ಭಾನುವಾರ, ಏಪ್ರಿಲ್ 27, 2025
HomeCinemaಶೀಘ್ರದಲ್ಲೇ ಕಾಂತಾರ 2 ಚಿತ್ರೀಕರಣ ಆರಂಭ : ರಿಷಬ್‌ ಶೆಟ್ಟಿ

ಶೀಘ್ರದಲ್ಲೇ ಕಾಂತಾರ 2 ಚಿತ್ರೀಕರಣ ಆರಂಭ : ರಿಷಬ್‌ ಶೆಟ್ಟಿ

- Advertisement -

ನಟ ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗಿ, ಸೂಪರ್‌ಹಿಟ್‌ ಆಗಿದೆ. ಈ ಸಿನಿಮಾದಿಂದ ರಿಷಬ್‌ ಶೆಟ್ಟಿ ಕೇವಲ ನಟನಾಗಿ ಮಾತ್ರವಲ್ಲದೇ, ಉತ್ತಮ ನಿರ್ದೇಶಕನಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಸದ್ಯ ಅವರು ಕಾಂತಾರ 2 ಸಿನಿಮಾ ಕಥೆ (Kantara 2 Movie) ಬರವಣೆಗೆಯಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ತಿಂಗಳ ಹಿಂದೆಷ್ಟೇ ಅವರು ಕಾಂತಾರ ಸಿನಿಮಾದ ಪ್ರೀಕ್ವೆಲ್‌ಗೆ ಸ್ಕ್ರಿಪ್ಟ್‌ ಬರೆಯಲು ಆರಂಭಿಸಿದ್ದರು. ಸದ್ಯ ಅಭಿಮಾನಿಗಳಿಗೆ ಸಿಹಿ ಸುದ್ಧಿ ಒಂದು ಸಿಕ್ಕಿದೆ. ವರದಿಗಳ ಪ್ರಕಾರ, ಕಾಂತಾರ 2 ಸಿನಿಮಾದ ಮೊದಲ ಭಾಗದ ಕಥೆಯನ್ನು ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್‌ ಖುಷಿ ಪಟ್ಟಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಕಾಂತಾರ ಸಿನಿಮಾಕ್ಕೆ ರಿಷಬ್‌ ಶೆಟ್ಟಿ ನಿರ್ದೇಶನದ ಜೊತೆಯಲಿ ಮೂಖ್ಯಭೂಮಿಕೆಯಲ್ಲಿ ಕೂಡ ಅಭಿನಯಿಸಿದ್ದಾರೆ. ಇನ್ನು ನಾಯಕಿ ನಟಿಯಾಗಿ ಸಪ್ತಮಿ ಗೌಡ ಅಭಿನಯಿಸಿದ್ದಾರೆ. ಕಾಂತಾರ ಸಿನಿಮಾದ ಯಶಸ್ಸು ಕಂಡ ಬಳಿಕ ಅವರು ಎರಡನೇ ಪಾರ್ಟ್‌ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಕಾಂತಾರ 2 ಸಿನಿಮಾದ ಬಹುತೇಕ ಫೈನಲ್‌ ಆಗಿದೆ ಎಂದು ಮೂಲಗಳು ಹೇಳಿವೆ.

ರಿಷಬ್‌ ಶೆಟ್ಟಿ ಹಾಗೂ ಸಿನಿತಂಡ ಕಾಂತಾರ 2 ಮೊದಲ ಭಾಗದ ಕಥೆ ಬಗ್ಗೆ ತೃಪ್ತಿ ಇದೆ ಎಂದಿದ್ದಾರೆ. ಕಥೆ ಬಗ್ಗೆ ಹೆಚ್ಚಿನ ಕಾಳಜಿವಹಿಸಿದ್ದು, ಬದಲಾವಣೆ ಅಗತ್ಯವಿದ್ದಾಗ ಎಲ್ಲರ ಒಪ್ಪಿಗೆ ಮೇಲೆ ಮತ್ತೆ ಸ್ಕ್ರಿಪ್ಟ್‌ ಸರಿಪಡಿಸಿ ಫೈನಲ್‌ ಮಾಡಲಾಗಿದೆ. ಇದರ ಜೊತೆಗೆ ಸಿನಿಮಾ ಶೂಟಿಂಗ್ ಸ್ಥಳ ಹುಡುಕುವ ಕೆಲಸ ಕೂಡ ಆಗಲಿದೆ. ಮಳೆಗಾಲದಲ್ಲಿ ‘ಕಾಂತಾರ 2’ ಚಿತ್ರಕ್ಕೆ ಶೂಟಿಂಗ್ ಆರಂಭ ಆಗುವ ನಿರೀಕ್ಷೆ ಇದೆ. ‘ಕಾಂತಾರ’ ಕ್ಲೈಮ್ಯಾಕ್ಸ್ ನೋಡಿದ ಅನೇಕರಿಗೆ ಈ ಸಿನಿಮಾಕ್ಕೆ ಸೀಕ್ವೆಲ್ ಬರಲಿದೆ ಎನ್ನುವ ಊಹೆ ಇತ್ತು. ಬಳಿಕ ಇದನ್ನು ಸಿನಿತಂಡದವರೇ ಘೋಷಣೆ ಮಾಡಿದರು. ಈ ಮೊದಲು ಸ್ಕ್ರಿಪ್ಟ್ ಕೆಲಸ ಆರಂಭಿಸಿರುವದಾಗಿ ರಿಷಬ್ ಶೆಟ್ಟಿ ಹೇಳಿದ್ದರು. ಈಗ ಕೆಲವೇ ತಿಂಗಳಲ್ಲಿ ಅವರು ಮೊದಲ ಹಂತದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ : ಮಗಳು ಹುಟ್ಟಿದಾಗ ಸಿಹಿ ಹಂಚಲು ಕಾಸಿರಲಿಲ್ಲ : ವಿಕೇಂಡ್ ಟೆಂಟ್ ನಲ್ಲಿ ರಿವೀಲ್ ಆಯ್ತು ನಟ ಪ್ರೇಮ್ ಕಣ್ಣೀರ ಕಹಾನಿ

ಇದನ್ನೂ ಓದಿ : ವಿನಯ್‌ ರಾಜ್‌ಕುಮಾರ್‌ಗೆ ಹುಟ್ಟುಹಬ್ಬ ಸಂಭ್ರಮ : ವಿಶೇಷವಾಗಿ ಹಾರೈಸಿದ ಒಂದು ಸರಳ ಪ್ರೇಮಕಥೆ ಸಿನಿತಂಡ

ಕಾಂತಾರ ಸಿನಿಮಾ ಸೀಕ್ವೆಲ್ ಸಿದ್ಧಗೊಳ್ಳೋದು ಸಾಮಾನ್ಯ. ಆದರೆ, ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾಕ್ಕೆ ಮಾಡುತ್ತಿರೋದು ಪ್ರೀಕ್ವೆಲ್​. ಅಂದರೆ, ಈಗ ನೋಡಿದ ಕಥೆಯ ಹಿಂದೆ ಏನಾಗಿತ್ತು ಎಂಬುದು ತೆರೆಮೇಲೆ ಬರಲಿದೆ. ಈ ವಿಚಾರದಲ್ಲಿ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇದೆ. ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Kantara 2 Movie : Shooting of Kantara 2 will start soon : Rishabh Shetty

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular