ರಾಜ್ಯವೂ ಸೇರಿದಂತೆ ವಿಶ್ವದಾದ್ಯಂತ ಮಾರ್ಚ್ 17 ರ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದಂದು ಜೇಮ್ಸ್ ಸಿನಿಮಾ ತೆರೆಕಂಡಿದೆ. ನಾಲ್ಕು ಸಾವಿರಕ್ಕೂ ಅಧಿಕ ಸ್ಕ್ರಿನ್ ಗಳಲ್ಲಿ ಪ್ರದರ್ಶನ ಕಾಣ್ತಿರೋ ಸಿನಿಮಾಗೆ ಕರ್ನಾಟಕದಲ್ಲಿ ತೆರಿಗೆ ವಿನಾಯ್ತಿ ಘೋಷಿಸಬೇಕೆಂಬ ಒತ್ತಡ ಎಲ್ಲೆಡೆಯಿಂದ ವ್ಯಕ್ತವಾಗುತ್ತಿದೆ. ವರನಟ ರಾಜ್ ಕುಮಾರ್ ಪುತ್ರ, ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಅಕಾಲಿಕವಾಗಿ ನಿಧನರಾಗಿ ಈಗಾಗಲೇ ನಾಲ್ಕು ತಿಂಗಳು ಕಳೆದಿದೆ. ಆದರೆ ಇನ್ನೂ ಶೋಕಾಚರಣೆ ನಿಂತಿಲ್ಲ. ಇನ್ನು ಅಪ್ಪು ನಿಧನರಾಗೋ ವೇಳೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದ ಜೇಮ್ಸ್ (James Cinema ) ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದರು.
ಕೊನೆಗೂ ಡಬ್ಬಿಂಗ್ ಸೇರಿದಂತೆ ಎಲ್ಲ ಪ್ರೊಸೆಸ್ ಗಳನ್ನು ಮುಗಿಸಿದ ಜೇಮ್ಸ್ ಸಿನಿಮಾ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದಂದೇ ತೆರೆ ಕಂಡಿದೆ. ಇದು ಅಗಲಿದ ಅಪ್ಪುಗೆ ನಾವು ಸಲ್ಲಿಸುವ ಟ್ರಿಬ್ಯೂಟ್ ಎಂದಿದ್ದಾರೆ ನಿರ್ದೇಶಕ ಚೇತನ್. ಈ ಮಧ್ಯೆ ಅಪ್ಪು ಕೊನೆ ಸಿನಿಮಾ ಆಗಿರೋ ಜೇಮ್ಸ್ ಗೆ (James Cinema ) ತೆರಿಗೆ ವಿನಾಯ್ತಿ ನೀಡಬೇಕೆಂಬ ಒತ್ತಡ ಎಲ್ಲೆಡೆಯಿಂದ ಕೇಳಿಬಂದಿದೆ. ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರು ಅಪ್ಪು ಸಿನಿಮಾಗೆ ಟ್ಯಾಕ್ಸ್ ವಿನಾಯ್ತಿ ನೀಡಿ ಎಂದಿದ್ದಾರೆ.
ಈ ಬಗ್ಗೆ ಬುಧವಾರ ಮಾತನಾಡಿದ್ದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಅಪ್ಪು ವ್ಯಕ್ತಿತ್ವ ಮಾದರಿಯಾಗಿತ್ತು. ಅವರ ಸಮಾಜಮುಖಿಯಾಗಿ ಬೆಳೆದು ನಿಂತ ಪುನೀತ್ ಗೆ ಗೌರವ ಸಲ್ಲಿಸಲು ಅವರ ಕೊನೆಯ ಸಿನಿಮಾಗೆ ತೆರಿಗೆ ವಿನಾಯ್ತಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದಲ್ಲದೇ ಹಲವು ಕನ್ನಡ ಪರ ಸಂಘಟನೆಗಳು ಅಪ್ಪು ಗೌರವಾರ್ಥ ಜೇಮ್ಸ್ ಗೆ ತೆರಿಗೆ ವಿನಾಯ್ತಿ ನೀಡಬೇಕೆಂದು ಒತ್ತಾಯಿಸಿದೆ. ಜೇಮ್ಸ್ ಸಿನಿಮಾ (James Cinema ) ಬಿಡುಗಡೆ ಬಳಿಕ ಈ ಒತ್ತಾಯಕ್ಕೆ ಪ್ರತಿಕ್ರಿಯಿಸಿರೋ ಸಚಿವ ಆರ್.ಅಶೋಕ್, ಜೇಮ್ಸ್ ಗೆ (James Cinema ) ತೆರಿಗೆ ವಿನಾಯ್ತಿ ನೀಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಹೀಗಾಗಿ ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಕೆಜಿಎಫ್ ದಾಖಲೆ ಮುರಿದ ಜೇಮ್ಸ್: ಟಿವಿ ರೈಟ್ಸ್ ದಾಖಲೆಯ ಮೊತ್ತಕ್ಕೆ ಮಾರಾಟ
ನಾನು ಎಲ್ಲೆಡೆಯೂ ಪುನೀತ್ ಗಾಗಿ ನಡೆಯುತ್ತಿರುವ ಸಂಭ್ರಮವನ್ನು ನೋಡಿದೆ.ಮಧ್ಯರಾತ್ರಿ ನಡೆದ ಸಂಭ್ರಮಾಚರಣೆಯನ್ನು ನಾನು ಗಮನಿಸಿದ್ದೇನೆ. ಯಾವುದೇ ವ್ಯಕ್ತಿ ಸತ್ತ ಮೇಲೆ ಜನ ಅವರನ್ನು ನೆನೆಪಿಸಿಕೊಳ್ಳೋದಿಲ್ಲ. ಆದರೆ ಪುನೀತ್ ರಾಜ್ ಕುಮಾರ್ ರನ್ನು ಜನ ಇಂದಿಗೂ ಮರೆತಿಲ್ಲ. ಇದೆ ಅವರ ವ್ಯಕ್ತಿತ್ವಕ್ಕೆ ಸಿಗ್ತಿರೋ ಗೌರವ. ನಾವು ಸರ್ಕಾರದಿಂದ ಅವರಿಗೆ ಕರ್ನಾಟಕ ರತ್ನ ಘೋಷಿಸಿದ್ದೇವೆ. ಸದ್ಯದಲ್ಲೇ ಪ್ರಶಸ್ತಿ ಪ್ರಧಾನವೂ ನಡೆಯಲಿದೆ ಎಂದು ಅಶೋಕ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಊಟ ಸೇರುತ್ತಿಲ್ಲ, ನಿದ್ದೆ ಬರುತ್ತಿಲ್ಲ ಎಂದ ಸಲಾರ್ ಬೆಡಗಿ ಶ್ರುತಿ ಹಾಸನ್
( Karnataka Government Shortly Declared Tax exemption for James Cinema)