Vicky Kaushal :ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ನಟಿ ಕತ್ರಿನಾ ಕೈಫ್ ಕೆಲ ದಿನಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಆದರೆ ಈ ಬಾರಿ ಮಾತ್ರ ವಿಕ್ಕಿ ಕೌಶಲ್ ಒಂದು ವಿಚಿತ್ರ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಹೌದು..! ಈ ಬಾರಿ ವಿಕ್ಕಿ ಕೌಶಲ್ ಸುದ್ದಿಯಾಗೋಕೆ ಕಾರಣ ನಂಬರ್ ಪ್ಲೇಟ್..!
ಅರ್ರೆ..! ನಂಬರ್ ಪ್ಲೇಟ್ಗೂ ವಿಕ್ಕಿ ಕೌಶಲ್ಗೂ ಏನ್ ಲಿಂಕ್ ಅಂತಾ ತಲೆಕೆರೆದುಕೊಳ್ತಿದ್ದೀರಾ..? ವಿಕ್ಕಿ ಕೌಶಲ್ ವಿರುದ್ಧ ನಂಬರ್ ಪ್ಲೇಟ್ ಕಾರಣಕ್ಕೆ ಇಂದೋರ್ನಲ್ಲಿ ದೂರು ದಾಖಲಾಗಿದೆಯಂತೆ..! ನನ್ನ ವಾಹನದ ನಂಬರ್ ಪ್ಲೇಟ್ನ್ನು ನಟ ವಿಕ್ಕಿ ಕೌಶಲ್ ತಮ್ಮ ಗಾಡಿಯ ನಂಬರ್ ಪ್ಲೇಟ್ ಆಗಿ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಇಂದೋರ್ನ ನಿವಾಸಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಮ್ಮ ಮುಂಬರುವ ಸಿನಿಮಾ ಶೂಟಿಂಗ್ ವೇಳೆಯಲ್ಲಿ ಸಾರಾ ಅಲಿ ಖಾನ್ ಜೊತೆಯಲ್ಲಿ ನಟ ವಿಕ್ಕಿ ಕೌಶಲ್ ತಮ್ಮದೇ ಗಾಡಿಯ ನಂಬರ್ ಪ್ಲೇಟ್ನ್ನು ಬಳಕೆ ಮಾಡಿದ್ದಾರೆ ಎಂದು ಜೈ ಸಿಂಗ್ ಯಾದವ್ ದೂರು ನೀಡಿದ್ದಾರೆ. ನನ್ನ ಅನುಮತಿಯಿಲ್ಲದೇ ನಟ ವಿಕ್ಕಿ ಕೌಶಲ್ ನನ್ನ ಗಾಡಿಯ ನಂಬರ್ ಪ್ಲೇಟ್ ಹೇಗೆ ಬಳಕೆ ಮಾಡಿದ್ದಾರೆ ಎಂಬುದು ಜೈ ಸಿಂಗ್ ಯಾದವ್ ಪ್ರಶ್ನೆಯಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಜೈ ಸಿಂಗ್ ಯಾದವ್, ಸಿನಿಮಾದ ದೃಶ್ಯವಳಿಯಲ್ಲಿ ನನ್ನ ವಾಹನದ ನಂಬರ್ ಪ್ಲೇಟ್ನ್ನೇ ವಿಕ್ಕಿ ಕೌಶಲ್ ವಾಹನದ ನಂಬರ್ ಪ್ಲೇಟ್ ಆಗಿ ಬಳಕೆ ಮಾಡಲಾಗಿದೆ. ಇಲ್ಲಿ ನನ್ನ ಅನುಮತಿಯನ್ನು ಯಾರೂ ಕೇಳಿಲ್ಲ. ಹೀಗಾಗಿ ನಾನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಶೀಘ್ರದಲ್ಲೇ ಪೊಲೀಸರು ಕಾನೂನು ಕ್ರಮ ಜರುಗಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ದೂರಿನ ವಿಚಾರವಾಗಿ ಮಾತನಾಡಿದ ಇಂದೋರ್ ಬಂಗಂಗಾ ಏರಿಯಾದ ಎಸ್ಐ ರಾಜೇಂದ್ರ ಸೋನಿ, ನಾವು ದೂರನ್ನು ಸ್ವೀಕರಿಸಿದ್ದೇವೆ. ನಂಬರ್ ಪ್ಲೇಟ್ನ್ನು ಅಕ್ರಮವಾಗಿ ಬಳಕೆ ಮಾಡಲಾಗಿದೆಯೇ ಎಂದು ಪರಿಶೀಲಿಸುತ್ತಿದ್ದೇವೆ. ಮೋಟಾರ್ ವಾಹನ ಕಾಯ್ದೆಯ ಅಡಿಯಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
Indore resident files complaint against Vicky Kaushal for using his vehicle number in film sequence
ಇದನ್ನು ಓದಿ : Kajal Aggarwal : ಹೊಸವರ್ಷದಂದು ಶುಭಸುದ್ದಿ ಹಂಚಿಕೊಂಡ ಕಾಜಲ್ ಅಗರ್ವಾಲ್ ದಂಪತಿ
ಇದನ್ನೂ ಓದಿ : Liger :ಲೈಗರ್ ಅವತಾರದಲ್ಲಿ ಗೀತಗೋವಿಂದಂ ಹೀರೋ : ಟೀಸರ್ ನಲ್ಲಿ ಮಿಂಚಿದ ವಿಜಯ್ ದೇವರಕೊಂಡ