ಮಂಗಳವಾರ, ಏಪ್ರಿಲ್ 29, 2025
HomeCinemaPuneeth - Bommai : ಸಾವಿಗೂ ಎರಡು ದಿನ ಮೊದಲು ಸಿಎಂಗೆ ಅಪ್ಪು ಕಾಲ್ :...

Puneeth – Bommai : ಸಾವಿಗೂ ಎರಡು ದಿನ ಮೊದಲು ಸಿಎಂಗೆ ಅಪ್ಪು ಕಾಲ್ : ಕರೆ ಮಾಡಿ ಕೇಳಿದ್ದೇನು ಗೊತ್ತಾ?

- Advertisement -

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ತಿಂಗಳಾಗುತ್ತ ಬಂದಿದ್ದರೂ ಇನ್ನೂ ಅಪ್ಪು ನೆನಪು, ಕನವರಿಗೆ ಕೊಂಚವೂ ಕಡಿಮೆಯಾಗಿಲ್ಲ. ಈ ಮಧ್ಯೆ ಮದಗಜ ಟ್ರೇಲರ್ ಲಾಂಚ್ ವೇಳೆ ಸಿಎಂ ಬೊಮ್ಮಾಯಿ ಪುನೀತ್ ತಮ್ಮಬಳಿ ಸಾವಿಗೂ ಎರಡು ದಿನ ಏನು ಮಾತಾಡಿದ್ದರೂ ಅನ್ನೋ ಇಂಟ್ರಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ.

ಶ್ರೀಮುರುಳಿ ನಟನೆಯ ಮದಗಜ ಸಿನಿಮಾದ ಟ್ರೇಲರ್ ಲಾಂಚ್ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. ಟ್ರೇಲರ್ ಲಾಂಚ್ ವೇಳೆ ಚಿತ್ರ ತಂಡ ಹಾಗೂ ಸಿಎಂ ಅಗಲಿದ ಅಪ್ಪುವನ್ನು ನೆನೆದು ಭಾವುಕರಾದರು. ಈ ವೇಳೆ ಸಿಎಂ ಬೊಮ್ಮಾಯಿ ತಮ್ಮ ಹಾಗೂ ಅಪ್ಪು ಒಡನಾಟವನ್ನು ನೆನಪಿಸಿಕೊಂಡರು. ಸಾವಿಗೂ ಎರಡು ದಿನ ಮೊದಲು ಪುನೀತ್ ನನಗೆ ಕಾಲ್ ಮಾಡಿದ್ದರು. ಮಾಮಾ ಟೂರಿಸಂ ವೆಬ್ ಸೈಟ್ ಮಾಡ್ತಿದ್ದೀನಿ.‌ಲಾಂಚ್ ಮಾಡೋಕೆ ಬರಬೇಕು ಎಂದಿದ್ದರು. ಆಗ ನಾನು ಮೊನ್ನೆಯಷ್ಟೇ ನಿಮ್ಮ ಕಾರ್ಯಕ್ರಮಕ್ಕೆ ನಾನು ಬಂದಿದ್ದೇನೆ. ಮತ್ಯಾಕೆ ಎಂದಿದ್ದೇ.

ಆದರೆ ಇದಕ್ಕೆ ಒಪ್ಪದ ಪುನೀತ್, ಇಲ್ಲ ನೀವೇ ಬರಬೇಕು. ಈ ಬಗ್ಗೆ ಮಾತಾಡೋಕೆ ಬರ್ತಿನಿ. ಟೈಂ ಕೊಡಿ. ಅರ್ಧ ಗಂಟೆ ಸಮಯ ಬೇಕು ಎಂದಿದ್ದರು. ನಾನು ಅಕ್ಟೋಬರ್ 29 ನೇ ತಾರೀಕು ಸಮಯ ನೀಡಿದ್ದೆ. ಆದರೆ ನನಗೂ‌ ಮೊದಲೇ ವಿಧಿ ಪುನೀತ್ ಗೆ ಅಪಾಯ್ಮೆಂಟ್ ನೀಡಿತ್ತು ಎಂದು ಸಿಎಂ ಬೊಮ್ಮಾಯಿ ನೊಂದು ಕೊಂಡಿದ್ದಾರೆ. ಅಲ್ಲದೇ ಪುನೀತ್ ಎಲ್ಲಿಯೂ ಹೋಗಿಲ್ಲ. ನಮ್ಮೆಲ್ಲರ ಹೃದಯಬಡಿತದಲ್ಲಿ ಪುನೀತ್ ಚಿರಸ್ಥಾಯಿಯಾಗಿರುತ್ತಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಇದೇ ವೇಳೆ ಟ್ರೇಲರ್ ಲಾಂಚ್ ಗೂ ಮುನ್ನ ಮದಗಜ ಚಿತ್ರತಂಡ ಪುನೀತ್ ಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಿತು. ಅಲ್ಲದೇ ಮಾಮಾ ಪುನೀತ್ ರನ್ನು ನೆನಪಿಸಿಕೊಂಡು ಕಣ್ಣಿರಿಟ್ಟರು. ಅಲ್ಲದೇ ಬೊಂಬೆ ಹೇಳುತೈತೆ ಹಾಡನ್ನು ಹಾಡಿದರು.

Actress Ashika Ranganath emotional talking about Puneeth Raj kumar

ಸಿನಿಮಾ ನಾಯಕಿ ಆಶಿಕಾ ರಂಗನಾಥ್ ಕೂಡ ಪುನೀತ್ ನೆನಪಿಸಿಕೊಂಡಿದ್ದು, ಅಪ್ಪು ಸರ್ ಇವತ್ತು ಇಲ್ಲಿ ಇರಬೇಕಿತ್ತು. ಅವರಿಲ್ಲ ಅನ್ನೋದನ್ನು ಒಪ್ಪಿಕೊಳ್ಳೋದೇ ಕಷ್ಟ ಎಂದು ಭಾವುಕರಾಗಿದ್ದಾರೆ.

ಇದನ್ನೂ ಓದಿ : ಪುನೀತ್‌ ನೆನೆದು ಬಾವುಕರಾದ ಆಶಿಕಾ : ಜೊತೆಯಾಗಿ ನಟಿಸೋ ಕನಸು ನನಸಾಗಲಿಲ್ಲ

ಇದನ್ನೂ ಓದಿ : ಪುನೀತ್‌ ಅಗಲಿಕೆಯ ನೋವಲ್ಲೂ ಅಭಿಮಾನಿಗಳ ಕಾಳಜಿ : ಪತ್ರದಲ್ಲಿ ಅಶ್ವಿನಿ ಹೇಳಿದ್ದೇನು ಗೊತ್ತಾ?

( Two days before his death, Puneeth Raj Kumar had called Cm Basavaraj Bommai . Do you know what he said at this time? )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular