತುಂಬ ಬಿಸಿ ಏರಿಸೋ, ಪೋಟೋಗಳದ್ದೇ‌ಕಾರು ಭಾರು. ಇಷ್ಟೆಲ್ಲ ವಿವರಣೆ ಕೊಡ್ತಿದ್ದ ಹಾಗೇ ನಾವು ಹೇಳ್ತಿರೋದು ಯಾರ ಬಗ್ಗೆ ಅಂತ ನಿಮಗೆ ಅರ್ಥ ಆಗಿರಬೇಕು ಅಲ್ವಾ? ಹೌದು ಆಕೆ ಮತ್ಯಾರೂ ಅಲ್ಲ ಮಾಡೆಲಿಂಗ್ (Modeling) ಕ್ಷೇತ್ರದ ಜೋಶ್  ಜೀನಲ್ ಜೋಶಿ (Jinal Joshi).

Indian Famous Acctress Jinal Joshi Latest Photoshoots
Image Credit : Jinal Joshi / Instagram

ಮುಂಬೈ (Mumbai) ನಲ್ಲೇ ಹುಟ್ಟಿಬೆಳೆದ ಜೀನಲ್ ಜೋಶಿ ಮಹತ್ವಾಕಾಂಕ್ಷಿ. ಮಾಡೆಲಿಂಗ್ ನಲ್ಲೇ ಕೆರಿಯರ್ ಕಟ್ಟಿದ ಜೀನಲ್ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಫೇಮಸ್. ಅವರ ಸೋಷಿಯಲ್ ಮೀಡಿಯಾ ಅಕೌಂಟ್ ನೋಡೋ ಯುವ ಹೃದಯಗಳು ಆಕೆಯ ಅಭಿಮಾನಿ ಆಗೋದ್ರಲ್ಲಿ ಸಂಶಯವೇ ಇಲ್ಲ. ಜೀನಲ್ ಜೆ ಜೆ ಅನ್ನೋ ಇನ್ ಸ್ಟ್ರಾಂಗ್ರಾಂ (Instagram) ಅಕೌಂಟ್ ಮೂಲಕ ತನ್ನ ಸೌಂದರ್ಯದ ರಸದೌತಣ ಬಡಿಸ್ತಿರೋ ಜೀನಲ್ ಸಖತ್ ಬೋಲ್ಡ್ ಮತ್ತು ಬ್ಯೂಟಿಫುಲ್.

ಇದನ್ನೂ ಓದಿ : Prashanth Neel – Prabhas : ಕುಂದಾಪುರದ ಬಸ್ರೂರಿಗೆ ಬಂದಿಳಿದ ತೆಲುಗು ನಟ ಪ್ರಭಾಸ್‌, ನಿರ್ದೇಶಕ ಪ್ರಶಾಂತ್‌ ನೀಲ್‌

ಬಾತ್ ಟಬ್ ನಿಂದ ಆರಂಭಿಸಿ ಬೆಡ್ ರೂಂವರೆಗೂ ಜೀನಲ್ ನೊರೆಂಟು ಸ್ಟೈಲ್ ನಲ್ಲಿ ಪೋಟೋಗಳಿಗೆ ಪೋಸ್ ನೀಡಿದ್ದಾರೆ. ಕೇವಲ ಪೋಟೋಶೂಟ್ ಮಾತ್ರವಲ್ಲ ಶಾರ್ಟ್ ವಿಡಿಯೋ ಸೇರಿದಂತೆ ಸೋಷಿಯಲ್ ಮೀಡಿಯಾದ ಎಲ್ಲ ಆಯಾಮದಲ್ಲೂ ಜೀನಲ್ ತಮ್ಮ ಛಾಪು ಮೂಡಿಸಿದ್ದಾರೆ.

Indian Famous Acctress Jinal Joshi Latest Photoshoots
Image Credit : Jinal Joshi / Instagram

ಸಮುದ್ರ ತೀರದಲ್ಲಿ ವಿಹರಿಸೋ ಹವ್ಯಾಸ ಹೊಂದಿರೋ ಜೀನಲ್, ಸಮುದ್ರದ ಅಲೆಗಳ ಜೊತೆ ಚೆಲ್ಲಾಟವಾಡೋ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ‌ ನೀಳಕಾಯದ, ಕಂದು ಕೂದಲಿನ ಹುಡುಗಿ ಬೋಲ್ಡ್,ಪೋಟೋ ವೀಡಿಯೋ ನೋಡಲು 1.1 ಮಿಲಿಯನ್ ಫಾಲೋವರ್ಸ್ ಈಕೆಯ ಇನ್ ಸ್ಟಾಗ್ರಾಂ ಪಾಲೋ ಮಾಡ್ತಿದ್ದಾರೆ.

ಇದನ್ನೂ ಓದಿ : ಕೇರಳ ಸ್ಟೋರಿಯ ಬಳಿಕ ಅದಾ ಶರ್ಮ ಫುಲ್ ಮಿಂಚಿಂಗ್ : ಸಿನಿ ಮ್ಯಾಗಜಿನ್ ಸಖತ್ ಪೋಸ್ ಕೊಟ್ಟ ಅದಾ

ನಟಿಮಣಿಯರು ಆಗಾಗ ಸೀರೆ, ಗೌನ್, ಸಲ್ವಾರ್ ಕಮೀಜ್ ನಲ್ಲಿ ಪೋಸ್ ಕೊಟ್ರೆ ಎಲ್ಲೋ ಒಮ್ಮೊಮ್ಮೆ ಬಿಕನಿ ಹಾಗೂ ತುಂಡುಡುಗೆಯಲ್ಲಿ ಕಾಣಿಸಿಕೊಳ್ತಾರೆ. ಆದರೆ ಜೀನಲ್ ಹಾಗಲ್ಲ, ಆಕೆಯ ಅಲ್ ಟೈಂ ಫೆವರಿಟ್ ಟೂ ಫೀಸ್ ಅಥವಾ ಅರೆಬೆತ್ತಲೆ ಉಡುಗೆ. ಎಕ್ಸಪೋಸ್ ಮಾಡೋದನ್ನು ಪ್ರತಿನಿತ್ಯದ ಫುಡ್ ನಂತೆ ರೂಟಿನ್ ಮಾಡ್ಕೊಂಡಿರೋ ಜೀನಲ್ ಬಾಲಿವುಡ್ ನಲ್ಲೊಂದು ಒಳ್ಳೆಯ ಬ್ರೇಕ್ ಗಾಗಿ ಕಾಯ್ತಿದ್ದಾರೆ.

Indian Famous Acctress Jinal Joshi Latest Photoshoots
Image Credit : Jinal Joshi / Instagram

ಮಹಾರಾಷ್ಟ್ರ ಮೂಲದ ಜೀನಲ್ ಮುಂಬಯಿನಲ್ಲೇ ಹುಟ್ಟಿ ಬೆಳೆದಿದ್ದರಿಂದ ಕಾಸ್ಟ್ಯೂಮ್ ಹಾಗೂ ಫ್ಯಾಶನ್ ಬಗ್ಗೆ ಅಪಾರ ಜ್ಞಾನವಿದೆ. ಶಾರ್ಟ್ಸ್ ವಿಡಿಯೋಗಳ ಮೂಲಕ ಜೀನಲ್ ಫ್ಯಾಶನ್ ಬಗ್ಗೆ ಟಿಪ್ಸ್ ನೀಡಿದ್ದಾರೆ. ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದಿರೋ ಜೀನಲ್, ಬಾಲಿವುಡ್ ನಲ್ಲಿ ಅವಕಾಶಕ್ಕಾಗಿ ಕಾಯ್ತಿದ್ದಾರೆ. ಆದರೆ ಇದುವರೆಗೂ ಜೀನಲ್ ಆಕೆ ಬಯಸಿದಂತಹ ಅವಕಾಶ ಸಿಕ್ಕಿಲ್ಲ.

ಇದನ್ನೂ ಓದಿ : ಪೋಟೋಶೂಟ್ ನಲ್ಲೆ ಮತ್ತೇರಿಸೋ ವರ್ಮಾ ಮಾದಕ ಲೋಕದ ಅಪ್ಸರೆ ಅಪ್ಸರಾ ರಾಣಿ !

ಹೀಗಾಗಿ ಬಾಲಿವುಡ್ ಗೆ ಎಂಟ್ರಿಯಾಗಲೂ ಸಿದ್ಧವಾಗಿದ್ದರೂ ಜೀನಲ್ ರನ್ನು ತೆರೆ ಮೇಲೆ ನೋಡೋ ಭಾಗ್ಯ ಅಭಿಮಾನಿಗಳಿಗೆ ಸಿಕ್ಕಿಲ್ಲ. ಆದರೆ ಇನ್ ಸ್ಟಾಗ್ರಾಂ ನಲ್ಲಿ ಮಾತ್ರ ಒಂದಕ್ಕಿಂತ ಒಂದು ಹಾಟ್ ಹಾಟ್ ಪೋಟೋ, ವಿಡಿಯೋಗಳು ಅಭಿಮಾನಿಗಳಿಗಾಗಿ ಕಾದಿದೆ. ಹಲವು ಶಾರ್ಟ್ ಮೂವಿ ಹಾಗೂ ವಿಡಿಯೊಗಳಲ್ಲಿ ಕಾಣಿಸಿಕೊಂಡಿರೋ ಜೀನಲ್ ಗೆ ಒಂದೊಳ್ಳೆ ಸಿನಿಮಾ ಅವಕಾಶ ಸಿಗಲಿ ಅನ್ನೋದು ನಮ್ಮ ಹಾರೈಕೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular