ಮುಂಬೈ : ವಿವಾದಾತ್ಮಕ ಪೋಸ್ಟ್ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರ ಖಾತೆಯನ್ನು ಟ್ವೀಟರ್ ಶಾಶ್ವತವಾಗಿ ಅಮಾನತ್ತು ಗೊಳಿಸಿದೆ.

ಮೇ 2 ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಕುರಿತಂತೆ ನಟಿ ಕಂಗನಾ ರಾಣಾವತ್ ಸರಣಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದರು. ಆದರೆ ಈ ಟ್ವೀಟ್ ಗಳ ಮೂಲಕ ಕಂಗನಾ ರಾಣಾವತ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಅಮಾನತ್ತುಗೊಳಿಸಲಾಗಿದೆ. ನಮ್ಮ ಸೇವೆಯಲ್ಲಿರುವ ಪ್ರತಿಯೊಬ್ಬರಿಗೂ ನಾವು ಟ್ವಿಟರ್ ನಿಯಮಗಳನ್ನು ನ್ಯಾಯ ಸಮ್ಮತವಾಗಿ ಮತ್ತು ನಿಷ್ಪಕ್ಷಪಾತವಾಗಿ ಜಾರಿಗೊಳಿಸುತ್ತೇವೆ ಎಂದು ಟ್ವೀಟರ್ ಹೇಳಿಕೊಂಡಿದೆ.

ಕಂಗನಾ ರಾಣಾವತ್ ಟ್ವಿಟ್ಟರ್ ನಲ್ಲಿ ಬರೋಬ್ಬರಿ 3 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು. ನನ್ನ ಸ್ವಂತ ಕಲೆ ಸೇರಿದಂತೆ ಸಿನೆಮಾ ರೂಪದಲ್ಲಿ ಧ್ವನಿ ಹೆಚ್ಚಿಸಲು ನಾನು ಬಳಸಬಹುದಾದ ಹಲವು ವೇದಿಕೆಗಳಿವೆ ಎಂದು ಹೇಳಿದ್ದಾರೆ.