ಸೋಮವಾರ, ಏಪ್ರಿಲ್ 28, 2025
HomeCinemaRocking Star Yash : ರಾಕಿಂಗ್‌ ಸ್ಟಾರ್‌ ಯಶ್ ಬಿಗ್ ಬೀ ಗೆ ಹೋಲಿಸಿದ ನಟಿ...

Rocking Star Yash : ರಾಕಿಂಗ್‌ ಸ್ಟಾರ್‌ ಯಶ್ ಬಿಗ್ ಬೀ ಗೆ ಹೋಲಿಸಿದ ನಟಿ ಕಂಗನಾ : ಪೋಸ್ಟ್ ವೈರಲ್

- Advertisement -

ದೇಶದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲು ಮುಂದಾಗಿರುವ ರಾಕಿಂಗ್ ಸ್ಟಾರ್ ಯಶ್ ( Rocking Star Yash) ಅಭಿನಯದ ಸಿನಿಮಾ ಕೆಜಿಎಫ್-2 ( KGF 2) ಈಗಾಗಲೇ 400 ಕೋಟಿ ಕ್ಲಬ್ ಸೇರುತ್ತಿದ್ದು, ಇದರೊಂದಿಗೆ ಬಾಲಿವುಡ್ ವೊಂದರಲ್ಲೇ ಮೂರು ದಿನಗಳಲ್ಲಿ 143 ಕೋಟಿ ಬರೆದು ಎಲ್ಲ ಹಳೆಯ ದಾಖಲೆ ಬರೆದಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಸಾಮಾನ್ಯವಾಗಿ ನಟ-ನಟಿಯರನ್ನು ಟೀಕಿಸುವ ಮೂಲಕವೇ ಸುದ್ದಿಯಾಗುವ ಬಾಲಿವುಡ್ ನಟಿ ಕಂಗನಾ ರನಾವುತ್ ಇದೇ ಮೊದಲ ಬಾರಿಗೆ ನಟರೊಬ್ಬರನ್ನು ಬಾಯ್ತುಂಬ ಹೊಗಳಿದ್ದಾರೆ.

ಒಂದು ಕಾಲದಲ್ಲಿ ಸೌತ್ ಸ್ಟಾರ್ ಗಳನ್ನು ಹತ್ತಿರಕ್ಕೂ ಸೇರಿಸದ ಬಾಲಿವುಡ್ ಮಂದಿ ಈಗ ಸ್ಯಾಂಡಲ್ ವುಡ್ ಪ್ಯಾನ್ ಇಂಡಿಯಾ ಸಿನಿಮಾ ನೋಡಿ ದಂಗಾಗಿದ್ದಾರೆ. ಹೀಗಾಗಿ ರಾಕಿಂಗ್ ಸ್ಟಾರ್ ನಟನೆ ಹಾಗೂ ಸಿನಿಮಾ ಮೆಚ್ಚಿಕೊಂಡ ಬಾಲಿವುಡ್ ಬೆಡಗಿ‌ಕಂಗನಾ ರನಾವುತ್, ಯಶ್ ಅವರು ಆಂಗ್ರ್ಯಿ ಯಂಗ್ ಮ್ಯಾನ್.‌ ಹಲವು ದಶಕಗಳಿಂದ ಭಾರತ ಇದನ್ನು ಮಿಸ್ ಮಾಡಿಕೊಳ್ಳುತ್ತಿತ್ತು. ಅಮಿತಾಬ್ ಬಚ್ಚನ್ 70 ದಶಕದಲ್ಲಿ ಹೀಗೆಯೇ ಇದ್ದರು. ಈಗ ಆ ಜಾಗವನ್ನು ಯಶ್ ತುಂಬಿದ್ದಾರೆ ಎಂದಿದ್ದಾರೆ.

ಯಶ್ , ರಾಮ್ ಚರಣ್, ಜ್ಯೂನಿಯರ್ ಎನ್ ಟಿ ಆರ್ ಹಾಗೂ ಅಲ್ಲೂ ಅರ್ಜುನ್ ಕೋಲಾಜ್ ಪೋಟೋ ಶೇರ್ ಮಾಡಿಕೊಂಡಿರೋ ಕಂಗನಾ ರನಾವುತ್, ದಕ್ಷಿಣದ ಸೂಪರ್ ಸ್ಟಾರ್ ಗಳು ತಮ್ಮ ಸಂಸ್ಕೃತಿಯಲ್ಲಿ ನೆಲೆಗೊಂಡಿದ್ದಾರೆ ಹಾಗೂ ಅಲ್ಲಿಯೇ ಆಳವಾಗಿ ನೆಲೆಯೂರಿದ್ದಾರೆ ಎಂದು ಹೊಗಳಿದ್ದಾರೆ. ರಾಕಿ ನಾರಾಚಿ ದುನಿಯಾವನ್ನು ಆಳುವ ಪಾತ್ರದಲ್ಲಿ ಯಶ್ ಸಖತ್ ಮಿಂಚಿದ್ದು ಈ ಪಾತ್ರವನ್ನು ಬಾಲಿವುಡ್ ನಟ-ನಟಿಯರು ಸೇರಿದಂತೆ ರಜನಿಕಾಂತ್ ವರೆಗೆ ಎಲ್ಲ ಸ್ಟಾರ್ ಗಳು ಮೆಚ್ಚಿಕೊಂಡಿದ್ದಾರೆ.

ಡಾನ್, ದೀವಾರ್ ,ಶಕ್ತಿ,ಅಗ್ನಿಪತ್ ಸಿನಿಮಾದಲ್ಲಿ ಆಗ ನಟ ಅಮಿತಾಬ್ ಬಚ್ಚನ್ ಕೂಡ ಇಂತಹುದೇ ಯಂಗ್ ಆ್ಯಂಡ್ ಡೈನಾಮಿಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಗಲೂ ಅವರನ್ನು ಆ್ಯಂಗ್ರಿ ಆ್ಯಂಗ್ ಮ್ಯಾನ್ ಲುಕ್ ಎಂದೇ ಬಣ್ಣಿಸಲಾಗಿತ್ತು. ಈಗ ಯಶ್ ಗೆ ಕಂಗನಾ ಮತ್ತೆ ಅದೇ ಹೊಗಳಿಕೆ ನೀಡಿದ್ದಾರೆ. ಆದರೆ ಈ ಹೊಗಳಿಕೆ ಬಗ್ಗೆ ಯಶ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನೊಂದೆಡೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಯಶ್ , ಅಮಿತಾಬ್ ಸಿನಿಮಾಗಳನ್ನು ರಿಮೇಕ್ ಮಾಡ್ತಿರಾ ಅನ್ನೋ ಪ್ರಶ್ನೆಗೆ, ನನಗೆ ರಿಮೇಕ್ ಸಿನಿಮಾಗಳು ಎಂದ್ರೇ ಇಷ್ಟವಿಲ್ಲ. ಅದರಲ್ಲೂ ಅಮಿತಾಬ್ ಸಿನಿಮಾಗಳು ಸಖತ್ ಕ್ಲಾಸಿಕ್. ಅವರ ಸಿನಿಮಾಗಳ ತಂಟೆಗೆ ಹೋಗದೇ ಇರೋದೇ ಉತ್ತಮ ಎಂದಿದ್ದರು.

ಇದನ್ನೂ ಓದಿ : RRR Film: ಚೀನಾ, ಜಪಾನ್ ನಲ್ಲೂ ಆರ್ ಆರ್ ಆರ್ ಮೇನಿಯಾ!

ಇದನ್ನೂ ಓದಿ : Chhavi Mittal : ಛವಿ ಮಿತ್ತಲ್ ಗೆ ಕ್ಯಾನ್ಸರ್ : ರೋಗ ಗೆದ್ದೋ ಬರೋದಾಗಿ ಭಾವನಾತ್ಮಕ ಪೋಸ್ಟ್

Kangana Ranaut Compared To KGF 2 Rocking Star Yash Amitabh Bachchan Viral Post

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular