ಸೋಮವಾರ, ಏಪ್ರಿಲ್ 28, 2025
HomeCinemaಬಗೆದಷ್ಟು ಬಯಲಾಗ್ತಿದೆ ಡ್ರೋನ್ ಪ್ರತಾಪನ ವಂಚನೆ ಜಾಲ…! ಸಿನಿಮಾ ನಿರ್ದೇಶಕರಿಗೆ ಪ್ರತಾಪ ವಂಚಿಸಿದ್ದೆಷ್ಟು ಗೊತ್ತಾ..?!

ಬಗೆದಷ್ಟು ಬಯಲಾಗ್ತಿದೆ ಡ್ರೋನ್ ಪ್ರತಾಪನ ವಂಚನೆ ಜಾಲ…! ಸಿನಿಮಾ ನಿರ್ದೇಶಕರಿಗೆ ಪ್ರತಾಪ ವಂಚಿಸಿದ್ದೆಷ್ಟು ಗೊತ್ತಾ..?!

- Advertisement -

ಮಂಡ್ಯ:  ಡ್ರೋನ್ ಹಾರಿಸೋದಾಗಿ ಜನರನ್ನು ನಂಬಿಸಿ ಕಲರ್ ಕಲರ್ ಕಾಗೆ ಹಾರಿಸಿದ್ದ ಯುವವಿಜ್ಞಾನಿ ಖ್ಯಾತಿಯ ಡ್ರೋನ್ ಪ್ರತಾಪ್ ನ ವಂಚನೆ ಬಗೆದಷ್ಟು ಬಯಲಾಗ್ತಿದೆ. ತಾನೊಬ್ಬ ಸಾಧಕ, ಯುವವಿಜ್ಞಾನಿ ಎಂದೆಲ್ಲ ಹೇಳಿಕೊಂಡ ನೂರಾರು ಜನರನ್ನು ವಂಚಿಸಿದ್ದ ಡ್ರೋನ್ ಪ್ರತಾಪ್  ಸಿನಿಮಾ ಹೆಸರಿನಲ್ಲಿ ನಿರ್ದೇಶಕರೊಬ್ಬರಿಗೂ ವಂಚಿಸಿರೋದು ಬೆಳಕಿಗೆ ಬಂದಿದೆ.

ಡ್ರೋನ್ ಪ್ರತಾಪನ ಕಟ್ಟುಕತೆಗಳನ್ನು ಸತ್ಯವೆಂದೇ ನಂಬಿದ್ದ ಸಿನಿಮಾ ನಿರ್ದೇಶಕ/ ನಿರ್ಮಾಪಕ ರಾಜಶೇಖರ್ ಆತನ ಮೇಲೆ ಸಿನಿಮಾ ನಿರ್ಮಿಸಲು ಮುಂದಾಗಿದ್ದರು. ಅಷ್ಟೇ ಅಲ್ಲ ಅದಕ್ಕಾಗಿ ರಾಜಶೇಖರ್ ಡ್ರೋನ್ ಪ್ರತಾಪ್ ಗೆ 1 ಲಕ್ಷ ರೂಪಾಯಿ ಅಡ್ವಾನ್ಸ್ ಕೂಡ ನೀಡಿದ್ದರಂತೆ.

ಸಿನಿಮಾ ನಿರ್ಮಾಣಕ್ಕೆ ಖುಷಿಯಿಂದಲೇ ಒಪ್ಪಿಕೊಂಡಿದ್ದ ಡ್ರೋನ್ ಪ್ರತಾಪ್ ಅವರಿಗೆ ಕಥೆ ಬರೆಯೋದರಲ್ಲೂ ಸಹಾಯ ಮಾಡಿದ್ದನಂತೆ. ಯಾವುದೇ ಸಿನಿಮಾ ಕತೆಗಾರನಿಗೂ ಕಡಿಮೆ ಇಲ್ಲದಂತೆ ಡ್ರೋನ್ ಪ್ರತಾಪ್ ಕತೆ ಬರೆಸಿದ್ದನಂತೆ.

ಮಾತ್ರವಲ್ಲ ಸಿನಿಮಾಗಾಗಿ ತಾನೇ ನಾಯಕ,ನಾಯಕಿ ಹಾಗೂ ಇತರ ಪಾತ್ರಧಾರಿಗಳನ್ನು ಆಯ್ಕೆ ಮಾಡಿಕೊಂಡಿದ್ದನಂತೆ. ಅಷ್ಟೇ ಅಲ್ಲ ಸಿನಿಮಾದ ಅಡ್ವಾನ್ಸ್ ಆಗಿ 2 ಲಕ್ಷ ರೂಪಾಯಿ ನೀಡಬೇಕು. ಸಿನಿಮಾದಿಂದ ಬರುವ ಆದಾಯದಲ್ಲಿ ಶೇಕಡಾ 20 ರಷ್ಟು ನನಗೆ ನೀಡಬೇಕೆಂದು  ಪ್ರತಾಪ್ ಒಪ್ಪಂದವನ್ನು ಮಾಡಿಕೊಡಿದ್ದನಂತೆ.

ಈಗ ಡ್ರೋನ್ ಪ್ರತಾಪ್ ನ ಕತೆ ಬಯಲಾಗುತ್ತಿದ್ದಂತೆ ಅಡ್ವಾನ್ಸ್ ಕೊಟ್ಟು ಕಂಗಾಲಾದ ನಿರ್ದೇಶಕರು ಆತನಿಗೆ ಹಿಡಿ ಶಾಪ ಹಾಕುತ್ತಿದ್ದು, ಆತನ ಮೇಲೆ ಯಾವುದೇ ಸಿನಿಮಾ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ಡ್ರೋನ್ ಪ್ರತಾಪ್ ಈಗ ಕುರಿ ಪ್ರತಾಪ್, ಕಾಗೆ ಪ್ರತಾಪ್ ಎನ್ನಿಸಿಕೊಂಡಿದ್ದು, ಈತನಿಂದ ಮೋಸಹೋದವರೆಲ್ಲ ಪಶ್ಚಾತಾಪ ಪಡುತ್ತಿದ್ದಾರೆ.

RELATED ARTICLES

Most Popular