ಶನಿವಾರ, ಏಪ್ರಿಲ್ 26, 2025
HomeCinemaಕಾಂತಾರ -2 ಸಿನಿಮಾಕ್ಕೆ ಸಂಕಷ್ಟ : ನಟ ರಿಷಬ್‌ ಶೆಟ್ಟಿಗೆ ಎಚ್ಚರಿಕೆ ಕೊಟ್ಟ ಪಂಜುರ್ಲಿ ದೈವ

ಕಾಂತಾರ -2 ಸಿನಿಮಾಕ್ಕೆ ಸಂಕಷ್ಟ : ನಟ ರಿಷಬ್‌ ಶೆಟ್ಟಿಗೆ ಎಚ್ಚರಿಕೆ ಕೊಟ್ಟ ಪಂಜುರ್ಲಿ ದೈವ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿರುವ ಕದ್ರಿ ಸಮೀಪದ ಬಾರೆಬೈಲ್‌ಲ್ಲಿ ವಾರಾಹಿ ಪಂಜುರ್ಲಿ ದೈವಕ್ಕೆ ರಿಷಬ್‌ ಶೆಟ್ಟಿ ಮೊರೆಯಿಟ್ಟಿದ್ದಾರೆ. ಬಾರೆಬೈಲ್‌ ನಲ್ಲಿ ವಾರಾಹಿ ಪಂಜುರ್ಲಿ ಹಾಗೂ ಜಾರಂದಾಯ ದೈವಗಳ ವಾರ್ಷಿಕ ನೇಮೋತ್ಸವ ಮೂರು ದಿನಗಳ ಕಾಲ ಅದ್ದೂರಿಯಾಗಿ ನೆರವೇರಿದೆ.

- Advertisement -

Kantara 2 Rishab Shetty : ಮಂಗಳೂರು : ಕಾಂತಾರ 2 ಸಿನಿಮಾಕ್ಕೆ ಸಾಲು ಸಾಲು ಸಂಕಷ್ಟ ಎದುರಾಗಿದ್ದು, ನಟ ನಿರ್ದೇಶಕ ರಿಷಬ್‌ ಶೆಟ್ಟಿ ಪಂಜುರ್ಲಿ ದೈವದ ಮೊರೆ ಹೋಗಿದ್ದಾರೆ. ರಿಷಬ್‌ ಶೆಟ್ಟಿಗೆ ದೈವ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ನೆಮೋತ್ಸವದ ಹರಿಕೆಯನ್ನು ನಟ ರಿಷಬ್‌ ಶೆಟ್ಟಿ ಹೊತ್ತುಕೊಂಡಿದ್ದಾರೆ.

ಕರಾವಳಿಯ ಸೊಗಡಿನ ಕಾಂತಾರ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿತ್ತು. ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ರಿಷಬ್‌ ಶೆಟ್ಟಿ ಕಾಂತಾರ 2 ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರು. ಕಾಂತಾರ 2 ಸಿನಿಮಾ ಶೂಟಿಂಗ್‌ ಕರಾವಳಿಯ ಹಲವು ಕಡೆಗಳಲ್ಲಿ ನಡೆಯುತ್ತಿದೆ.

ಆದರೆ ಕಾಂತಾರ 2 ಸಿನಿಮಾಕ್ಕೆ ಸಾಲು ಸಾಲು ಸಮಸ್ಯೆಗಳು ಎದುರಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸಿನಿಮಾ ಶೂಟಿಂಗ್‌ ವೇಳೆಯಲ್ಲಿ ಅರಣ್ಯನಾಶದ ಆರೋಪವನ್ನು ಎದುರಿಸಿತ್ತು. ಜೊತೆಗೆ ಕೊಲ್ಲೂರು ಬಳಿಯಲ್ಲಿ ಜೂನಿಯರ್‌ ಆರ್ಟಿಸ್ಟ್‌ಗಳು ಪ್ರಯಾಣಿಸುತ್ತಿದ್ದ ವ್ಯಾನ್‌ ಅಪಘಾತಕ್ಕೆ ಒಳಗಾಗಿತ್ತು. ಜೊತೆಗೆ ಪೇಮೆಂಟ್‌ ನೀಡಿಲ್ಲ ಅಂತಾ ಜೂನಿಯರ್‌ ಆರ್ಟಿಸ್ಟ್‌ ಗಲಾಟೆ ಮಾಡಿದ್ದರು. ಜೊತೆಗೆ ದೈವಾರಾಧಕರಿಂದಲೂ ವಿರೋಧ ಎದುರಿಸಿತ್ತು.

ಕಾಂತಾರ 2 ಸಿನಿಮಾ ಚಿತ್ರೀಕರಣ ಆರಂಭವಾದ ನಂತರದಲ್ಲಿ ಸಾಲು ಸಾಲು ವಿವಾದಗಳನ್ನು ಚಿತ್ರತಂಡ ಎದುರಿಸಿತ್ತು. ಕಾಂತಾರ 2 ಸಿನಿಮಾದಲ್ಲಿ ಪಂಜುರ್ಲಿ ದೈವದ ಹುಟ್ಟಿನ ಕಥೆಯನ್ನು ಹೇಳಲು ರಿಷಬ್‌ ಶೆಟ್ಟಿ ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಾಲು ಸಾಲು ವಿವಾದಗಳಿಂದ ಬೇಸತ್ತಿರುವ ರಿಷಬ್‌ ಶೆಟ್ಟಿ ಇದೀಗ ದೈವದ ಮೊರೆ ಹೋಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿರುವ ಕದ್ರಿ ಸಮೀಪದ ಬಾರೆಬೈಲ್‌ಲ್ಲಿ ವಾರಾಹಿ ಪಂಜುರ್ಲಿ ದೈವಕ್ಕೆ ರಿಷಬ್‌ ಶೆಟ್ಟಿ ಮೊರೆಯಿಟ್ಟಿದ್ದಾರೆ. ಬಾರೆಬೈಲ್‌ ನಲ್ಲಿ ವಾರಾಹಿ ಪಂಜುರ್ಲಿ ಹಾಗೂ ಜಾರಂದಾಯ ದೈವಗಳ ವಾರ್ಷಿಕ ನೇಮೋತ್ಸವ ಮೂರು ದಿನಗಳ ಕಾಲ ಅದ್ದೂರಿಯಾಗಿ ನೆರವೇರಿದೆ. ಕೊನೆಯ ದಿನವಾದ ಭಾನುವಾರ ರಾತ್ರಿ ರಿಷಬ್‌ ಶೆಟ್ಟಿ ನೇಮೋತ್ಸವದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ : ಮೇಘನಾ ರಾಜ್ ಸರ್ಜಾ ಹೊಸ ಮನೆ : ಚಿರು ಮನೆ ತೊರೆಯೋ ನಿರ್ಧಾರ ಮಾಡಿದ್ಯಾಕೆ ಗೊತ್ತಾ ?

ರಿಷಬ್‌ ಶೆಟ್ಟಿ ಭಾನುವಾರ ತಡರಾತ್ರಿ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಬಂದು ದೈವಕ್ಕೆ ಮೊರೆಯಿಟ್ಟಿದ್ದು, ಕಾಂತಾರ 2 ಸಿನಿಮಾಕ್ಕೆ ಎದುರಾಗಿರುವ ಸಂಕಷ್ಟಗಳ ಕುರಿತು ಹೇಳಿಕೊಂಡಿದ್ದಾರೆ. ಈ ವೇಳೆಯಲ್ಲಿ ದೈವ ನಿನ್ನ ಸಂಸಾರವನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ಜಗತ್ತಿನಾದ್ಯಂತ ನಿನಗೆ ಶತ್ರುಗಳು ಹೆಚ್ಚಾಗಿದ್ದಾರೆ. ಹೀಗಾಗಿ ನೀನು ನನಗೊಂದು ಹರಿಕೆಯನ್ನು ಕಟ್ಟಿಕೋ ಎಂದಿದ್ದಾರೆ.

ನಿನಗೆ ಎದುರಾಗಿರುವ ಎಲ್ಲಾ ಕಷ್ಟ, ಸಂಕಷ್ಟಗಳನ್ನು ಐದು ತಿಂಗಳಿನಲ್ಲಿ ಪರಿಹಾರ ಮಾಡಿಕೊಡುತ್ತೇನೆ ಎಂದು ದೈವ ಅಭಯವನ್ನು ನೀಡಿದೆ. ಈ ವೇಳೆಯಲ್ಲಿ ರಿಷಬ್‌ ಶೆಟ್ಟಿ ಅವರು ಮುಂದಿನ ವರ್ಷ ಇದೇ ಸ್ಥಳದಲ್ಲಿ ನೇಮೋತ್ಸವವನ್ನು ನಡೆಸುವುದಾಗಿ ಹರಿಕೆಯನ್ನು ಕಟ್ಟಿಕೊಂಡಿದ್ದಾರೆ. ಒಟ್ಟಿನಲ್ಲಿ ಕಾಂತಾರ 2 ಸಿನಿಮಾಕ್ಕೆ ಸಾಲು ಸಾಲು ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ : ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿಕೊಟ್ಟ ರಾಧಿಕಾ ಪಂಡಿತ್‌ : ಪೋಟೋ ವೈರಲ್

ರಿಷಬ್‌ ಶೆಟ್ಟಿ ಅವರು ಕಾಂತಾರ ಸಿನಿಮಾ ನಿರ್ಮಾಣಕ್ಕೆ ಕೈ ಹಾಕುವ ಮೊದಲು ಕೂಡ ಪಂಜುರ್ಲಿ ದೈವದ ಮೊರೆ ಹೋಗಿದ್ದರು. ಕಾಂತಾರ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಅಲ್ಲದೇ ಸಾವಿರಾರು ಕೋಟಿ ರೂಪಾಯಿ ಲಾಭವನ್ನು ಗಳಿಸಿತ್ತು. ಇದೀಗ ಕಾಂತಾರ 2 ಸಿನಿಮಾ ವಿಭಿನ್ನವಾಗಿ ನಿರ್ಮಾಣಗೊಳ್ಳುತ್ತಿದ್ದು, ಇದೇ ವರ್ಷ ಸಿನಿಮಾ ತೆರೆಗೆ ಬರಲಿದೆ.

Kantara 2 movie as Trouble Panjurli Daiva warns actor Actor Rishab Shetty in Kannada News

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular