ಭಾನುವಾರ, ಏಪ್ರಿಲ್ 27, 2025
HomeCinemaKantara Rishab Shetty : ಕಾಂತಾರ ಬಳಿಕ ಖುಲಾಯಿಸಿತು ರಿಶಬ್ ಅದೃಷ್ಟ: ಬಾಲಿವುಡ್ ಸಿನಿಮಾಗೂ ಬರ್ತಿದೆ...

Kantara Rishab Shetty : ಕಾಂತಾರ ಬಳಿಕ ಖುಲಾಯಿಸಿತು ರಿಶಬ್ ಅದೃಷ್ಟ: ಬಾಲಿವುಡ್ ಸಿನಿಮಾಗೂ ಬರ್ತಿದೆ ಆಫರ್

- Advertisement -

ಕೆಲ ವರ್ಷಗಳ ಹಿಂದೆ ಸಿನಿಮಾದಲ್ಲಿ ಅವಕಾಶಕ್ಕಾಗಿ, ಸಿನಿಮಾ ಪ್ರದರ್ಶನದ ಥಿಯೇಟರ್ ಗಾಗಿ ಪರದಾಡುವ ಸ್ಥಿತಿಯಲ್ಲಿದ್ದ ನಟ, ನಿರ್ದೇಶಕ ರಿಶಬ್ ಶೆಟ್ಟಿ (Kantara Rishab Shetty) ಈಗ ಕಾಂತಾರ ಸಿನಿಮಾದ ಮೂಲಕ ವಿಶ್ವದಾದ್ಯಂತ ಮನೆಮಾತಾಗಿದ್ದಾರೆ. ಕಾಂತಾರ ಯಶಸ್ಸು ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಎನ್ನಿಸುವಂತೆ ಮಾಡಿದೆ. ಈ ಮಧ್ಯೆ ಯಶಸ್ವಿ ನಾಯಕ‌ ಎನ್ನಿಸಿಕೊಂಡಿರೋ ರಿಶಬ್ ಶೆಟ್ಟಿ ಗೆ ಈಗ ಅವಕಾಶಗಳ ಸುರಿಮಳೆಯೇ ಸುರಿಯಲಾರಂಭಿಸಿದ್ದು ಮಾಯಾನಗರಿ ಮುಂಬೈನ ಬಾಲಿವುಡ್ ಬಾಗಿಲು ಕೂಡ ತೆರೆದಿದೆ.

ಹೌದು ಕರಾವಳಿಯ ಅಪ್ಪಟ ಗ್ರಾಮೀಣ ಸೊಗಡನ್ನು ವಿಶ್ವಕ್ಕೆ ಪರಿಚಯಿಸಿದ ನಟ ಹಾಗೂ ನಿರ್ದೇಶಕ ರಿಶಬ್ ಶೆಟ್ಟಿ ನೂರಾರು ಅಡೆತಡೆಗಳ ಮಧ್ಯೆಯೂ ಸದ್ದು ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದು ನಿಂತಿರೋ ರಿಶಬ್ ಗೆ ಮೊನ್ನೆ ಮೊನ್ನೆಯಷ್ಟೇ ಟಾಲಿವುಡ್‌ ನಿಂದ ಆಫರ್ ಬಂದಿತ್ತು. ಈಗ ಬಾಲಿವುಡ್ ನಿಂದಲೂ ಅಧಿಕೃತ ಆಹ್ವಾನ‌ ಬಂದಿದೆಯಂತೆ.

ಈ ವಿಚಾರವನ್ನು ಸ್ವತಃ ನಟ ರಿಶಬ್ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನನಗೆ ಬಾಲಿವುಡ್ ಮತ್ತು ಟಾಲಿವುಡ್‌ ಎರಡರಿಂದಲೂ ದೊಡ್ಡ ಆಫರ್ ಬಂದಿರೋದು ನಿಜ. ಆದರೆ ಸದ್ಯಕ್ಕೆ ನಾನು ಬೇರಾವುದೇ ಭಾಷೆಯ ಸಿನಿಮಾದಲ್ಲಿ‌‌ ನಟಿಸುತ್ತಿಲ್ಲ. ನನಗೆ ಕನ್ನಡದಲ್ಲೇ ಮಾಡಲು ಬೇಕಷ್ಟು ಕೆಲಸಗಳಿವೆ.‌ ಇನ್ನಷ್ಟು ಸಿನಿಮಾ ಮಾಡುವ ಕನಸಿದೆ. ಹೀಗಾಗಿ ಇಲ್ಲಿಯೇ ಇದ್ದುಕೊಂಡು ಇನ್ನಷ್ಟು ಸಿನಿಮಾ‌ ಮಾಡುತ್ತೇನೆ. ಕನ್ನಡದ ಸಿನಿಮಾಗಳನ್ನೇ ಬೇರೆ ಭಾಷಿಕರು ನೋಡಲಿ ಅನ್ನೋದು ನನ್ನ ಆಸೆ ಎಂದಿದ್ದಾರೆ.

ಅಲ್ಲದೇ ತಮ್ಮ ಸಿನಿಮಾವನ್ನು ಮೆಚ್ಚಿಕೊಂಡು ಬಾಲಿವುಡ್ ದಿಗ್ಗಜರ ಸಿನಿ‌ಸಾಧನೆಯನ್ನು ಕೊಂಡಾಡಿದ ರಿಶಬ್ ನನಗೆ ಎಲ್ಲ ಚಿತ್ರರಂಗದ ಮೇಲೂ ಗೌರವ ಹಾಗೂ ಪ್ರೀತಿ ಇದೆ. ಆದರೆ ಕನ್ನಡ ಸಿನಿಮಾದ ಮೇಲೆ ವಿಶೇಷ ಅಭಿಮಾನವಿದೆ. ಕನ್ನಡ ಸಿನಿಮಾವನ್ನೇ ಎಲ್ಲರೂ‌ನೋಡಲಿ ಎಂಬ ಆಶಯದ ಜೊತೆ ನಾನು ಮುಂದಿನ ಸಿನಿಮಾಗಳಿಗೆ ಅಣಿಯಾಗುತ್ತಿದ್ದೇನೆ ಎಂದಿದ್ದಾರೆ.

ಸದ್ಯ ರಿಶಬ್ ಶೆಟ್ಟಿ ಕನ್ನಡದಲ್ಲೂ ತಮ್ಮ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಸದ್ಯ ಕಾಂತಾರ ಸಿನಿಮಾ ಹೊಸ ಹೊಸ ದಾಖಲೆ‌ಬರೆಯುತ್ತ ಸಾಗಿದ್ದು ಬಾಲಿವುಡ್ ನಲ್ಲೇ 50 ಕೋಟಿ ಗಳಿಸುವ ಮೂಲಕ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಕಾಂತಾರ 300 ಕೋಟಿ ಗಳಿಕೆ ಕಂಡಿದ್ದು ಹೊಸ ದಾಖಲೆಯತ್ತ ಮುನ್ನುಗಿದೆ.

ಇದನ್ನೂ ಓದಿ : ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಉಡುಂಬಾ ನಿರ್ದೇಶಕ ಶಿವರಾಜ್ ತಯಾರಿ – ಶೀಘ್ರದಲ್ಲೇ ಟೈಟಲ್ ರಿವೀಲ್

ಇದನ್ನೂ ಓದಿ : S.P. Sangliyana- 2: ಶಂಕರ್ ನಾಗ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಬಿಗ್ ಸ್ಕ್ರೀನ್ ಮೇಲೆ ಮತ್ತೆ ಬರಲಿದ್ದಾರೆ ಕರಾಟೆ ಕಿಂಗ್

Kantara Rishab Shetty luck He got an offer for a Bollywood movie

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular