ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೊಸ ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿದೆ. ಇದೀಗ ಆ್ಯಪಲ್ ಕೇಕ್ ಎಂಬ ಸಿನಿಮಾ ಖ್ಯಾತಿಯ ನಿರ್ದೇಶಕ ರಂಜಿತ್ ಕುಮಾರ್ ಗೌಡ ಹೊಸ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಈ ಸಿನಿಮಾ ಹೆಸರು ಕಾಗದ (Kagadha movie) ಎನ್ನುವುದಾಗಿದೆ. ಈಗಾಗಲೇ ಮದರಂಗಿ, ವಾಸ್ಕೋ ಡಿಗಾಮ ಸೇರಿದಂತೆ ಹಲವರು ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವಿರುವ ರಂಜಿತ್ ಆ್ಯಪಲ್ ಕೇಕ್ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಇದೀಗ ರಂಜಿತ್ ಕುಮಾರ್ ನಿರ್ದೇಶನದ ಎರಡನೇ ಸಿನಿಮಾ ಕಾಗದದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಫಸ್ಟ್ ಲುಕ್ ಅನಾವರಣ ಮಾಡಿ ಸಿನಿತಂಡಕ್ಕೆ ಶುಭಾಶಯ ಕೋರಿದ್ದಾರೆ.
ಕಾಗದ ಸಿನಿಮಾ ಮೂಲಕ ಬಾಲನಟಿ ಅಂಕಿತಾ ನಾಯಕಿಯಾಗಿ, ಆದಿತ್ಯ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಮಫ್ತಿ ಖ್ಯಾತಿಯ ಬಾಲರಾಜವಾಡಿ, ನೇಹಾ ಪಾಟೀಲ್, ಶಿವಮಂಜು, ಅಶ್ವತ್ಥ್ ನೀನಾಸಂ, ಗೌತಮ್ ತಾರಾಬಳಗದಲ್ಲಿದ್ದಾರೆ. ಕಾಗದ ಪ್ರೇಮಕಥಾಹಂದರದ ಸಿನಿಮಾ ಇದಾಗಿದೆ. 2005ರ ಸಮಯದಲ್ಲಿ ನಡೆಯುವ ಕಾಲ್ಪನಿಕ ಕಥೆ ಆಗಿದ್ದು, ಮೊಬೈಲ್ ಇಲ್ಲದ ಕಾಲಘಟ್ಟದಲ್ಲಿ ಕಾಗದ ಎಷ್ಟು ಮುಖ್ಯ ಪಾತ್ರ ವಹಿಸಿದೆ ಅನ್ನೋದು ಸಿನಿಮಾದ ಕಥಾವಸ್ತು ಆಗಿದೆ.
ರಂಜಿತ್ ಕುಮಾರ್ ಗೌಡ ಕಥೆ ಸಿನಿಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಕಾಗದ ಸಿನಿಮಾಗೆ ಅರುಣ್ ಕುಮಾರ್ ಎ ಬಂಡವಾಳ ಹೂಡಿದ್ದಾರೆ. ಅಮ್ಮ ಸಿನಿ ಕ್ರಿಯೇಷನ್ ನಡಿ ಸಿನಿಮಾ ಮೂಡಿ ಬರಲಿದ್ದು, ಇದೇ ನಿರ್ಮಾಣ ಸಂಸ್ಥೆಯಡಿ ಈ ಹಿಂದೆ ರಗಡ್ ಎಂಬ ಸಿನಿಮಾ ನಿರ್ಮಾಣವಾಗಿತ್ತು. ಇದನ್ನೂ ಓದಿ : Spandana Passed Away : ವಿದೇಶಿ ಪ್ರವಾಸದಲ್ಲಿದ್ದಾಗ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾಗೆ ಆಗಿದ್ದೇನು?
ಕಾಗದ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಒಂದು ಹಾಡಿನ ಶೂಟಿಂಗ್ ಅಷ್ಟೇ ಬಾಕಿ ಇದೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ, ಎಸ್ ಪ್ರದೀಪ್ ವರ್ಮಾ ಸಂಗೀತ, ಪವನ್ ಗೌಡ ಸಂಕಲನ, ಭೂಷಣ್ ಕೊರಿಯೋಗ್ರಫಿ ಸಿನಿಮಾಕ್ಕಿದೆ. ಬೇಲೂರು, ಮೂಡಿಗೆರೆ ಭಾಗದಲ್ಲಿ ಕಾಗದ ಸಿನಿಮಾದ ಚಿತ್ರೀಕರದ ಮಾಡಲಾಗಿದೆ.
Kagadha movie : Child actress Ankita-Aditya debut movie first look release love mocktail couple