ಭಾನುವಾರ, ಏಪ್ರಿಲ್ 27, 2025
HomeCinemaKamal Haasan - Prabhas : ಪ್ರಾಜೆಕ್ಟ್‌ ಕೆ ಸಿನಿಮಾದಲ್ಲಿ ನಟ ಪ್ರಭಾಸ್‌ ಜೊತೆ ನಟಿಸಲಿದ್ದಾರೆ...

Kamal Haasan – Prabhas : ಪ್ರಾಜೆಕ್ಟ್‌ ಕೆ ಸಿನಿಮಾದಲ್ಲಿ ನಟ ಪ್ರಭಾಸ್‌ ಜೊತೆ ನಟಿಸಲಿದ್ದಾರೆ ನಟ ಕಮಲ್‌ ಹಾಸನ್

- Advertisement -

ಭಾರತದಲ್ಲಿ ಬಾಹುಬಲಿ ಸಿನಿಮಾವು ನಟ ಪ್ರಭಾಸ್ ನಟಿಸಿದ (Kamal Haasan – Prabhas) ಅತ್ಯಂತ ದುಬಾರಿ ಸಿನಿಮಾಗಳ ದಾಖಲೆಗಳ ಪಟ್ಟಿಯಲ್ಲಿ ಒಂದಾಗಿದೆ. ಹೆಚ್ಚಿನ ಬಜೆಟ್‌ ಸಿನಿಮಾಗಳ ವಿಷಯದಲ್ಲಿ ಅನೇಕ ಸಿನಿಮಾಗಳು ತಮ್ಮ ಗಡಿಯನ್ನು ದಾಟಿದೆ. ಇದೀಗ ನಟ ಪ್ರಭಾಸ್ ಮತ್ತೊಂದು ದಾಖಲೆ ಮುರಿಯಲು ಸಜ್ಜಾಗಿದ್ದಾರೆ. ಸದ್ಯ ನಟ ಪ್ರಭಾಸ್‌ ಅಭಿನಯದ ಆದಿಪುರುಷ ಸಿನಿಮಾ ಅಭಿಮಾನಿಗಳ ನಿರೀಕ್ಷೆ ಸುಳ್ಳು ಮಾಡಿದೆ. ಹೀಗಾಗಿ ನಟ ಪ್ರಭಾಸ್‌ ಅಭಿನಯದ ಸಲಾರ್‌ ಹಾಗೂ ಪ್ರಾಜೆಕ್ಟ್‌ ಕೆ ಸಿನಿಮಾದ ಕಡೆ ಗಮನಹರಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ದೇಶದ ಅತ್ಯುತ್ತಮ ನಟರ ಸಾಲಿನಲ್ಲಿ ಅಗ್ರಗಣ್ಯರಾಗಿರುವ ಕಮಲ್‌ ಹಾಸನ್‌ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವದಂತಿಗಳು ಹರಿದಾಡುತ್ತಿತ್ತು.

ಇದೀಗ ಪ್ರಾಜೆಕ್ಟ್‌ ಕೆ ಸಿನಿಮಾದಲ್ಲಿ ಕಮಲ್‌ ಹಾಸನ್‌ ಅಭಿನಯಿಸಲಿದ್ದಾರೆ ಎಂದು ಸಿನಿತಂಡ ಅಧಿಕೃತವಾಗಿ ತಿಳಿಸಿದೆ. ನಟ ಕಮಲ್‌ ಹಾಸನ್‌ ಈ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತದೆ. ಆದರೆ ನಟ ಕಮಲ್‌ ಹಾಸನ್‌ ಈ ಸಿನಿಮಾದಲ್ಲಿ ಎಷ್ಟು ಸಮಯ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನಿಮಾ ನೋಡಿದ ಮೇಲೆ ತಿಳಿಯಲಿದೆ.

ಇನ್ನು “ಪ್ರಾಜೆಕ್ಟ್ ಕೆ” ಅಧಿಕೃತವಾಗಿ ಇದುವರೆಗೆ ಮಾಡಿದ ಅತ್ಯಂತ ದುಬಾರಿ ಭಾರತೀಯ ಸಿನಿಮಾವಾಗಿದೆ. ವಿವಿಧ ವರದಿಗಳು ಮತ್ತು ಲೆಕ್ಕಾಚಾರಗಳ ಪ್ರಕಾರ, ಸಿ ಅಶ್ವಿನಿ ದತ್ ನಿರ್ಮಿಸಿರುವ ಮತ್ತು ಅವರ ಅಳಿಯ ನಾಗ್ ಆಶಿನ್ ನಿರ್ದೇಶನದ ವೈಜ್ಞಾನಿಕ ಸಿನಿಮಾವು ಪೂರ್ಣಗೊಂಡ ನಂತರ 600 ಕೋಟಿ ರೂ. ಬಜೆಟ್‌ನ್ನು ಒಳಗೊಂಡಿದೆ. ಸದ್ಯಕ್ಕೆ, “ಪ್ರಾಜೆಕ್ಟ್ ಕೆ” ತನ್ನ ಶೇಕಡಾ 80 ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಹಾಗೆಯೇ ನಟ ಕಮಲ್ ಹಾಸನ್ ಅವರು ಸಿನಿಮಾದಲ್ಲಿ ಅಭಿನಯಿಸುವುದನ್ನು ಖಚಿತಪಡಿಸಿದ ತಕ್ಷಣ ಉಳಿದ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತದೆ.

ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ದಿಶಾ ಪಟಾನಿಯಂತಹ ದೊಡ್ಡ ಹೆಸರುಗಳ ಸಂಭಾವನೆಯು ಬಜೆಟ್‌ನಿಂದ ನೂರಾರು ಕೋಟಿಗಳಷ್ಟು ಹಣ ಖರ್ಚು ಮಾಡಲಿದೆ. ವರದಿಗಳ ಪ್ರಕಾರ, ಪ್ರಭಾಸ್ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ 150 ಕೋಟಿ ರೂಪಾಯಿ ಸಂಭಾವನೆಯನ್ನು ಕೇಳಿದ್ದಾರಂರೆ. ಈ ಸಿನಿಮಾ ನಾಯಕಿ ಪಾತ್ರಕ್ಕಾಗಿ ದೀಪಿಕಾ ಪಡುಕೋಣೆ 15 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ : Actor Suraj : ಪಾರ್ವತಮ್ಮ ರಾಜ್‌ಕುಮಾರ್‌ ತಮ್ಮನ ಮಗ ಸೂರಜ್‌ಗೆ ಭೀಕರ ಅಪಘಾತ

ಇದನ್ನೂ ಓದಿ : Actress Ramya : ಗುಲಾಬಿ ಹೂಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಚೆಂದದ ಕವನ ಹಂಚಿಕೊಂಡ ನಟಿ ರಮ್ಯಾ

ಲೆಜೆಂಡರಿ ಸೂಪರ್‌ಸ್ಟಾರ್ ಕಮಲ್ ಹಾಸನ್ ಅವರು ಸಿನಿಮಾದಲ್ಲಿನ ತಮ್ಮ ಪಾತ್ರಕ್ಕಾಗಿ ಸುಮಾರು 30 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಅಮಿತಾಬ್ ಬಚ್ಚನ್ ಮತ್ತು ಇತರ ನಟರಿಗೆ ಸಂಭಾವನೆಯನ್ನು ಪರಿಗಣಿಸಿದಾಗ, ಒಟ್ಟು 230 ಕೋಟಿ ತಲುಪುತ್ತದೆ. ಹೀಗಾಗಿ ಒಟ್ಟು ಸಿನಿಮಾ ನಿರ್ಮಾಣ ವೆಚ್ಚ ಸುಮಾರು 300 ರಿಂದ 400 ಕೋಟಿ ರೂ. ಆಗಲಿದ್ದು, ಹೀಗಾಗಿ ಒಟ್ಟಾರೆ ಬಜೆಟ್ 500ರಿಂದ 600 ಕೋಟಿ ರೂ. ಆಗಲಿದೆ.

Kamal Haasan – Prabhas: Actor Kamal Haasan will act with actor Prabhas in the movie Project K.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular