Kajal Aggarwal : ನಟಿ ಕಾಜಲ್ ಅಗರ್ವಾಲ್ ಗರ್ಭಿಣಿಯಾಗಿದ್ದಾರೆ ಎಂಬ ಸಾಕಷ್ಟು ಊಹಾಪೋಹಗಳ ಬಳಿಕ ನಟಿ ಕಾಜಲ್ ತಾವು ಗರ್ಭಿಣಿಯಾಗಿರುವುದಾಗಿ ಜನವರಿ ತಿಂಗಳಲ್ಲಿ ಅಧಿಕೃತ ಘೋಷಣೆ ಮಾಡಿದ್ದರು. ಅಂದಿನಿಂದ ನಟಿ ಕಾಜಲ್ ಅಗರ್ವಾಲ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೆಗ್ನೆನ್ಸಿಯ ಬಗ್ಗೆ ಮಾಹಿತಿ ನೀಡುತ್ತಲೇ ಇದ್ದಾರೆ. ಗರ್ಭಿಣಿ ಬಯಕೆಗಳು. ಗರ್ಭಿಣಿ ಆಹಾರ ಕ್ರಮ , ಗರ್ಭಿಣಿ ಮಾಡಬಹುದಾದ ಯೋಗಗಳು ಹೀಗೆ ಸಾಕಷ್ಟು ಮಾಹಿತಿಗಳನ್ನು ನಟಿ ಕಾಜಲ್ ಹಂಚಿಕೊಂಡಿದ್ದಾರೆ.
ಇದೀಗ ನಟಿ ಕಾಜಲ್ ಅರ್ಗವಾಲ್ ಅಭಿಮಾನಿಗಳಿಗೆ ಮತ್ತೊಂದು ಶುಭ ಸುದ್ದಿಯನ್ನು ನೀಡಿದ್ದಾರೆ. ನಟಿ ಕಾಜಲ್ ಹಾಗೂ ಅವರ ಪತಿ ಗೌತಮ್ ಕಿಚ್ಲು ದಂಪತಿ ತಮ್ಮ ಮೊದಲ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಇವರಿಗೆ ಗಂಡು ಮಗು ಜನಿಸಿದೆ ಎನ್ನಲಾಗಿದ್ದು ಈ ಬಗ್ಗೆ ಕಾಜಲ್ ಹಾಗೂ ಗೌತಮ್ ಕಿಚ್ಲು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.
ಕೆಲ ದಿನಗಳ ಹಿಂದಷ್ಟೇ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ ಕಾಜಲ್ ಅರ್ಗವಾಲ್ ತಾಯ್ತನದ ಬಗ್ಗೆ ಮಾತನಾಡಿದ್ದರು. ನಾನು ಹಾಗೂ ನನ್ನ ಪತಿ ಗೌತಮ್ ಪೋಷಕ ಸ್ಥಾನಕ್ಕೆ ಬಡ್ತಿ ಪಡೆಯಲು ಉತ್ಸುಕರಾಗಿದ್ದೇವೆ. ಇದು ನಿಮಗೆ ವರ್ಣಿಸಲು ಸಾಧ್ಯವಾಗದ ಭಾವನೆಯಾಗಿದೆ ಎಂದು ಹೇಳಿದ್ದರು.
ನನಗೆ ಅತೀವ ಸಂತೋಷ ಹಾಗೂ ಆತಂಕ ಎರಡೂ ಒಟ್ಟಿಗೇ ಇದೆ. ಒಬ್ಬ ವ್ಯಕ್ತಿಯನ್ನು ಬೆಳೆಸುವಲ್ಲಿ ಮತ್ತು ಆ ಮಾನವನಲ್ಲಿ ಸರಿಯಾದ ರೀತಿಯ ಮೌಲ್ಯಗಳು ಮತ್ತು ಮಾದರಿಗಳನ್ನು ಬೆಳೆಸುವಲ್ಲಿ ಅಪಾರ ಪ್ರಮಾಣದ ಜವಾಬ್ದಾರಿ ಇದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ಅದನ್ನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ. ನಾನು ಮತ್ತು ನನ್ನ ಪತಿ, ನಾವಿಬ್ಬರೂ ತುಂಬಾ ಉತ್ಸುಕರಾಗಿದ್ದೇವೆ ಎಂದು ಹೇಳಿಕೊಂಡಿದ್ದರು.
ಇದನ್ನು ಓದಿ : KGF 2 Box Office Collection : ದೇಶ-ವಿದೇಶಗಳಲ್ಲಿಯೂ ಜೋರಾಗಿದೆ ರಾಕಿ ಭಾಯ್ ಹವಾ..!ವಿದೇಶಗಳಲ್ಲಿಯೂ ಹೌಸ್ಫುಲ್ ಪ್ರದರ್ಶನ
ಇದನ್ನೂ ಓದಿ : Naga Chaitanya: ಸಮಂತಾ ನಂತರ ನಾಗಚೈತನ್ಯ ರೆಡಿಯಾದರು ಎರಡನೇ ಮದುವೆಗೆ ? ಇದು 4ನೇ ಹುಡುಗಿ ಸಹವಾಸ!
Kajal Aggarwal And Her Hubby, Gautam Kitchlu Embrace Parenthood, Blessed With A Baby Boy