Kantara Highest Rated Indian Film: ಚಿತ್ರರಂಗದಲ್ಲಿ ಸದ್ಯ ಕನ್ನಡ ಫಿಲಂ ಇಂಡಸ್ಟ್ರಿ ರಾಜ್ಯಭಾರ ಮಾಡ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಸ್ಯಾಂಡಲ್ವುಡ್ ಮಿಕ್ಕೆಲ್ಲ ಚಿತ್ರರಂಗದವರು ತನ್ನತ್ತ ತಿರುಗಿ ನೀಡುವಂತೆ ಮಾಡ್ತಿದೆ. ಒಂದು ಕಾಲದಲ್ಲಿ ಬಾಲಿವುಡ್ ಅಂದರೆ ಎಲ್ಲ ಕಲಾವಿದರ ಪಾಲಿಗೆ ಒಂದು ಕನಸಿನ ಇಂಡಸ್ಟ್ರಿಯಾಗಿತ್ತು. ಆದರೆ ಈಗ ಈ ಸ್ಥಾನವನ್ನು ಕನ್ನಡ ಸಿನಿಮಾ ಇಂಡಸ್ಟ್ರಿ ಪಡೆದುಕೊಂಡಿದೆ . ಬಾಲಿವುಡ್ನಲ್ಲಿ ಸಾಕಷ್ಟು ಸಾಲು ಸಾಲು ಸಿನಿಮಾಗಳಲ್ಲಿ ಸೋತ ಬಳಿಕ ಬ್ರಹ್ಮಾಸ್ತ್ರ ಸಿನಿಮಾ ಹಿಟ್ ಆಗಿತ್ತು. ಇದಾದ ಬಳಿಕ ಬಾಲಿವುಡ್ ಮತ್ತೆ ಟೇಕಾಫ್ ಆಯ್ತು ಅಂದುಕೊಳ್ಳುವಷ್ಟರಲ್ಲಿ ವಿಕ್ರಮ್ ವೇದ ಸಿನಿಮಾವು ಕಳಪೆ ಪ್ರದರ್ಶನ ಕಾಣುವ ಮೂಲಕ ಬಾಲಿವುಡ್ ಮತ್ತೆ ಗೆಲ್ಲುತ್ತೆ ಎಂಬ ಮಾತು ಪ್ರಶ್ನಾರ್ಥಕವಾಗಿಯೇ ಉಳಿಯುವಂತೆ ಮಾಡಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಮ್ ಸೇತು ಹಾಗೂ ಥ್ಯಾಂಕ್ಗಾಡ್ ಸಿನಿಮಾ ರಿಲೀಸ್ ಆಗುವವರೆಗೂ ಬಾಲಿವುಡ್ ಮತ್ತೆ ಗೆಲ್ಲುತ್ತೆ ಎಂಬ ಯಾವ ನಿರೀಕ್ಷೆಯೂ ಇಲ್ಲ. ಮಣಿರತ್ನಂರ ಪೊನ್ನಿಯನ್ ಸೆಲ್ವನ್ ಸಾರ್ವಕಾಲಿಕ ಬಾಕ್ಸಾಫೀಸು ದಾಖಲೆಗಳನ್ನು ಮುರಿದು ತಮಿಳುನಾಡು ಬಾಕ್ಸಾಫೀಸಿನಲ್ಲಿ ಅತೀ ಹೆಚ್ಚು ಗಳಿಕೆಯನ್ನು ಮಾಡಿದೆ.
ಸ್ಯಾಂಡಲ್ವುಡ್ನಲ್ಲಿ ಕೆಜಿಎಫ್ 2 ಸಿನಿಮಾವು ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಈ ಸ್ಥಾನವನ್ನು ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರ ಸಿನಿಮಾವು ಪಡೆದುಕೊಂಡಿದೆ. ಪ್ಯಾನ್ ಇಂಡಿಯಾದಲ್ಲಿ ಕನ್ನಡದಲ್ಲಿಯೇ ರಿಲೀಸ್ ಆಗಿದ್ದ ಈ ಸಿನಿಮಾ ಇದೀಗ ಭಾರೀ ಬೇಡಿಕೆಯ ಹಿನ್ನೆಲೆಯಲ್ಲಿ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದೆ.
ಕಾಂತಾರ ಸಿನಿಮಾವು ಕನ್ನಡದಲ್ಲಿ ತನ್ನ ಐತಿಹಾಸಿಕ ಓಟವನ್ನು ಮುಂದುವರಿಸುತ್ತಿರುವ ನಡುವೆಯೇ ರಿಷಬ್ ಶೆಟ್ಟಿ ಅಭಿನಯದ ಈ ಚಲನಚಿತ್ರವು ಇಂಟರ್ನೆಟ್ ಮೂವಿ ಡೇಟಾಬೇಸ್ನಲ್ಲಿ ಅತ್ಯಧಿಕ ರೇಟಿಂಗ್ ಪಡೆದ ಭಾರತೀಯ ಸಿನಿಮಾವಾಗಿದೆ. ಹಾಗೂ ಈ ಮೂಲಕ ಆರ್ಆರ್ಆರ್ ಹಾಗೂ ಕೆಜಿಎಫ್ 2 ಸಿನಿಮಾಗಳ ದಾಖಲೆಗಳನ್ನು ಉಡೀಸ್ ಮಾಡಿದೆ. 13181 ವೋಟ್ಗಳ ಮೂಲಕ ಕಾಂತಾರ ಸಿನಿಮಾವು ಪ್ರಸ್ತುತ 9.5 ರೇಟಿಂಗ್ಗಳನ್ನು ಪಡೆದುಕೊಂಡಿದೆ.
ಎಸ್.ಎಸ್ ರಾಜಮೌಳಿ ಜಾಗತಿಕ ಬ್ಲಾಕ್ಬಸ್ಟರ್ ಆರ್ಆರ್ಆರ್ 8.0 ರೇಟಿಂಗ್ ಪಡೆದುಕೊಂಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ಹೊಂಬಾಳೆ ಫಿಲ್ಮ್ಸ್ನ ಕೆಜಿಎಫ್ ಚಾಪ್ಟರ್ 2 ಸಿನಿಮಾವು 8.4 ರೇಟಿಂಗ್ ಪಡೆದುಕೊಂಡಿದೆ. ಕಾಶ್ಮೀರಿ ಫೈಲ್ಸ್ 8.3 ಹಾಗೂ ಕಾರ್ತಿಕೇಯ 8.1 ರೇಟಿಂಗ್ ಪಡೆದುಕೊಂಡಿದೆ.
ಇದನ್ನು ಓದಿ : Puttur Bus Stand:ಪುತ್ತೂರು ಬಸ್ ನಿಲ್ದಾಣ ಇನ್ಮುಂದೆ ‘ಕೋಟಿ -ಚೆನ್ನಯ್ಯ ಬಸ್ ನಿಲ್ದಾಣ’ : ಸರ್ಕಾರದಿಂದ ಮಹತ್ವದ ಆದೇಶ
ಇದನ್ನೂ ಓದಿ : Ajaideh Randam Moshanam:ಸೆಟ್ಟೇರಿತು ‘ಅಜಯಂತೆ ರಂದಂ ಮೋಷನಂ’- 3ಡಿಯಲ್ಲಿ ಮೋಡಿ ಮಾಡಲಿದ್ದಾರೆ ಟೊವಿನೋ ಥಾಮಸ್, ಕೃತಿ ಶೆಟ್ಟಿ..!
Kannada Epic ‘Kantara’ Beats ‘RRR’ & ‘KGF 2’ To Become The Highest Rated Indian Film On IMDb