ಬಳ್ಳಾರಿ: ಕೊಲೆ ಆರೋಪಿಯಾಗಿ ಬಳ್ಳಾರಿ ಜೈಲಿನಲ್ಲಿನಲ್ಲಿರುವ ಚಲನಚಿತ್ರ ನಟ ದರ್ಶನ್ ತೂಗುದೀಪ (Darshan Thoogudeepa) ಜೈಲಿನಲ್ಲೇ ಆದಾಯ ತೆರಿಗೆ ಇಲಾಖೆಯಿಂದ ವಿಚಾರಣೆಗೆ ಒಳಪಟ್ಟಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಳಿಕ ನಟ ದರ್ಶನ್ ನಡೆಸಿರುವ ಹಣಕಾಸು ವಹಿವಾಟು ವಿಚಾರವಾಗಿ ಗುರುವಾರ ನಿರಂತರ ಏಳು ಗಂಟೆಗಳ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲಿನ ಅಧೀಕ್ಷಕರ ಕೊಠಡಿಯಲ್ಲಿ ವೀಡಿಯೋ ಕ್ಯಾಮರಾದ ಎದುರಿನಲ್ಲೇ ಐವರು ಐಟಿ ಇಲಾಖೆಯ ಅಧಿಕಾರಿಗಳು ದರ್ಶನ್ ಅವರನ್ನು ಗುರುವಾರ ವಿಚಾರಣೆಗೆ ಒಳಪಡಿಸಿದ್ದರು.

ಜೈಲಿನಲ್ಲಿ ಐಟಿ ಅಧಿಕಾರಿಗಳ ಎದುರು ಹಾಜರಾಗುವ ಮೊದಲು ಆರೋಪಿ ದರ್ಶನ್ ತಮ್ಮ ಅಡಿಟರ್ ಎಂ.ಎಸ್. ರಾವ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಜೈಲು ಅಧೀಕ್ಷಕಿ ಆರ್. ಲತಾ ಸಮ್ಮುಖದಲ್ಲಿಯೇ ಐಟಿ ಅಧಿಕಾರಿಗಳು ದರ್ಶನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ನಿರಂತರ ಏಳು ಗಂಟೆಗಳ ಕಾಲ ವಿಚಾರಣೆ ನಡೆದಿದೆ.
ಇದನ್ನೂ ಓದಿ : ಪವಿತ್ರಾ ಗೌಡ ಮೈಮೇಲೆ ದರ್ಶನ್ ಹಚ್ಚೆ : ಟ್ಯಾಟೂ ನೋಡಿ ಅಭಿಮಾನಿಗಳು ಏನಂದ್ರು ?
ಎರಡು ದಿನಗಳಿಗಾಗಿ ಕೋಟ್೯ ಅನುಮತಿ ಪಡೆದು ಬಳ್ಳಾರಿ ಜೈಲಿಗೆ ದರ್ಶನ್ ವಿಚಾರಣೆಗೆ ಬಂದಿದ್ದ ಐಟಿ ಅಧಿಕಾರಿಗಳು ಒಂದೇ ದಿನದಲ್ಲಿ ವಿಚಾರಣೆ ಮುಗಿಸಿ ವಾಪಾಸ್ ತೆರಳಿದ್ದಾರೆ.ಈ ಮಧ್ಯೆ ಡೆವಿಲ್ ಸಿನೆಮಾ ನಿರ್ದೇಶಕ ಜೆ.ವಿ. ಪ್ರಕಾಶ್, ಆಪ್ತ ಸುನಿಲ್ ಕುಮಾರ್ ಹಾಗೂ ಶ್ರೀನಿವಾಸ ಅವರಿಗೆ ಆರೋಪಿ ದರ್ಶನ್ ಭೇಟಿಗೆ ಗುರುವಾರ 15 ನಿಮಿಷಗಳ ಕಾಲ ಅವಕಾಶ ಕಲ್ಪಿಸಲಾಗಿತ್ತು. ಐಟಿ ಅಧಿಕಾರಿಗಳ ವಿಚಾರಣೆ ಹಿನ್ನೆಲೆಯಲ್ಲಿ ಹದಿನೈದು ನಿಮಿಷಗಳ ಕಾಲ ಮಾತ್ರ ಬೇಟಿಗೆ ಗುರುವಾರ ಅವಕಾಶ ನೀಡಲಾಗಿತ್ತು. ಇನ್ನು ದರ್ಶನ್ ಭೇಟಿಗೆ ಬಂದಿದ್ಡ ವೇಳೆ ಬ್ಯಾಗ್ ಗಳಲ್ಲಿ ಚಿಪ್ಸ್, ಬಿಸ್ಕೆಟ್ಸ್ ಹಾಗೂ ಡ್ರೈಪ್ರೂಟ್ಸ್ ಗಳನ್ನು ಆಪ್ತರು ತಂದಿದ್ದರು.

ಈ ಮಧ್ಯೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿ ಮೂರು ದಿನವಾದರೂ ಇನ್ನೂ ಬಿಡುಗಡೆಯಾಗಿಲ್ಲ. ಜಾಮೀನಿನ ಕಾನೂನು ಪ್ರಕ್ರಿಯೆ ಮುಗಿಯದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳು ಬಿಡುಗಡೆಯಾಗಲು ಸಾಧ್ಯವಾಗಿಲ್ಲ. ತುಮಕೂರು ಜೈಲಿನಲ್ಲಿರುವ ನಾಲ್ವರು ಆರೋಪಿಗಳ ಪೈಕಿ ಮೂವರಿಗೆ ಜಾಮೀನು ಲಭಿಸಿದೆ.
ಇದನ್ನೂ ಓದಿ : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗಾಗಿ ದೇಗುಲ ನಿರ್ಮಿಸಿದ ಅಭಿಮಾನಿ
ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ಹಾಗೂ ನಿಖಿಲ್ ನಾಯಕ್ ಗೆ ಜಾಮೀನು ಸಿಕ್ಕಿದೆ.ಎ-16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ನಿಂದ ಜಾಮೀನು ದೊರೆತಿದ್ದರೆ, ಎ-15 ಆರೋಪಿ ಕಾರ್ತಿಕ್ ಹಾಗೂ ಎ-17 ಆರೋಪಿ ನಿಖಿಲ್ ಗೆ 57 ನೇ ಸಿಸಿಹೆಚ್ ಕೋರ್ಟ್ ನಿಂದ ಜಾಮೀನು ದೊರೆತಿದೆ.
it departmentofficials intaragated actor darshan thoogudeepa