ಮುಂಬೈ: ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ. ಈ ಕುರಿತು ನಟಿ ಕಂಗನಾ ಗಂಭೀರ ಆರೋಪ ಮಾಡಿದ್ದು, ಇದೊಂದು ಅಂತರಾಷ್ಟ್ರೀಯ ಷಡ್ಯಂತ್ರವೆಂದು ಬರೆದುಕೊಂಡಿದ್ದಾರೆ.

ತನ್ನ ಇನ್‌ಸ್ಟಾಗ್ರಾಂ ಹ್ಯಾಕ್ ಆಗಿರೋ ಕುರಿತು ನಿನ್ನೆ ರಾತ್ರಿ ಮೆಸೇಜ್ ಬಂದಿತ್ತು. ತನ್ನ ಖಾತೆಯನ್ನು ಚೀನಾದಿಂದ ಹ್ಯಾಕ್ ಮಾಡಲಾಗುತ್ತಿದೆ. ತಾಲಿಬಾನ್ ಕುರಿತು ಹಾಕಲಾಗಿದ್ದ ಪೋಸ್ಟ್ ಕೂಡ ಖಾತೆಯಲ್ಲಿ ಕಾಣಿಸುತ್ತಿಲ್ಲ. ಅಲ್ಲದೇ ನನ್ನ ಖಾತೆಯನ್ನು ಡಿಸೇಬಲ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಇನ್‌ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡುವ ಸಂದರ್ಭದಲ್ಲಿ ತನ್ನ ಖಾತೆ ಲಾಗ್‌ಔಟ್ ಆಗುತ್ತಲೇ ಇರುತ್ತಿದೆ. ಇದೊಂದು ಅಂತರಾಷ್ಟ್ರೀಯ ಷಡ್ಯಂತ್ರ, ಈ ಪೋಸ್ಟ್ ಅನ್ನು ತನ್ನ ತಂಗಿಯ ಮೊಬೈಲ್ ನಿಂದ ಪೋಸ್ಟ್ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಕಂಗನಾ ರಣಾವತ್ ಇತ್ತೀಚಿಗಷ್ಟೇ ತಮ್ಮ ಡ್ರೆಸ್‌ನಿಂದ ಸಾಕಷ್ಟು ಸುದ್ದಿಯಾಗಿದ್ದರು. ಈ ಹಿಂದೆಯೂ ಕಂಗನಾ ಅವರ ಟ್ವೀಟರ್ ಖಾತೆಯನ್ನು ಸಸ್ಪೆಂಡ್ ಮಾಡಲಾಗಿತ್ತು. ಇದೀಗ ಇನ್‌ಸ್ಟಾ ಗ್ರಾಂ ಖಾತೆ ಕೂಡ ಹ್ಯಾಕ್ ಆಗಿದೆ ಎಂದು ನಟಿ ಆರೋಪಿಸಿದ್ದಾರೆ.