ಮಂಗಳವಾರ, ಜೂನ್ 17, 2025
HomeCinemaಕಿರುತೆರೆಯಲ್ಲಿ ಹೊಸ ದಾಖಲೆ ಬರೆದ ಜೊತೆ ಜೊತೆಯಲಿ….

ಕಿರುತೆರೆಯಲ್ಲಿ ಹೊಸ ದಾಖಲೆ ಬರೆದ ಜೊತೆ ಜೊತೆಯಲಿ….

- Advertisement -

ಕನ್ನಡ ಕಿರುತೆರೆಯಲ್ಲಿ ಹೊಸ ದಾಖಲೆ ಬರೆದ ಧಾರಾವಾಹಿ ಜೊತೆ ಜೊತೆಯಲಿದೆ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಪ್ರೇಕ್ಷಕರ ಹಾಟ್ ಫೇವರೇಟ್. ಹಲವು ದಾಖಲೆಗಳನ್ನು ಬರೆದಿರುವ ಜೊತೆ ಜೊತೆಯಲಿ ಇದೀಗ ಮತ್ತೊಂದು ಹೊಸ ದಾಖಲೆ ಬರೆದಿದೆ.

Jote Joteyali

ಖ್ಯಾತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ದ ಮೊದಲ ಬಾರಿಗೆ ಜೊತೆ ಜೊತೆಯಲಿ ಧಾರವಾಹಿಯ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ರು.

Jote Joteyali 6

ನಟ ಅನಿರುದ್ದ ಹಾಗೂ ನಟಿ ಮೇಘಾ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಜೊತೆ ಜೊತೆಯಲಿ ಕನ್ನಡಿಗರ ಮನೆ ಮಾತಾಗಿದೆ.

Alvas1

ಆರೂರು ಜಗದೀಶ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ಕಿರುತೆರೆಯ ಟಿಆರ್ ಪಿ ಇತಿಹಾಸದಲ್ಲಿಯೇ ಹೊಸ ದಾಖಲೆಯನ್ನು ಬರೆದಿರೋದು ಹಳೆಯ ವಿಚಾರ. ಕೊರೊನಾ ಲಾಕ್ ಡೌನ್ ನಂತರವೂ ಧಾರವಾಹಿ ಹಳೆಯ ಚಾಪನ್ನೇ ಉಳಿಸಿಕೊಂಡು ಮುನ್ನುಗುವ ಭರವಸೆಯಲ್ಲಿದೆ ಧಾರಾವಾಹಿ ತಂಡ.

Jote Joteyali 2

ನಟ ಅನಿರುದ್, ನಟಿ ಮೇಘಾ ಶೆಟ್ಟಿ ಹಾಗೂ ಖ್ಯಾತ ನಟಿ ವಿಜಯಲಕ್ಷ್ಮೀ ಸಿಂಗ್ ಸೇರಿದಂತೆ ಬಹುತಾರಾಗಣವನ್ನು ಹೊಂದಿರುವ ಜೊತೆ ಜೊತೆಯಲಿ ಧಾರಾವಾಹಿ ವಿಭಿನ್ನವಾಗಿಯೇ ಮೂಡಿಬರುತ್ತಿದೆ. ಕಥೆ, ಕ್ಯಾಮರಾವರ್ಕ್, ಸಂಭಾಷಣೆ, ಸಂಗೀತ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ಜೊತೆ ಜೊತೆಯಲ್ಲಿ ಮೋಡಿ ಮಾಡಿದೆ.

Jote Joteyali 5

ಈ ನಡುವಲ್ಲೇ ಜೊತೆ ಜೊತೆಯಲಿ ಧಾರವಾಹಿ ಹೊಸ ದಾಖಲೆಯೊಂದನ್ನು ಬರೆದಿದೆ. ಧಾರವಾಹಿಯ ಶೀರ್ಷಿಕೆ ಗೀತೆಯನ್ನು ಪ್ರೇಕ್ಷಕರು ಬಹುವಾಗಿ ಇಷ್ಟಪಟ್ಟಿದ್ದಾರೆ. ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು… ಅಂತಾ ಶುರುವಾಗುವ ಹಾಡು ಪ್ರೇಕ್ಷಕರನ್ನು ಮೋಡಿ ಮಾಡಿದೆ.
ಜೊತೆ ಜೊತೆಯಲಿ ಧಾರವಾಹಿಯ ಶೀರ್ಷಿಕೆ ಗೀತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸೂಪರ್ ಹಿಟ್ ಆಗಿದೆ. ಧಾರವಾಹಿಯ ಹಾಡು ಯೂಟ್ಯೂಬ್ ನಲ್ಲಿ ಈಗಾಗಲೇ ಬರೋಬ್ಬರಿ 1 ಕೋಟಿಗೂ ಅಧಿಕ ವೀಕ್ಷಣೆಯನ್ನು ಕಂಡಿದೆ.

ಹರ್ಷಪ್ರಿಯ ಭದ್ರಾವತಿ ಅವರು ಬರೆದಿರುವ ಸಾಹಿತ್ಯಕ್ಕೆ ಜಿ.ಎಸ್.ಸುನಾದ್ ಗೌತಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಗಾಯಕರಾದ ನಿನಾದ ನಾಯಕ್, ನಿಹಾಲ್ ತಾವ್ರೊ, ರಜತ್ ಹೆಗಡೆ ಧ್ವನಿಯಲ್ಲಿ ಹಾಡು ಅತ್ಯದ್ಬುತವಾಗಿ ಮೂಡಿಬಂದಿದೆ.

Jote Joteyali 3

ಅಷ್ಟೇ ಯಾಕೆ ಈ ಟ್ರ್ಯಾಕ್ ಕೇಳಿದ ಕೂಡಲೇ ಜನ ಜೊತೆ ಜೊತೆಯಲಿ ಧಾರಾವಾಹಿಯನ್ನು ಗುರುತಿಸುವ ಮಟ್ಟಿಗೆ ಫೇಮಸ್ ಆಗಿದೆ.

Jote Joteyali 4

ಕನ್ನಡ ಕಿರುತೆರೆಯಲ್ಲಿ ಯಾವುದೇ ಶೀರ್ಷಿಕೆ ಗೀತೆ ಇಷ್ಟೊಂದು ಹಿಟ್ ಆಗಿದ್ದು ಇಲ್ಲ. ಈ ಮೂಲಕ ಜೊತೆ ಜೊತೆಯಲಿ ಟಿಆರ್ ಪಿ ಮಾತ್ರವಲ್ಲ ಶೀರ್ಷಿಕೆ ಗೀತೆಯ ವೀಕ್ಷಣೆಯಲ್ಲಿಯೂ ಕಿರುತೆರೆಯ ಇತಿಹಾಸದಲ್ಲಿಯೇ ಹೊಸ ದಾಖಲೆಯನ್ನು ಬರೆದಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular