ಶನಿವಾರ, ಜೂನ್ 14, 2025
HomeCinemaಮೆಕ್‌ ಡೊನಾಲ್ಡ್ಸ್‌ ಬ್ರಾಂಡ್‌ಗೆ ರಾಯಭಾರಿಯಾದ ಜೂ. ಎನ್‌ಟಿಆರ್‌ : ಸಂಭಾವನೆ ಎಷ್ಟು ಗೊತ್ತೆ ?

ಮೆಕ್‌ ಡೊನಾಲ್ಡ್ಸ್‌ ಬ್ರಾಂಡ್‌ಗೆ ರಾಯಭಾರಿಯಾದ ಜೂ. ಎನ್‌ಟಿಆರ್‌ : ಸಂಭಾವನೆ ಎಷ್ಟು ಗೊತ್ತೆ ?

- Advertisement -

ಟಾಲಿವುಡ್‌ ಖ್ಯಾತ ನಿರ್ದೇಶಕ ರಾಜಮೌಳಿ ಆರ್‌ಆರ್‌ಆರ್‌ ಸಿನಿಮಾ ಜಗತ್ತಿನಾದ್ಯಂತ ಸಿನಿಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದಿದೆ. ಇನ್ನು ಈ ಸಿನಿಮಾ ಸಕ್ಸಸ್‌ ಬಳಿಕ ನಾಯಕನ ಪಾತ್ರದಲ್ಲಿ ಅಭಿನಯಿಸಿದ ಜೂ.ಎನ್‌ಟಿಆರ್‌ ಹಾಗೂ ರಾಮ್‌ಚರಣ್‌ ಕೇವಲ ಟಾಲಿವುಡ್‌ಗೆ ಮಾತ್ರ ಸೀಮಿತವಾಗಿರದೇ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚಿದ್ದಾರೆ. ಸದ್ಯ ನಟ ಜೂ.ಎನ್‌ಟಿಆರ್‌ ವಿಶ್ವ ವಿಖ್ಯಾತಿ ಪಡೆದಿರುವ ಮೆಕ್‌ ಡೊನಾಲ್ಡ್ಸ್‌ (Jr NTR- Mcdonalds) ಕಂಪನಿಗೆ ಪ್ರಚಾರಕ್ಕೆ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ. ಇನ್ನು ಇದ್ದರಿಂದ ಜೂ.ಎನ್‌ಟಿಆರ್‌ಗೆ ಸಿಗುವ ಸಂಭಾವನೆ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

ಜೂನಿಯರ್‌ ಎನ್‌ಟಿಆರ್‌ ಅವರಿಗೆ ಇರುವ ಜನಪ್ರಿಯತೆಯನ್ನು ಬಳಸಿಕೊಳ್ಳಲು ಅನೇಕ ಹೆಸರುವಾಸಿ ಕಂಪೆನಿಗಳು ಮುಂದೆ ಬಂದಿದೆ. ಅಷ್ಟೇ ಅಲ್ಲದೇ ಪ್ಯಾನ್‌ ಇಂಡಿಯಾ ಸ್ಟಾರ್‌ ಮೇಲೆ ಬಹುಕೋಟಿ ರೂಪಾಯಿ ಸಂಭಾವನೆ ನೀಡಲು ಕೂಡ ತಯಾರಾಗಿದೆ. ಸದ್ಯಕ್ಕೆ ಜೂ.ಎನ್‌ಟಿಆರ್‌ ಅವರು ತಮ್ಮ 30ನೇ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ನಿರ್ದೇಶಕ ಕೊರಟಾಲ ಶಿವ ಅವರು ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಇದರ ನಡುವೇ ವಿಶ್ವ ವಿಖ್ಯಾತಿ ಪಡೆದಿರುವ ಮೆಕ್‌ ಡೊನಾಲ್ಡ್ಸ್‌ ಜಾಹೀರಾತಿನ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

ಸದ್ಯದಲ್ಲೇ ಜೂ. ಎನ್‌ಟಿಆರ್‌ ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಬಾಲಿವುಡ್‌ ಖ್ಯಾತ ನಟ ಹೃತಿಕ್‌ ರೋಷನ್‌ ಅಭಿನಯದ ವಾರ್‌ 2 ಸಿನಿಮಾದಲ್ಲಿ ಜೂ.ಎನ್‌ಟಿಆರ್‌ ಅಭಿನಯಿಸಲಿದ್ದಾರೆ. ವಾರ್‌ ಸಿನಿಮಾದ ಮೊದಲ ಭಾಗದಲ್ಲಿ ಹೃತಿಕ್‌ ರೋಷನ್‌ ಜೊತೆಗೆ ಟೈಗರ್‌ ಶ್ರಾಫ್‌ ನಟಿಸಲಿದ್ದಾರೆ. ಇನ್ನು ಈ ಸಿನಿಮಾಕ್ಕೆ ಯಶ್‌ರಾಜ್‌ ಫಿಲ್ಮ್ಸ್‌ ಬಂಡವಾಳ ಹೂಡಲಿದ್ದು, ಸಿದ್ದಾರ್ಥ್‌ ಆನಂದ್‌ ನಿರ್ದೇಶನ ಮಾಡಲಿದ್ದಾರೆ.

ಇದನ್ನೂ ಓದಿ : ನಿಷೇಧ ನಡುವಲ್ಲೂ 100 ಕೋಟಿ ರೂ ಭರ್ಜರಿ ಕಲೆಕ್ಷನ್ಸ್ ದಾಖಲಿಸಿದ ದಿ ಕೇರಳ ಸ್ಟೋರಿ

ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್‌ ಜೋಡಿಯಾಗಿ ಬಾಲಿವುಡ್‌ ಬೆಡಗಿ ಜಾನ್ವಿ ಕಪೂರ್‌ ನಟಿಸುತ್ತಿದ್ದಾರೆ. ಇನ್ನು ಕೊರಟಾಲ ಶಿವ ನಿರ್ದೇಶನದ ಸಿನಿಮಾದ ಶೂಟಿಂಗ್‌ ನಡೆಯುತ್ತಿದ್ದು, ಈ ಸಿನಿಮಾ ಚಿತ್ರೀಕರಣ ಮುಗಿಯುತ್ತಿದ್ದಂತೆ ಪ್ರಶಾಂತ್‌ ನೀಲ್‌ ನಿರ್ದೇಶನದ ಹೊಸ ಸಿನಿಮಾದಲ್ಲಿ ಕೂಡ ಜೂನಿಯರ್‌ ಎನ್‌ಟಿಆರ್‌ ನಟಿಸಲಿದ್ದಾರೆ. ಈ ಎರಡೂ ಸಿನಿಮಾ ಚಿತ್ರೀಕರಣ ಮುಗಿದ ಮೇಲೆ ವಾರ್‌ 2 ಸಿನಿಮಾದಲ್ಲಿ ಭಾಗಿ ಆಗಲಿದ್ದಾರೆ.

Jr NTR – Mcdonalds: Jr NTR is the brand ambassador of McDonalds. NTR: How much do you know the salary?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular