ಸೌತ್ ಇಂಡಿಯಾದ ಫೇಮಸ್ ನಟಿ ಪೂಜಾ ಹೆಗ್ಡೆ(Pooja Hegde) ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪೋಟೋಸ್ ವಿಡಿಯೋಸ್ ಟ್ರಿಪ್ ಅಪ್ಡೇಟ್ ಕೊಡೋದು ಕಾಮನ್. ಆದರೆ ಈ ಭಾರಿ ಮಾತ್ರ ತಮಗೆ ವಿಮಾನಯಾನದ ವೇಳೆ ಉಂಟಾದ ಕೆಟ್ಟ ಅನುಭವವನ್ನು ಶೇರ್ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಫುಲ್ ವೈರಲ್ ಆಗಿದೆ.
ಹೌದು ದಕ್ಷಿಣ ಭಾರತದ ಖ್ಯಾತ ನಟಿ ಪೂಜಾ ಹೆಗ್ಡೆ ಅವರು ತಾವು ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ತಮಗೆ ವಿಮಾನ ಸಿಬ್ಬಂದಿಯಿಂದ ಅವಮಾನವಾಗಿದೆ. ಅತಿರೇಕದ ಹಾಗೂ ಅತ್ಯಂತ ಕಟುವಾದ ವರ್ತನೆ ತೋರಿದರು ಎಂದು ಪೂಜಾ ಹೆಗ್ಡೆ ಇಂಡಿಗೋ ವಿಮಾನದ ವಿರುದ್ಧ ದೂರಿದ್ದಾರೆ. ಬಾಲಿವುಡ್ ಸೇರಿದಂತೆ ತಮಿಳು ಹಾಗೂ ತೆಲುಗು ಸಿನಿಮಾ ದಲ್ಲಿ ಸದಾ ಬ್ಯುಸಿಯಾಗಿರೋ ಪೂಜಾ ಹೆಗ್ಡೆ, ಇತ್ತೀಚಿಗೆ ತಮಗೆ ಮುಂಬೈನಿಂದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವಾಗ ಕೆಟ್ಟ ಅನುಭವವಾಗಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ವಿವರವಾಗಿ ಟ್ವೀಟ್ ಮಾಡಿರೋ ಪೂಜಾ ಹೆಗ್ಡೆ, ವಿಷಾದದಿಂದ ಬರೆಯುತ್ತಿದ್ದೇನೆ. ಇಂಡಿಗೋ ವಿಮಾನದ ಸಿಬ್ಬಂದಿ ಅತ್ಯಂತ ಒರಟುತನದಿಂದ ವರ್ತಿಸಿದರು. ವಿಫುಲ್ ನಕಾಶೆ ಎಂಬ ಸಿಬ್ಬಂದಿ ನನ್ನೊಂದಿಗೆ ಅತ್ಯಂತ ದುರಂಹಕಾರದಿಂದ ನಡೆದುಕೊಂಡರು. ಯಾವುದೇ ಕಾರಣವಿಲ್ಲದೇ ಈ ರೀತಿ ನಡೆದುಕೊಂಡಿದ್ದಾರೆ. ಅವರ ಮಾತು ಬೆದರಿಕೆಯಂತಿತ್ತು. ಸಾಮಾನ್ಯವಾಗಿನಾನು ಇಂತಹ ವಿಚಾರಗಳ ಬಗ್ಗೆ ಟ್ವೀಟ್ ಮಾಡೋದಿಲ್ಲ. ಆದರೆ ಈ ಭಾರಿ ಅನಿವಾರ್ಯವಾಗಿದೆ ಎಂದಿದ್ದಾರೆ.
ಈ ಮಧ್ಯೆ ಇಂಡಿಗೋ ವಿಮಾನದಲ್ಲಿ ಪೂಜಾ ಹೆಗ್ಡೆಗೆ ಅವಮಾನವಾಗಿದೆ ಅನ್ನೋ ಸಂಗತಿ ಟ್ವೀಟ್ ನಲ್ಲಿ ಬಹಿರಂಗವಾಗುತ್ತಿದ್ದಂತೆ ಇಂಡಿಗೋ ಸಂಸ್ಥೆ ಟ್ವೀಟರ್ ನಲ್ಲಿ ಪೂಜಾ ಹೆಗ್ಡೆ ಬಳಿ ಕ್ಷಮೆಯಾಚಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರೋ ಇಂಡಿಗೋ ಸಂಸ್ಥೆ, ದಯಮಾಡಿ ಕ್ಷಮೆ ಇರಲಿ. ನಾವು ನಿಮ್ಮನ್ನು ಶೀಘ್ರದಲ್ಲೇ ಸಂಪರ್ಕ ಮಾಡುತ್ತೇವೆ. ನಿಮ್ಮ ಪಿಎನ್ಆರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಕಳುಹಿಸಿಕೊಡಿ ಎಂದು ಸಂಸ್ಥೆ ಕೇಳಿದೆ.
Extremely sad with how rude @IndiGo6E staff member, by the name of Vipul Nakashe behaved with us today on our flight out from Mumbai.Absolutely arrogant, ignorant and threatening tone used with us for no reason.Normally I don’t tweet abt these issues, but this was truly appalling
— Pooja Hegde (@hegdepooja) June 9, 2022
ಇನ್ನು ಸೌತ್ ಬೆಡಗಿ ಪೂಜಾ ಹೆಗ್ಡೆಗೆ ಇಂಡಿಗೋ ವಿಮಾನದಲ್ಲಿ ಕೆಟ್ಟ ಅನುಭವವಾದ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗುತ್ತಿದ್ದಂತೆ ಹಲವರು ಪೂಜಾ ವಿಚಾರವನ್ನು ರೀ ಟ್ವೀಟ್ ಮಾಡಿದ್ದು, ಹಲವು ಪ್ರಯಾಣಿಕರಿಗೆ ಇಂತದ್ದೇ ಅನುಭವವಾಗಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ವಿಮಾನಯಾನ ಸಂಸ್ಥೆಗಳ ದುವರ್ತನೆಗೆ ಸೆಲೆಟ್ರೆಟಿಗಳು ಹೊರತಲ್ಲ ಅನ್ನೋದು ಈಗ ಸಾಬೀತಾಗಿದೆ.
ಇದನ್ನೂ ಓದಿ : Woman Gives Birth : ಪೆಸಿಫಿಕ್ ಸಾಗರದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
ಇದನ್ನೂ ಓದಿ : Demi Rose : ಇನ್ ಸ್ಟಾಗ್ರಾಂನಲ್ಲಿ ಡೆಮಿ ರೋಸ್ ಗೆ 19 Millions ಫಾಲೋವರ್ಸ್ : ‘ಹೃದಯ ಸುಂದರಿ’ಗೆ ಫ್ಯಾನ್ಸ್ ಫಿದಾ
Indigo flight Company Apology After Insulting Pooja Hegde