ಸೋಮವಾರ, ಏಪ್ರಿಲ್ 28, 2025
HomeCinemaಗೋಲ್ಡನ್ ಸ್ಟಾರ್ ಗೆ ನಾಯಕಿಯಾಗಲಿರುವ ಜೊತೆ ಜೊತೆ ಯಲಿ ಮೇಘಾ ಶೆಟ್ಟಿ..!

ಗೋಲ್ಡನ್ ಸ್ಟಾರ್ ಗೆ ನಾಯಕಿಯಾಗಲಿರುವ ಜೊತೆ ಜೊತೆ ಯಲಿ ಮೇಘಾ ಶೆಟ್ಟಿ..!

- Advertisement -
  • ಭಾಗ್ಯ ದಿವಾಣ

ಚಿತ್ರರಂಗಕ್ಕೆ ಪ್ರವೇಶ ಪಡೆಯಬೇಕೆಂದರೆ ಸಾಕಷ್ಟು ಪರದಾಡಬೇಕಾಗಿದ್ದ ಕಾಲವೊಂದಿತ್ತು. ರಂಗಕಲೆಯ ಹಿನ್ನಲೆಯೋ ಅಥವಾ ಸಿನಿಮಾ ದಿಗ್ಗಜರ ಸಹಾಯಹಸ್ತವೋ ಹೀಗೆ ಯಾವುದಾದರೂ ಮೂಲಗಳಿದ್ದರೆ ಮಾತ್ರ ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡುವ ಅವಕಾಶ ಲಭ್ಯವಾಗುತ್ತಿತ್ತು.

ಆದರೆ ಈಗ ಹಾಗಲ್ಲ ಬಿಡಿ..ಕಾಲ ಬದಲಾಗಿದೆ..ಈಗೆಲ್ಲಾ ಕನ್ನಡ ಕಿರುತೆರೆಯಲ್ಲಿ ಒಮ್ಮೆ ಕ್ಲಿಕ್ ಆದರೆ ಸಾಕು, ಸಲೀಸಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಸಿಕ್ಕಿಬಿಡುತ್ತದೆ. ಕಿರುತೆಯಿಂದ ಬೆಳ್ಳಿತೆರೆಗೆ ಲಗ್ಗೆ ಇಟ್ಟ ಅನೇಕ ನಟ ನಟಿಯರ ಸಾಲಿಗೆ ಸದ್ಯ ಮತ್ತೊಬ್ಬ ನಟಿಮಣಿ ಯೊಬ್ಬರು ಸೇರ್ಪಡೆಗೊಳ್ಳಲಿದ್ದಾರೆ.

ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʻಜೊತೆ ಜೊತೆಯಲಿʼ ಧಾರವಾಹಿಯಂತೂ ಪ್ರಸಾರ ಪ್ರಾರಂಭವಾದ ಮೊದಲ ವಾರದಿಂದಲೂ ಜನಮನ್ನಣೆ ಗಳಿಸುವ ಮೂಲಕ ಹೆಚ್ಚಿನ ಟಿಆರ್ ಪಿ ಹೊಂದಿದ ಧಾರವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಟ ಅನಿರುದ್ಧ್ರ ಜೊತೆ ಜೊತೆಯಾಗಿ ಕಾಣಿಸಿಕೊಂಡ ಮಂಗಳೂರು ಮೂಲದ ಮುದ್ದು ಮೊಗದ ಚೆಲುವೆ ಮೇಘಾ ಶೆಟ್ಟಿಯಂತೂ ಸದ್ಯ ಅನು ಸಿರಿಮನೆ ಅಂತಲೇ ಕನ್ನಡಿಗರ ಮನೆ ಮಾತಾಗಿದ್ದಾರೆ.

ಮುಗ್ಧತೆಯ ಅಭಿನಯ, ಪಾತ್ರಕ್ಕೆ ಹೊಂದುವಂತಹ ಹಾವ ಭಾವವಂತೂ ಎಲ್ಲರ ಹೃದಯಗೆದ್ದಿದೆ. ಧಾರವಾಹಿಯು ಶುರುವಾದ ಮೊದಲ ವಾರವೇ ಕಿರುತೆರೆಯ ಹಲವು ಹೆಸರಾಂತ ಧಾರವಾಹಿಗಳನ್ನು ಹಿಮ್ಮೆಟ್ಟಿ, ಟಾಪ್ ೧ ಸ್ಥಾನ, ಟಾಪ್ ೨ ಸ್ಥಾನವನ್ನು ತನ್ನದಾಗಿಸಿ ಕೊಂಡಿದೆ.

ಅಷ್ಟಕ್ಕೂ ಮೇಘಾ ಶೆಟ್ಟಿ ಸಿನಿ ರಂಗದ ಕನಸು ಕಂಡವರಲ್ಲ. ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ ಈಕೆ, ಐಎಎಸ್ ಮಾಡುವ ಕನಸು ಕಂಡಿದ್ದರಂತೆ..ಆದ್ರೆ ಅಚಾನಕ್ ಆಗಿ ಜೊತೆ ಜೊತೆಯಲಿ ಧಾರಾವಾಹಿಯ ಹಿರೋಯಿನ್ ಆಗುವ ಅವಕಾಶ ಒಲಿದು ಬಂದಿದ್ದು, ಕುಟುಂಬ ದ ಸಹಕಾರದೊಂದಿಗೆ ಬಣ್ಣದ ಲೋಕಕ್ಕೆ ಅಡಿಯಿಟ್ಟರಂತೆ.

ಜೊತೆ ಜೊತೆಯಲಿ ಧಾರಾವಾಹಿ ಎಲ್ಲರ ಮೆಚ್ಚುಗೆ ಗಳಿಸುತ್ತಲೇ ಸದ್ಯ ಮೇಘಾ ಶೆಟ್ಟಿಯವರನ್ನು ಮತ್ತೊಂದು ಬಂಪರ್ ಅವಕಾಶ ಅರಸಿ ಕೊಂಡು ಬಂದಿದೆ. ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಬೆಳ್ಳಿತೆರೆಯಲ್ಲಿ ಮಿಂಚುವ ಸುಯೋಗ ಈಗ ಮೇಘಾ ಅವರದ್ದಾಗಿದೆ.

ನಿರ್ದೇಶಕ ಮಹೇಶ್ ಗೌಡ ಆಕ್ಷನ್ ಕಟ್ ಹೇಳ್ತಿರುವ ತ್ರಿಬಲ್ ರೈಡಿಂಗ್ ಚಿತ್ರವು, ಕೃಪಾಳು ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ರಾಮ್ ಗೋಪಾಲ್ ವೈ ಎಂ ನಿರ್ಮಾಣ ಮಾಡುತ್ತಿದ್ದಾರೆ.

ಸಾಯಿ ಕಾರ್ತಿಕ್ ಸಂಗೀತ, ಆನಂದ್ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಸಾಧುಕೋಕಿಲ, ರವಿಶಂಕರ್, ಕುರಿ ಪ್ರತಾಪ್ ಸೇರಿದಂತೆ ಅನೇಕ ತಾರಾ ಬಳಗವೇ ಇದೆ..ಇಷ್ಟು ದಿನ ನಾಯಕಿಯ ಹುಡುಕಾಟದಲ್ಲಿದ್ದ ʻತ್ರಿಬಲ್ ರೈಡಿಂಗ್ʼ ಚಿತ್ರತಂಡವು ಇದೀಗ ಮೇಘಾ ಶೆಟ್ಟಿ ಅವರನ್ನು ಚಿತ್ರದ ನಾಯಕಿ ಪಾತ್ರಕ್ಕೆ ಫೈನಲ್ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮೇಘಾ, ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿರುವುದು ಖುಷಿಯ ವಿಚಾರ..ಅದ್ರಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕಿ ಪಾತ್ರವೆಂದರೆ ಅದಕ್ಕಿಂತ ಸಂಭ್ರಮ ಬೇರಿಲ್ಲ..ಗಣೇಶ್ ಅವರನ್ನು ಈವರೆಗೂ ಭೇಟಿಯೇ ಆಗಿಲ್ಲ. ಈಗ ಅವರ ಜೊತೆಗೆ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶವೆಂದರೆ ಸಖತ್ ಥ್ರಿಲ್ ಆಗಿದ್ದೇನೆ ಎಂಬುದಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ಇಷ್ಟು ದಿನ ಕಿರುತೆರೆಯಲ್ಲಿ ಭಾರೀ ಸದ್ದು ಮಾಡುತ್ತಿದ್ದ ಮೇಘಾ ಶೆಟ್ಟಿ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಲಗ್ಗೆ ಇಡಲಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಈಡೇರಿಸಬೇಕಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular