Kannaḍati serial : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರವಾಹಿಗಳಲ್ಲಿ ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಎದುರಾಗುತ್ತಿದೆ. ಅದರಲ್ಲೂ ಸಂಜೆ 7:30ಕ್ಕೆ ಪ್ರಸಾರವಾಗುವ ಕನ್ನಡತಿ ಧಾರವಾಹಿಯಂತೂ ಪ್ರೇಕ್ಷಕರಿಗೆ ವಿಭಿನ್ನ ರೀತಿಯಲ್ಲಿ ಕತೆಯನ್ನು ಕಟ್ಟಿಕೊಡುತ್ತಿದೆ. ಹರ್ಷ – ಭುವಿಯನ್ನು ಒಂದು ಮಾಡಿ ಎಂಬ ಪ್ರೇಕ್ಷಕರ ಬೇಡಿಕೆಯಂತೆ ಇದೀಗ ಧಾರವಾಹಿಯಲ್ಲಿ ಹರ್ಷ ಹಾಗೂ ಭುವಿಯ ಮದುವೆ ತಯಾರಿಯ ಸೀನ್ಗಳು ನಡೆಯುತ್ತಿವೆ. ಮದುವೆಗೂ ಮುನ್ನ ಈಗಾಗಲೇ ಸಾಕಷ್ಟು ಟ್ವಿಸ್ಟ್ಗಳು ಎದುರಾಗುತ್ತಿದೆ. ಹರ್ಷ ಹಾಗೂ ಭುವಿಯ ಮದುವೆಗೆ ಸಾನಿಯಾ ಹುಳಿ ಹಿಂಡಲು ಯತ್ನಿಸುತ್ತಿರುವ ನಡುವೆಯೇ ಇದೀಗ ವೆಡ್ಡಿಂಗ್ ಪ್ಲಾನರ್ ಆಗಿರುವ ವರೂಧಿನಿ ಕೂಡ ಹೊಸದೊಂದು ಟ್ವಿಸ್ಟ್ ನೀಡಲು ರೆಡಿಯಾಗಿರುವಂತೆ ಕಾಣುತ್ತಿದೆ.
ಹರ್ಷನ ಚಿಕ್ಕಪ್ಪ ಕೂಡ ಭುವಿ ಹಾಗೂ ಹರ್ಷ ಮದುವೆಯ ವಿಲ್ಲನ್ ಆಗಿ ಹೊರಹೊಮ್ಮಿದ್ದಾರೆ. ತಮ್ಮ ಮಗಳ ಮದುವೆ ನಿಂತು ಹೋಗಲು ಭುವಿಯೇ ಕಾರಣ ಎಂಬುದು ಹರ್ಷ ಚಿಕ್ಕಪ್ಪನ ಆರೋಪವಾಗಿದೆ. ಇತ್ತ ಸಾನಿಯಾಳಂತೂ ಎಲ್ಲಾ ಆಸ್ತಿ ಹರ್ಷ ಹಾಗೂ ಭುವಿಗೆ ಸೇರುತ್ತೆ ಎಂಬ ಆತಂಕದಿಂದ ಪ್ಲಾನ್ ಮೇಲೆ ಪ್ಲಾನ್ನ್ನು ಹೆಣೆಯುತ್ತಲೇ ಇದ್ದಾರೆ. ವರೂಧಿನಿ, ಸಾನಿಯಾ ಹಾಗೂ ಹರ್ಷನ ಚಿಕ್ಕಪ್ಪ ಈ ಮೂವರಲ್ಲಿ ಯಾರು ಈ ಮದುವೆಯನ್ನು ನಿಲ್ಲಿಸ್ತಾರೆ? ಅಥವಾ ಈ ಮೂವರ ಕುತಂತ್ರಗಳನ್ನು ಮೀರಿ ಹರ್ಷ ಹಾಗೂ ಭುವಿ ಹೇಗೆ ಮದುವೆಯಾಗ್ತಾರೆ ಎನ್ನುವುದೇ ಸದ್ಯದ ಥ್ರಿಲ್ಲರ್ ಆಗಿದೆ.
ಹರ್ಷ ಎಂದರೆ ವರೂಧಿನಿಗೆ ಅದೇನೋ ವಿಚಿತ್ರ ಪ್ರೀತಿ. ಹಿರೊನನ್ನು ಮದುವೆಯಾಗಲು ಈಕೆ ಏನು ಮಾಡಲು ಬೇಕಿದ್ದರೂ ಸಿದ್ಧಳಿದ್ದಾಳೆ. ಆದರೆ ಭುವಿ ತನ್ನ ಗೆಳತಿ ಎಂಬ ಕಾರಣಕ್ಕೆ ವರೂಧಿನಿಗೆ ಹೆಚ್ಚೇನು ಮಾಡಲು ಸಾಧ್ಯವಾಗ್ತಿಲ್ಲ. ಎಲ್ಲರೆದುರು ಭುವಿ ಮದುವೆಗೆ ತಾನೇ ಪ್ಲಾನ್ ಮಾಡ್ತಿದ್ದೀನಿ ಎಂಬಂತೆ ತೋರಿಸಿಕೊಳ್ತಿರುವ ವರೂಧಿನಿ ಒಳಗೊಳಗೆ ಸ್ಕೆಚ್ ಹಾಕುತ್ತಿರುವಂತೆ ತೋರುತ್ತಿದೆ.
ಹರ್ಷನಿಗೆ ವರೂಧಿನಿ ತಮ್ಮ ಮದುವೆಯ ಪ್ಲಾನರ್ ಆಗುವುದು ಇಷ್ಟವಿರಲಿಲ್ಲ. ಆದರೆ ಭುವಿಯನ್ನು ಮುಂದಿಟ್ಟುಕೊಂಡು ಈ ಮದುವೆಯ ಕಾಂಟ್ರ್ಯಾಕ್ಟ್ನ್ನು ವರೂಧಿನಿಯೇ ಪಡೆದುಕೊಂಡಿದ್ದಾಳೆ. ಮನಸ್ಸಲ್ಲಿ ನೋವಿದ್ದರೂ ಹರ್ಷ ಹಾಗೂ ಭುವಿಯ ಮದುವೆಗೆ ಕಾಂಟ್ರ್ಯಾಕ್ಟ್ ಪಡೆದಿರುವ ವರೂಧಿನಿ ಮದುವೆ ಮನೆಯಲ್ಲಿ ಏನು ಪ್ಲಾನ್ ಮಾಡಬಹುದು ಎಂಬುದಕ್ಕೆ ಪ್ರೇಕ್ಷಕರು ಕಾತುರರಾಗಿದ್ದಾರೆ.
ಇದನ್ನು ಓದಿ : ಶಾಸಕರೊಬ್ಬರ ಮರ್ಸಿಡಿಸ್ ಕಾರಿನಲ್ಲಿ ಬಾಲಕಿಯ ಮೇಲೆ ಬಾಲಕರಿಂದ ಸಾಮೂಹಿಕ ಅತ್ಯಾಚಾರ
ಇದನ್ನೂ ಓದಿ : Hardik Pandya : ಹಾರ್ದಿಕ್ ಪಾಂಡ್ಯಗೆ ಕೃನಾಲ್ ಪಾಂಡ್ಯ ಭಾವನಾತ್ಮಕ ಸಂದೇಶ
Kannaḍati serial wedding episode