ಕನ್ನಡ ಕಿರುತೆರೆ ಲೋಕದಲ್ಲಿ ವೀಕ್ಷಕರಿಂದ ಮೆಚ್ಚುಗೆ ಪಡೆದು ನಂಬರ್ ಒನ್ ಸ್ಥಾನದಲ್ಲಿ ಮುನ್ನುಗ್ಗುತ್ತಿದ್ದ ಧಾರಾವಾಹಿ ಜೊತೆ ಜೊತೆಯಲಿ ಈಗ ಪ್ರೇಕ್ಷಕರಿಂದಲೇ ಆಕ್ರೋಶ ಎದುರಿಸುತ್ತಿದ್ದು, ಸೀರಿಯಲ್ ಕತೆ ಪಡೆದುಕೊಳ್ಳುತ್ತಿರುವ ತಿರುವಿನ ಬಗ್ಗೆ ಪ್ರೇಕ್ಷಕರು (jote joteyali big twist) ತೀವ್ರ ಅಸಮಧಾನ ವ್ಯಕ್ತಪಡಿಸುತ್ತಿದ್ದು, ಹೀಗೆ ಸಾಗುವ ಧಾರಾವಾಹಿನೋಡಲು ಮನಸ್ಸಾಗುತ್ತಿಲ್ಲ ಎಂದು ಸೋಷಿಯಲ್‌ಮೀಡಿಯಾದಲ್ಲಿ ತಮ್ಮ ಭಾವನೆ ಹಂಚಿಕೊಳ್ಳುತ್ತಿದ್ದಾರೆ.
ಮಧ್ಯ ವಯಸ್ಸಿನ ಪುರುಷನೊಬ್ಬ ಯುವತಿಯೊಂದಿಗೆ ಪ್ರೀತಿಯಲ್ಲಿ ಬೀಳುವ ವಿಭಿನ್ನಕಥಾಹಂದರದೊಂದಿಗೆ ಕಿರುತೆರೆ ಲೋಕಕ್ಕೆ ಎಂಟ್ರಿಕೊಟ್ಟ ಜೊತೆ ಜೊತೆಯಲಿ ಧಾರಾವಾಹಿ ನಟ ಅನಿರುದ್ಧಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಕರುನಾಡಿನಲ್ಲಿ ಮನೆಮಾತಾದ ಈ ಸೀರಿಯಲ್ ನ ನಾಯಕಿ ಮೇಘಾ ಶೆಟ್ಟಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಲ್ಲದೇ ಸಿನಿಮಾಗಳಲ್ಲೂ ಅವಕಾಶ ಪಡೆದುಕೊಂಡರು. ಸೀರಿಯಲ್ ಕತೆಯ ಕ್ವಾಲಿಟಿ ಹಾಗೂ ನಿರೂಪಣೆ ಸೀರಿಯಲ್ ಗೆ ಬಲ ತುಂಬಿತ್ತು. ಆದರೆ ಈಗ ಕಥಾ ತಿರುವು ಪ್ರೇಕ್ಷಕರ ಕೋಪಕ್ಕೆ ಗುರಿಯಾಗಿದೆ.

ರಾಜನಂದಿನಿ ಗ್ರೂಪ್ ನ ಮಾಲೀಕ ಆರ್ಯವರ್ಧನ್ ಅನುಸಿರಿಮನೆಯನ್ನು ಪ್ರೀತಿಸಿ, ವರ್ಷಗಟ್ಟಲೇ ಪರದಾಡಿ ಪ್ರೇಮನಿವೇದನೆ ಮಾಡಿಕೊಂಡು ಮದುವೆಯಾಗಿದ್ದು ವೀಕ್ಷಕರ ಸಂಭ್ರಮಕ್ಕೆ ಕಾರಣವಾಗಿತ್ತು. ಆದರೆ ಮದುವೆಯಾದ ಕೆಲದಿನದಲ್ಲೇ ಆರ್ಯವರ್ಧನ್ ಪಾತ್ರ ನೆಗೆಟಿವ್ ಶೇಡ್ ಪಡೆದುಕೊಳ್ಳುತ್ತಿದೆ. ರಾಜನಂದಿನಿ ಆರ್ಯವರ್ಧನ್ ಮೊದಲ ಪತ್ನಿ. ಆಕೆಯ ಸಮಸ್ತ ಆಸ್ತಿಯೂ ಆಕೆಯ ತಾಯಿ ಶಾರದಾದೇವಿ ಹಾಗೂ ತಮ್ಮ ಹರ್ಷನ ಹೆಸರಿನಲ್ಲಿದೆ. ಇದನ್ನು ಲಪಟಾಯಿಸಿಕೊಳ್ಳಲು ಆರ್ಯವರ್ಧನ್ ಪ್ಲ್ಯಾನ್ ಮಾಡುತ್ತಿರುವಂತೆ ಚಿತ್ರಕತೆ ಸಾಗುತ್ತಿದ್ದು, ಇದುವರೆಗೂ ಹೀರೋ ರೋಲ್ ನಲ್ಲಿದ್ದ ಅನಿರುದ್ಧ ಈಗ ವಿಲನ್ ರೂಪಕ್ಕೆ ತಿರುಗುತ್ತಿದ್ದಾರೆ. ಆದರೆ ಈ ಬದಲಾವಣೆಗೆ ಪ್ರೇಕ್ಷಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ರೋಲ್‌ಮಾಡೆಲ್ ನಂತಿರೋ ಪಾತ್ರವನ್ನು ಏಕಾಏಕಿ ಬದಲಾಯಿಸಿದ್ದು ಎಷ್ಟು ಸರಿ ಅಂತ ನೋಡುಗರು ಪ್ರಶ್ನೆ ಮಾಡ್ತಿದ್ದಾರೆ. ಇನ್ನು ಚಿತ್ರಕತೆ ಹೀಗೆ ಟ್ವಿಸ್ಟ್ ಪಡೆದುಕೊಳ್ಳುತ್ತೆ ಎಂಬುದಕ್ಕೆ ಅನಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋ ಬರಹಗಳು ಪುಷ್ಠಿನೀಡಿವೆ. ಜೆಜೆ ಅಂದ್ರೇ ತಿರುವು, ನಾನು ನಾಯಕನಾ? ಖಳನಾಯಕನಾ? ಒಬ್ಬ ಕಲಾವಿದನಾಗಿ ನನಗೆ ಈ ಹೊಸ ಸವಾಲು ಖುಷಿ ಕೊಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಹೀಗಾಗಿ ಬಹುತೇಕ ಆರ್ಯವರ್ಧನ್ ತಮ್ಮ ಸ್ಟೋರಿಯ ಖಳನಾಯಕನಾಗೋದು ಖಚಿತ ಎನ್ನಲಾಗಿದ್ದು ಈ ಬದಲಾವಣೆ ಪ್ರೇಕ್ಷಕರ ಮೇಲೆ ಬೀರೋ ಪರಿಣಾಮವೇನು? ಸೀರಿಯಲ್ ಟಿಆರ್ಪಿ ಕತೆಯೇನು ಎಂಬ ಪ್ರಶ್ನೆಗಳಿಗೆ ಪ್ರೇಕ್ಷಕರೇ ಉತ್ತರಿಸಬೇಕಿದೆ.
ಇದನ್ನೂ ಓದಿ : ಸಖತ್ ಗಳಿಕೆ ಜೊತೆ ಸದ್ದು ಮಾಡಿದ ಪುಷ್ಪ: ಸಿನಿಮಾಗೆ ಅಲ್ಲೂ, ರಶ್ಮಿಕಾ, ಸಮಂತಾ ಪಡೆದ ಸಂಭಾವನೆ ಎಷ್ಟು ಗೊತ್ತಾ
ಇದನ್ನೂ ಓದಿ : ಇದುವರೆಗೂ ನಿಮಗೆಷ್ಟು ಬ್ರೇಕ್ ಅಪ್ ಆಗಿದೆ: ಅಭಿಮಾನಿ ಪ್ರಶ್ನೆಗೆ ಶೃತಿ ಹಾಸನ್ ಉತ್ತರವೇನು ಗೊತ್ತಾ?!
(jote joteyali kannada serial big twist, Anirudh and mega Shetty character)