ದೇಶದ ಎಲ್ಲಾ ಕಾಮಿಡಿ ಶೋಗಳ ತೂಕ ಒಂದಾದರೇ ಕಪಿಲ್ ಶರ್ಮಾ (Kapil Sharma show ) ನಡೆಸಿಕೊಡೋ ಕಪಿಲ್ ಶರ್ಮಾ ಶೋಕ್ಕಿರೋ ಬೆಲೆಯೇ ಬೇರೆ. ಬಾಲಿವುಡ್ ಸೆಲೆಬ್ರೆಟಿಗಳು ಕಪಿಲ್ ಶರ್ಮಾ ಶೋದಲ್ಲಿ ಎಂಟ್ರಿ ಪಡೆದುಕೊಳ್ಳಲು ಕಾಯುತ್ತಿರುತ್ತಾರೆ ಅನ್ನೋದು ಸುಳ್ಳಲ್ಲ. ಇಂಥ ಕಾಮಿಡಿ ಶೋ ಈಗ ಸ್ಥಗಿತಗೊಳ್ಳಲಿದೆ. ಈ ಸಂಗತಿ ಈಗ ಕಪಿಲ್ ಶರ್ಮಾ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಬಾಲಿವುಡ್ ಹಾಗೂ ಹಿಂದಿ ಕಿರುತೆರೆ ಎರಡರಲ್ಲೂ ಛಾಪು ಮೂಡಿಸಿರುವ ಶೋ ಕಪಿಲ್ ಶರ್ಮಾ ಕಾಮಿಡಿ ಶೋ. ಆದರೆ ಈಗ ಈ ಶೋ ಸ್ಥಗಿತಗೊಳ್ಳುತ್ತಿದ್ದು ಅಭಿಮಾನಿಗಳಿಗೆ ಶಾಕ್ ಎದುರಾಗಿದೆ.
ಆದರೆ ಇದು ತಾತ್ಕಾಲಿಕವಾದ ಸ್ಥಿತಿ ಅನ್ನೋದು ಸಮಾಧಾನದ ಸಂಗತಿ. ಹೌದು, ಟಿಆರ್‌ಪಿ ಟಾಪ್ ಹಂತದಲ್ಲಿರೋ ಕಾಮಿಡಿ ಶೋ ಕಪಿಲ್ ಶರ್ಮಾ ಶೋ ಕೆಲ ದಿನಗಳ ಅವಧಿಗೆ ಸ್ಥಗಿತಗೊಳ್ಳಲಿದೆ. ಕಪಿಲ್ ಶರ್ಮಾ ಶೋ ದ ಜೀವಾಳವಾಗಿರೋ ಕಪಿಲ್ ಶರ್ಮಾ ಕೆಲ ದಿನಗಳ ಕಾಲ ವಿದೇಶ ಪ್ರವಾಸಕ್ಕೆ ಹಾರುತ್ತಿದ್ದಾರೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಶೋ ಸ್ಥಗಿತಗೊಳ್ಳಲಿದೆ.
ಆದರೆ ಈ ಶೋ ವಿದೇಶದಿಂದಲೂ ಲೈವ್ ಟೆಲಿಕಾಸ್ಟ್ ಆಗಲಿದೆ ಎನ್ನಲಾಗ್ತಿದೆ. ಈ ಹಿಂದೆಯೂ ನಿರೂಪಕ ಕಪಿಲ್ ಶರ್ಮಾ (Kapil Sharma show) ವಿದೇಶಕ್ಕೆ ತಮ್ಮ ಟೀಂ ಜೊತೆ ತೆರಳಿ ಅಲ್ಲಿಂದಲೇ ಲೈವ್ ಶೋ ಮಾಡಿದ್ದರು. ಈ ಭಾರಿಯೂ ಕೆನಡಾ, ಅಮೇರಿಕಾ ಸೇರಿದಂತೆ ಹಲವು ಕಡೆಗಳಿಂದ ಕಪಿಲ್ ಶರ್ಮಾ ಶೋ ಲೈವ್ ಟೆಲಿಕ್ಯಾಸ್ಟ್ ಆಗಲಿದೆ. ಈ ಹಿಂದೆ ಕೆಲವು ಸಲ ಕಪಿಲ್ ಶರ್ಮಾ ಶೋ ಸ್ಥಗಿತಗೊಳಿಸಿದಾಗ ನಟ ಆರ್ಶದ್ ವಾರ್ಸಿ ಸೇರಿದಂತೆ ಹಲವರು ಶೋ ನಿರೂಪಣೆ ಮಾಡಿದ್ದರು. ಆದರೆ ಈ ಭಾರಿ ಮಾತ್ರ ಶೋವನ್ನು ಬೇರೆ ನಿರೂಪಕರ ಕೈಗೆ ಕೊಡೋ ಬದಲು ಸ್ಥಗಿತಗೊಳಿಸಿಯೇ ಹೋಗೋ ಪ್ಲ್ಯಾನ್ ಮಾಡಿದ್ದಾರಂತೆ ನಟ ಕಪಿಲ್.
ಕೆಲ ಸಮಯದ ಹಿಂದೆ ಕಪಿಲ್ ಶರ್ಮಾ (Kapil Sharma show) ತಮ್ಮ ವೈಯಕ್ತಿಕ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಹೋಗಿದ್ದರು. ಈ ವೇಳೆಯೂ ಶೋ ನಡೆಸದೇ ಕಪಿಲ್ ಗೈರಾಗಿದ್ದರು. ಬಳಿಕ ಚಿಕಿತ್ಸೆ ಪಡೆದುಕೊಂಡ ಕಪಿಲ್ ಶೋ (Kapil Sharma show) ಮುಂದುವರೆಸಿದ್ದರು. ಅಮಿತಾಬ್ ಬಚ್ಚನ್ ಸೇರಿದಂತೆ, ದೀಪಿಕಾ ಪಡುಕೋಣೆ, ಎ.ಆರ್.ರೆಹಮಾನ್ ಸೇರಿದಂತೆ ಬಾಲಿವುಡ್ ನ ಬಹುತೇಕ ಸೆಲಿಬ್ರೇಟಿಗಳು ಕಪಿಲ್ ಶೋಗೆ ಬಂದಿದ್ದಾರೆ. ಮಾತ್ರವಲ್ಲ ಸೌತ್ ನಿಂದ ಸುದೀಪ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಈ ಶೋ ನಲ್ಲಿ ಪಾಲ್ಗೊಂಡಿದ್ದಾರೆ. ಈಗ ಶೋ ಸ್ಥಗಿತಗೊಳ್ತಿರೋದು ಸೆಲೆಬ್ರೆಟಿಗಳಿಗೂ ಶಾಕ್ ತಂದಿದೆ.
ಇದನ್ನೂ ಓದಿ : ಕೊನೆಗೂ ರಟ್ಟಾಯ್ತು ಖ್ಯಾತ ನಟಿಯ ಗುಟ್ಟು : ಕಮಲ್ ಪುತ್ರಿ ಕೈಹಿಡಿದಿದ್ದ್ಯಾರು ಗೊತ್ತಾ
ಇದನ್ನೂ ಓದಿ : ಮತ್ತೊಮ್ಮೆ ಸ್ನೇಹಕ್ಕೆ ಮಿಡಿದ ಸುದೀಪ್ : ವಿಕ್ರಾಂತ್ ರೋಣಾ ಜಾನಿ ಮಾಸ್ಟರ್ ಗೆ ಕೊಟ್ಟರು ಮಹಿಂದ್ರಾ ಥಾರ್
( Kapil Sharma show breakdown for Bollywood comedy lovers)