Kanyakumari actress Rashmitha : ಕನ್ನಡ ಕಿರುತೆರೆಯಲ್ಲಿ ಸಧ್ಯ ಸಾಲು ಸಾಲು ವಿವಾಹಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೇ ರಾಜಾ – ರಾಣಿ ಧಾರವಾಹಿ ಖ್ಯಾತಿಯ ಲಾವಣ್ಯ ಹಾಗೂ ಶಶಿ ಹೆಗ್ಡೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ಯಾ ಕುಮಾರಿ ಧಾರವಾಹಿ ಖ್ಯಾತಿಯ ರಶ್ಮಿತಾ ಜೆ ಶೆಟ್ಟಿ ನಿರ್ದೇಶಕ ಹೊನ್ನೇಶ್ ಜೊತೆಯಲ್ಲಿ ವಿವಾಹವಾಗಿದ್ದಾರೆ. ಬೆಂಗಳೂರಿನ ಕನ್ವೆನ್ಶನ್ ಹಾಲ್ನಲ್ಲಿ ನಡೆದ ರಶ್ಮಿತಾ ಹಾಗೂ ಹೊನ್ನೇಶ್ ವಿವಾಹ ಕಾರ್ಯಕ್ರಮದಲ್ಲಿ ಕನ್ಯಾಕುಮಾರಿ ಧಾರವಾಹಿ ತಂಡ ಸೇರಿದಂತೆ ಸಾಕಷ್ಟು ಕಿರುತೆರೆ ತಾರೆಯರು ಕಾಣಿಸಿಕೊಂಡರು.
ರಶ್ಮಿತಾ ಹಾಗೂ ಹೊನ್ನೇಶ್ ದಂಪತಿ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಆರತಕ್ಷತೆ ಕಾರ್ಯಕ್ರಮದಲ್ಲಿ ಹೊನ್ನೇಶ್ ಸೂಟ್ನಲ್ಲಿ ಕಾಣಿಸಿಕೊಂಡರೆ ನಟಿ ರಶ್ಮಿತಾ ಕೆಂಪು ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದರು.
ರಶ್ಮಿತಾ ಹಾಗೂ ಹೊನ್ನೇಶ್ ಆರತಕ್ಷತೆ ಕಾರ್ಯಕ್ರಮದ ಫೋಟೋಗಳು ಹೊರಬೀಳುವವರೆಗೂ ಇವರಿಬ್ಬರೂ ಮದುವೆಯ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಂತೆ ಕಂಡಿಲ್ಲ. ರಶ್ಮಿತಾ ಹಾಗೂ ಹೊನ್ನೇಶ್ ಈವರೆಗೆ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಫೋಟೋಗಳನ್ನು ಶೇರ್ ಮಾಡಿಲ್ಲ. ಆದರೆ ಕನ್ಯಾಕುಮಾರಿ ಧಾರವಾಹಿಯ ಕೆಲ ತಾರೆಯರು ಆರತಕ್ಷತೆಯ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದು ಇದನ್ನು ನೋಡಿದರೆ ಆರತಕ್ಷತೆ ಸಖತ್ ಗ್ರ್ಯಾಂಡ್ ಆಗಿ ನಡೆದಿರುವಂತೆ ಕಾಣುತ್ತಿದೆ.
ರಶ್ಮಿತಾ ಹಾಗೂ ಹೊನ್ನೇಶ್ ನಿನ್ನೆ ಆರತಕ್ಷತೆ ಕಾರ್ಯಕ್ರಮವನ್ನು ಮಾಡಿಕೊಂಡರೆ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಆರತಕ್ಷತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕನ್ಯಾಕುಮಾರಿ ಧಾರವಾಹಿಯ ತಾರೆಯರು ಆಕರ್ಷಕ ಉಡುಪಿನಲ್ಲಿ ಕಂಗೊಳಿಸಿದರು.
ಕನ್ನಡ ಟೆಲಿ ಇಂಡಸ್ಟ್ರಿಯಲ್ಲಿ ಮದುವೆ ಸೀಸನ್ ನಡೆಯುತ್ತಿದೆ. ಕಳೆದ ಕೆಲ ತಿಂಗಳಲ್ಲಿ ಅನೇಕ ಸೆಲೆಬ್ರಿಟಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದಿನ ವಾರ ಸಾಗರ್-ದೀಪಾ, ನಿನಾದ್ ಹರಿತ್ಸಾ – ರಮ್ಯಾ, ಐಶ್ವರ್ಯ – ವಿನಯ್, ಲಾವಣ್ಯ – ಶಶಿ ಹೆಗ್ಡೆ ಸೇರಿದಂತೆ ಸಾಕಷ್ಟು ತಾರೆಯರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಇದನ್ನು ಓದಿ : Kerala HC Reunites Lesbian : ಪೋಷಕರ ಒತ್ತಡದಿಂದ ದೂರಾದ ಸಲಿಂಗಕಾಮಿಗಳನ್ನು ಒಂದುಗೂಡಿಸಿದ ಕೇರಳ ಹೈಕೋರ್ಟ್
ಇದನ್ನೂ ಓದಿ : rape hubby’s friend :ಪತಿಯೊಂದಿಗೆ ಸಲುಗೆಯಿಂದಿದ್ದ ಮಹಿಳೆಯ ಮೇಲೆ ಗ್ಯಾಂಗ್ರೇಪ್ಗೆ ಸುಪಾರಿ ಕೊಟ್ಟ ಪತ್ನಿ
Kanyakumari actress Rashmitha J Shetty gets married to director Honnesh