ಭಾನುವಾರ, ಏಪ್ರಿಲ್ 27, 2025
HomeCinemaJAILER Kaavaalaa : ತಮಿಳಿನ ಹಾಡಿಗೆ ಕನ್ನಡತಿಯರ ಸಖತ್ ಸ್ಪೆಪ್ : ನು ಕಾವಾಲಯ್ಯ ಎಂದ ನಟಿಮಣಿಯರು...

JAILER Kaavaalaa : ತಮಿಳಿನ ಹಾಡಿಗೆ ಕನ್ನಡತಿಯರ ಸಖತ್ ಸ್ಪೆಪ್ : ನು ಕಾವಾಲಯ್ಯ ಎಂದ ನಟಿಮಣಿಯರು ವಿಡಿಯೋ ವೈರಲ್

- Advertisement -

ಕೇವಲ ಸಿನಿಮಾ ರಂಗಕ್ಕೆ ನಟ-ನಟಿಯರು ಸೀಮಿತವಾಗಿದ್ದ ಕಾಲ ಮುಗಿದಿದೆ. ಈಗ ಸೋಷಿಯಲ್‌ ಮೀಡಿಯಾದಲ್ಲೂ ನಟ-ನಟಿಯರು ಸಿನಿಮಾದಷ್ಟೇ (JAILER Kaavaalaa)‌ ಆಕ್ಟಿವ್ ಆಗ್ತಿದ್ದು, ಟ್ರೆಂಡಿ ವೀಡಿಯೋಗಳಿಗೆ ಹೆಜ್ಜೆ ಹಾಕಿ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಸದ್ಯ ಸಿನಿಮಾದ ನು ಕಾವಾಲಯ್ಯ ಹಾಡು ಕೂಡ ಭಾಷಾ ಬೇಧವಿಲ್ಲದೇ ಎಲ್ಲ ತಾರಾಮಣಿಗಳನ್ನು ಕುಣಿಸಿದೆ.

ಮೊದಲೊಂದು ಕಾಲದಲ್ಲಿ ಸ್ಟಾರ್ ನಟ-ನಟಿಯರು ಬೇರೆ ಸ್ಟಾರ್ ಗಳ ಸಿನಿಮಾದ ಬಗ್ಗೆ ಮಾತೇ ಆಡುತ್ತಿರಲಿಲ್ಲ.‌ ಆದರೆ ಈಗ ಸ್ಟಾರ್ ಸಿನಿಮಾದಲ್ಲಿ ಮತ್ತೊಬ್ಬ ಸ್ಟಾರ್ ಗೆಸ್ಟ್ ಆಫಿಯರೆನ್ಸ್, ಡ್ಯಾನ್ಸ್ ಎಲ್ಲ‌ ಕಾಮನ್. ಮಾತ್ರವಲ್ಲದೇ ಹಿಟ್ ಸಿನಿಮಾಗಳ ವೈರಲ್ ಸಾಂಗ್ ಗೆ ನಟ-ನಟಿಯರೂ ಡ್ಯಾನ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡೋ ಟ್ರೆಂಡ್ ಕೂಡ ಜೋರಾಗಿದೆ.

ಅದರಲ್ಲೂ ಕನ್ನಡದ ಬಹುತೇಕ ನಟಿಮಣಿಯರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಟ್ರೆಂಡ್ ಆಗೋ ಪ್ರತಿ ಹಾಡಿಗೂ ಮೈಬಳುಕಿಸುವ ವಿಡಿಯೋ ಮಾಡಿ ಶೇರ್ ಮಾಡೋದನ್ನು ಮರೆಯೋದಿಲ್ಲ. ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನೀರಿಕ್ಷಿತ ಸಿನಿಮಾ ಜೈಲರ್ ಸಖತ್ ಸದ್ದು ಮಾಡ್ತಿದೆ. ಸಿನಿಮಾಗಿಂತ ಮುಖ್ಯವಾಗಿ ಸಿನಿಮಾದ ನು ಕಾವಾಲಯ್ಯ ಹಾಡು ಪಡ್ಡೆ ಹೈಕಳ್ ಹಾಗೂ ಸಿನಿಮಾ ಮಂದಿಯ ಮನಗೆದ್ದಿದೆ. ಹೀಗಾಗಿ ಎಲ್ಲಿ ನೋಡಿದರೂ ಅಲ್ಲಿ ನು ಕಾವಾಲಯ್ಯ ಅನ್ನೋ ಹಾಡಿನದ್ದೇ ರಿಧಮ್ ಕೇಳುವಂತಾಗಿದೆ.

ಜೈಲರ್ ಸಿನಿಮಾದ ಈ ನು ಕಾವಾಲಯ್ಯ ಹಾಡಿಗೆ ಮಿಲ್ಕಿ ಬ್ಯೂಟಿ ತಮನ್ನಾ ಯುವಜನತೆ ಹುಚ್ಚೆದ್ದು ಕುಣಿಯುವಂತೆ ಸ್ಟೆಪ್ ಹಾಕಿದ್ದಾರೆ. ಕೇವಲ‌ತಮಿಳು ಮಾತ್ರವಲ್ಲ ಹಿಂದಿಯಲ್ಲಿ ತು ಆ ದಿಲ್ಬರಾ ಎಂದು ಮೋಡಿ ಮಾಡ್ತಿದೆ.ಇನ್ನೂ ಇನ್ ಸ್ಟಾಗ್ರಾಂ ರೀಲ್ಸ್‌ನಲ್ಲಿ ನು ಕಾವಾಲಯ್ಯದ್ದೇ ಹಾವಳಿ ಹೆಚ್ಚಿದ್ದು, ಸದ್ಯ ಹೊಸ ಬದುಕಿಗೆ ಕಾಲಿಡಲು ಸಜ್ಜಾಗಿರೋ ಹರ್ಷಿಕಾ ಪೂಣಚ್ಚ ಕೂಡ ಈ ಹಾಡಿಗೆ ಅಪ್ಪಟ ದೇಸಿ ಸ್ಟೈಲ್ ನಲ್ಲಿ ಹೆಜ್ಜೆ ಹಾಕಿದ್ದು ವಿಡಿಯೋ ಅಭಿಮಾನಿಗಳ ಮನಗೆದ್ದಿದೆ.

ಇದನ್ನೂ ಓದಿ : Sanjay Dutt Birthday : ಪುರಿ ಜಗನ್ನಾಥ್ ಹಾಗೂ ರಾಮ್ ಪೋತಿನೇನಿ ಸಿನಿಮಾದಲ್ಲಿ ಸಂಜಯ್ ದತ್

ಇದನ್ನೂ ಓದಿ : Vikrant Rona Movie : ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಸಿನಿಮಾಕ್ಕೆ ಮೊದಲ ವರ್ಷ ಸಂಭ್ರಮ

ಸದ್ಯ ಸಿನಿಮಾದ ಹಾಡು ಯೂ ಟ್ಯೂಬ್ ನಲ್ಲಿ ದಾಖಲೆ‌ ಬರೆದಿದ್ದು ಟ್ರೆಂಡ್ ನಲ್ಲಿ ಮುಂದುವರೆಯುವ ಮೂಲಕ ಮತ್ತಷ್ಟು ಪ್ರೇಕ್ಷಕರ ಮನಗೆದ್ದಿದೆ. ಕಿರುತೆರೆ ನಟಿಯರೂ ಕೂಡ ಟ್ರೆಂಡಿ ಹಾಡಿಗೆ ಹೆಜ್ಜೆ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ. ಜೈಲರ್ ಸಿನಿಮಾದ ಮೂಲಕ ತಲೈವಾ ರಜನಿಕಾಂತ್ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ಸಿದ್ಧವಾಗಿದ್ದು, ಈ ಸಿನಿಮಾದಲ್ಲಿ ಸ್ಪೆಶಲ್ ಅಪಿಯರೆನ್ಸ್ ನಲ್ಲಿ ಶಿವಣ್ಣ ಕಾಣಿಸಿಕೊಂಡಿರೋದರಿಂದ ಕನ್ನಡಿಗರು ಸಿನಿಮಾ ರಿಲೀಸ್ ಗೆ ಕಾದಿದ್ದಾರೆ. ಅಗಸ್ಟ್ 10 ರಂದು ಸಿನಿಮಾ ತೆರೆ ಕಾಣಲಿದೆ.

JAILER Kaavaalaa: Kannadathi’s hard-hitting Tamil song: Nu Kaavalayya video goes viral

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular