ಒಂದು ಸಿನಿಮಾದ ದಾಖಲೆಯನ್ನು ಇನ್ನೊಂದು ಸಿನಿಮಾ ಮುರಿಯೋದು ಕಾಮನ್. ಈಗ ಜೇಮ್ಸ್ (James Kannada Movie) ಕೂಡ ಅದೇ ಹಾದಿಯಲ್ಲಿ ಸಾಗಿದೆ. KGF ದಾಖಲೆ ಪುಡಿಗಟ್ಟಿದ ಅಪ್ಪು ಹೊಸ ದಾಖಲೆ ಬರೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬರ್ತಡೇ ಹೊತ್ತಲ್ಲೇ ಜೇಮ್ಸ್ ಇಂದು ತೆರೆ ಕಂಡಿದೆ. ಅಷ್ಟೇ ಅಲ್ಲ ತೆರೆಕಂಡ ಕೆಲವೇ ಗಂಟೆಗಳಲ್ಲೇ ಸಿನಿಮಾ ಹೊಸ ದಾಖಲೆ ಬರೆದಿದೆ.ಹೌದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಮಾಡಿದ ಜೇಮ್ಸ್ ಟಿವಿಗಳಿಗೆ ದಾಖಲೆಯ ಬೆಲೆಗೆ ಹಕ್ಕು ಮಾರಾಟ ಮಾಡಿದೆ. ಬಿಡುಗಡೆಯಾಗುತ್ತಿದ್ದಂತೆ ಜೇಮ್ಸ್ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ.

ಈಗಾಗಲೇ ತೆರೆ ಕಂಡಿರೋ ಯಶ್ ಅಭಿನಯದ ಕೆಜಿಎಫ್ ದಾಖಲೆಯನ್ನೂ ಪುಡಿ ಪುಡಿ ಮಾಡಿದ ಜೇಮ್ಸ್, ಟಿವಿ ರೈಟ್ಸ್ ನಲ್ಲಿ ದಾಖಲೆ ಪ್ರಮಾಣದಲ್ಲಿ ಬಿಕರಿಯಾಗಿದೆ. ಈ ಹಿಂದೆ 2018 ರಲ್ಲಿ ರಿಲೀಸ್ ಆಗಿದ್ದ ಕೆಜಿಎಫ್ ಸಿನಿಮಾ ಆರೂವರೆ ಕೋಟಿಗೆ ಸೇಲ್ ಆಗಿತ್ತು. ಆದರೆ ಈಗ ಕೆಜಿಎಫ್ ಗಿಂತ ಎರಡು ಪಟ್ಟು ಹೆಚ್ಚಿನ ಬೆಲೆಗೆ ಜೇಮ್ಸ್ ರೈಟ್ಸ್ ಮಾರಾಟವಾಗಿದೆ. 13.80 ಕೋಟಿಗೆ ಜೇಮ್ಸ್ ಸಾಟಿಲೈಟ್ ರೈಟ್ಸ್ ಮಾರಾಟವಾಗಿದ್ದು, ಮೂಲಗಳ ಪ್ರಕಾರ ವಿವಿಧ ಭಾಷೆಗಳು ಸೇರಿ 80 ಕೋಟಿಗೆ ಟಿವಿ ರೈಟ್ಸ್ ಗೆ ಜೇಮ್ಸ್ ಮಾರಾಟವಾಗಿದೆಯಂತೆ.

ಇನ್ನು ಕೊನೆಯ ಸಲ ನಟಿಸಿರೋ ಜೇಮ್ಸ್ ಸಿನಿಮಾ ಯಾವ ಯಾವ ವಾಹಿನಿಗೆ ಎಷ್ಟಕ್ಕೆ ಸೇಲಾಗಿದೆ ಅನ್ನೋದನ್ನು ಗಮನಿಸೋದಾದರೆ,
- ಸೋನಿ ಡಿಜಿಟಲ್ – 40 ಕೋಟಿ
- ಕನ್ನಡ (ಸುವರ್ಣ) – 13.80 ಕೋಟಿ
- ತೆಲುಗು (ಮಾ ಟಿವಿ) – 5.70 ಕೋಟಿ
- ತಮಿಳು (ಸನ್ ನೆಟ್ ವರ್ಕ್) – 5.17 ಕೋಟಿ
- ಮಲೆಯಾಳಂ – 1.2 ಕೋಟಿ
- ಭೋಜಪುರಿ – 5.50 ಕೋಟಿ
- ಹಿಂದಿ (ಸೋನಿ) – 2.70 ಕೋಟಿ

ವಿಶ್ವದಾದ್ಯಂತ ಇಂದು ಒಂದೇ ದಿನ ಅಂದಾಜು 4 ಸಾವಿರ ಸ್ಕ್ರಿನ್ ಗಳಲ್ಲಿ ಅಪ್ಪು ಅಬ್ಬರದಿಂದ ಎಂಟ್ರಿಕೊಟ್ಟಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಪ್ಪು ಸಿನಿಮಾ ಟಿಕೇಟ್ ಗಾಗಿ ಮುಗಿಬಿದ್ದಿದ್ದಾರೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಜೇಮ್ಸ್ ಹವಾ ಜೋರಾಗಿದ್ದು ಅಮೇರಿಕ ಸೇರಿದಂತೆ ಹಲವು ದೇಶದಲ್ಲಿ ಅಪ್ಪು ಅಭಿಮಾನಿಗಳು ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ : ನನ್ನಿಂದ ಜೇಮ್ಸ್ ಸಿನಿಮಾ ನೋಡಲು ಸಾಧ್ಯವಿಲ್ಲ: ನಾನಿನ್ನು ಆ ನೋವಿನಿಂದ ಹೊರಗೆ ಬಂದಿಲ್ಲ: ಅಶ್ವಿನಿ ಪುನೀತ್
ಇದನ್ನೂ ಓದಿ : Puneeth Rajkumar ಗೆ ರಾಜ್ಯದ ಹಲವು ಗಣ್ಯರಿಂದ ಹುಟ್ಟುಹಬ್ಬದ ಶುಭಾಯಗಳ ಮಹಾಪೂರ!
( James Kannada Movie is the last film of Puneet Raj Kumar who broke the KGF record)